ಸಮಗ್ರ ಪ್ರಬಂಧ ಗುಚ್ಛ

Author : ಕೆ.ಗೋಪಾಲಕೃಷ್ಣರಾವ್

Pages 160

₹ 100.00




Year of Publication: 2011
Published by: ರಾಮ ಎಸ್
Address: ತುಲನ ಪ್ರಕಾಶನ, ನಂ.7, ಒಂದನೇ ಶಾಪ್ ಲೇನ್, ಟಾಟಾ ಸಿಲ್ಕ್ ಫಾರಂ, ಬಸವನಗುಡಿ, ಬೆಂಗಳೂರು- 560 004
Phone: 9480184985

Synopsys

ಕೆ. ಗೋಪಾಲಕೃಷ್ಣರಾವ್ ಅವರ ಕೃತಿ ಸಮಗ್ರ ಪ್ರಬಂಧ ಗುಚ್ಛ. ಈ ಕೃತಿಗೆ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಮೊದಲ ಮಾತು ಬರೆದಿದ್ದಾರೆ. ‘ಕೆ.ಗೋಪಾಲಕೃಷ್ಣ ರಾಯರು ಕತೆಗಳನ್ನು ಮತ್ತು ನಾಟಕಗಳನ್ನು ರಚಿಸುವಂತೆಯೇ ಸ್ವಾರಸ್ಯಕರವಾದ ಪ್ರಬಂಧಗಳನ್ನು ಆಗಾಗ ಬರೆಯುತ್ತಿದ್ದರು ಎಂಬುದನ್ನು ಸಾಬೀತು ಮಾಡುವ ಈ ಪುಸ್ತಕ ಪ್ರಬಂಧಗಳು ಮುಳುಗಿ ಹೋಗಿದ್ದು, ಕಿರಿಯ ಮಗಳಾದ ಜಾನಕಿ ಅವರು ಅವೆಲ್ಲವನ್ನೂ ಹುಡುಕಿ, ಜೋಡಿಸಿ ಸಾಹಿತ್ಯ ಪ್ರಿಯರ ಮುಂದೆ ಇರಿಸಿದ್ದಾರೆ. ಈ ಕೆಲವು ಪ್ರಬಂಧಗಳಲ್ಲಿ ಸಣ್ಣಕತೆಗಳ ಬಗ್ಗೆ,ಕೆಲವರು ಹಿರಿಯರ ಬಗ್ಗೆ, ಕೆಲವು ಸಾಹಿತ್ಯ ಸಮಸ್ಯೆಗಳ ಬಗ್ಗೆ, ವಿವರಗಳಿವೆ. ‘ತಿರುಪತಿಯಾತ್ರೆ’ ಎಂಬುದು ಅವರು ರಚಿಸಿದ ಅವರ ಬಾಳಿನ ಕೊನೆಯ ಬರಹ . ಹೀಗಾಗಿ ಅನೇಕ ವರ್ಷಗಳ ಕಾಲ ಅನುಕ್ರಮವಾಗಿ ಬರೆದ ಬರಹಗಳಿವು’ ಎಂದಿದ್ದಾರೆ.

About the Author

ಕೆ.ಗೋಪಾಲಕೃಷ್ಣರಾವ್

1906ರಲ್ಲಿ ಹುಟ್ಟಿ,1967ರಲ್ಲಿ ನಮ್ಮನ್ನಗಲಿದ ಗೋಕೃ ಎಂಬ ಸಂಕ್ಷಿಪ್ತ ನಾಮದಿಂದ ಖ್ಯಾತರಾಗಿದ್ದ ಕೊಡಿಗೇನಹಳ್ಳಿ ಗೋಪಾಲಕೃಷ್ಣರಾವ್,ನವೋದಯ ಸಾಹಿತ್ಯ ಸಂದರ್ಭದಲ್ಲಿ ಸಣ್ಣ ಕಥೆ, ಪ್ರಬಂಧ, ಕವಿತೆ, ನಾಟಕ ಹೀಗೆ ನಾನು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವರಾದರೂ, ಕನ್ನಡ ಸಾಹಿತ್ಯ ಲೋಕ ಅವರನ್ನು ಉತ್ತಮ ಕಥೆಗಾರರೆಂದೇ ಗುರುತಿಸಿ ಗೌರವಿಸಿದೆ. ಮಾಸ್ತಿಯವರ 'ಜೀವನ' ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ದಕ್ಷತೆ ಪ್ರದರ್ಶಿಸಿ, ನಾಡು-ನುಡಿ ಸೇವೆ ಮಾಡಿದರು. ಇವರನ್ನು ಕನ್ನಡದ ಆಸ್ತಿ' ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸ್ವತಃ ಮೆಚ್ಚಿ ಅಭಿನಂದಿಸಿದರು. ಮೈಸೂರು ಮಹಾರಾಜ ಶ್ರೀ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ...

READ MORE

Related Books