ಕನ್ನಡ ಜೈನ ಪುರಾಣಗಳು

Author : ಎಸ್. ಶಿವಾನಂದ

Pages 248

₹ 110.00




Year of Publication: 2008
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018

Synopsys

ಲೇಖಕ ಡಾ. ಎಸ್.‌ ಶಿವಾನಂದ ಅವರ ಒಂದು ಸಮಗ್ರ ಅಧ್ಯಯನ ಕೃತಿ ʼಕನ್ನಡ ಜೈನ ಪುರಾಣಗಳುʼ. ಪುಸ್ತಕವು ಜೈನ ಧರ್ಮದ ಪುರಾಣಗಳ ಕುರಿತಾಗಿ ಹೇಳುತ್ತದೆ. ಜೈನ ಎಂಬ ಪದವು ಜಿನ ಎಂಬ ಶಬ್ಧದಿಂದ ಹುಟ್ಟಿದ್ದಾಗಿದ್ದು, ಬಳಿಕ ಜಿನರಿಂದ ಉಪದೇಶಿಸಲ್ಪಟ್ಟ ಧರ್ಮ ಜೈನಧರ್ಮವಾಗಿದೆ ಎಂದು ಪುರಾಣಗಳು ಹೇಳುತ್ತದೆ. ಜೈನ ಧರ್ಮದ ಮೂಲಗಳ ಬಗ್ಗೆ ಈವರೆಗೆ ಯಾರಲ್ಲಿಯೂ ಸರಿಯಾದ ಉತ್ತರವಿಲ್ಲ. ಆದರೆ, ಕ್ರಿ. ಪೂ. 5ನೇ ಶತಮಾನದ ಅವಧಿಯಲ್ಲಿದ್ದ ಮಹಾವೀರನ್ನು ಜೈನ ಧರ್ಮದ ಪ್ರವಾದಿ ಎಂದು ಪೂಜಿಸಲಾಗುತ್ತಿದೆ. ತೀರ್ಥಂಕರ ಎಂದು ಕರೆಯಲಾಗುವ ಧರ್ಮದ ಇಪ್ಪತ್ತನಾಲ್ಕು ಪ್ರಚಾರಕರ ಮೂಲಕ ಜೈನರ ಇತಿಹಾಸವನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ, ಋಷಭದೇವನ್ನು ಧರ್ಮದ ಪ್ರಥಮ ತೀರ್ಥಂಕರ ಎಂದೂ, ವರ್ಧಮಾನ ಮಹಾವೀರನನ್ನು ಕೊನೆಯ ತೀರ್ಥಂಕರ ಎಂದೂ ಕರೆಯಲಾಗುತ್ತದೆ.

About the Author

ಎಸ್. ಶಿವಾನಂದ

ಎಸ್. ಶಿವಾನಂದ ಅವರು ವಿಮರ್ಶಕರು, ಚಿಂತಕರು ಲೇಖಕರು. ಅವರದು ಮೂಲತಃ ಪ್ರಮೇಯ ಕಟ್ಟುವ ಮನಸ್ಸು. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅವರಿಗೆ ಪಾಶ್ಚಿಮಾತ್ಯ ಸಾಹಿತ್ಯ ಮತ್ತು ಥಿಯರಿಗಳ ಅಭ್ಯಾಸದ ಹಿನ್ನೆಲೆಯೂ ಇದೆ. ಕೃತಿಗಳು: ಮಹಾತ್ಮ ಮತ್ತು ಗುರುದೇವ ಸಂವಾದ, ಸಾಹಿತ್ಯ ಮತ್ತು ಸಾಹಿತ್ಯೇತರ ...

READ MORE

Related Books