ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಪಾಲಿ ವ್ಯಾಕರಣ

Author : ಶೋಭ. ಆರ್

₹ 50.00




Year of Publication: 2016
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಡಾ. ಬಿ.ಆರ್. ಅಂಬೇಡ್ಕರರು ಬರೆದಿದ್ದ ಪಾಲಿ ಭಾಷೆಯ ವ್ಯಾಕರಣದ ಭಾಗವನ್ನು ಕನ್ನಡಕ್ಕೆ ಅನುವಾದಿಸಿದ್ದು, ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಮಾಲಿಕೆಯಲ್ಲಿ ಪ್ರಕಟಿಸಿದೆ. ಸಂಸ್ಕೃತಕ್ಕೆ ಹತ್ತಿರವಾದದ್ದು ಪಾಲಿ ಭಾಷೆ. ಎರಡೂ ಭಾಷೆಗಳ ವ್ಯಾಕರಣ ನಿಯಮಗಳು ಒಂದೇ ರೀತಿ ಇದ್ದರೂ ವರ್ಣವ್ಯತ್ಯಾಸಗಳಿಂದಾಗಿ ಪಾಲಿ ಭಾಷೆಯ ಶಬ್ದಗಳ ಸ್ವರೂಪ ಸಂಸ್ಕೃತಕ್ಕಿಂತ ಭಿನ್ನ. ಇದರ ಇನ್ನೊಂದು ವೈಶಿಷ್ಟ್ಯವೆಂದರೆ ಸಂಸ್ಕೃತದಲ್ಲಾಗಲೀ, ಕನ್ನಡದಲ್ಲಾಗಲೀ ಕಂಡು ಬರುವ ಞ, ಙ ಮುಂತಾದ ಅನುನಾಸಿಕಗಳ ಬಳಕೆ ಈ ಭಾಷೆಯಲ್ಲಿರುವುದು. ಪಾಲಿ ಭಾಷೆಯ ಓದಿಗೆ ಸಹಾಯಕವಾಗಬಲ್ಲ ರೀತಿಯಲ್ಲಿ ಅಂಬೇಡ್ಕರ್ ಅವರು ಪಾಲಿ ಭಾಷೆಯ ವ್ಯಾಕರಣವನ್ನು ಸಿದ್ಧಪಡಿಸಿದ್ದು, ಅದನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಸಂಪುಟದಲ್ಲಿ ಪಾಲಿ ಭಾಷೆಯ ವರ್ಣಮಾಲೆ, ಭಾಷಾ ನಿಯಮ, ಶಬ್ದ ನಿಷ್ಪತ್ತಿ, ವಾಕ್ಯ ರಚನೆ, ಸಾಮಾನ್ಯ ಸಂಭಾಷಣೆಗಳಿದ್ದು ಪಾಲಿ ಭಾಷೆಯ ಕಲಿಕೆಗೆ ಆಕರ ಗ್ರಂಥವಾಗಿದೆ.

Related Books