ಮಿಂಚಿನ ಚಿಲುಮೆ

Author : ಅಂತಃಕರಣ

Pages 396

₹ 300.00




Year of Publication: 2016
Published by: ಪ್ರಗತಿ ಪ್ರಕಾಶನ
Address: ಪ್ರಗತಿ ಪ್ರಕಾಶನ ಮಹಡಿ, ನಂ. 2406/2407, ಕೆ-1, 1ನೇ ಕ್ರಾಸ್, ಹೊಸ ಬಂಡಿಗೇರಿ, ಕೆ.ಆರ್. ಮೊಹಲ್ಲಾ, ಮೈಸೂರು- 570004

Synopsys

‘ಮಿಂಚಿನ ಚಿಲುಮೆ’ ಕಿಶೋರ ಸಾಹಿತಿ ಅಂತಃಕರಣನ ಆಯ್ದ ಸಮಗ್ರ ಸಾಹಿತ್ಯ ಸಂಕಲನ. ಅಂತಃಕರಣನ ಆಯ್ದ ಕತೆಗಳ ಸಂಕಲನ ಈ ಕೃತಿ.  ಆತನ ಸೃಜನಶೀಲತೆಗೆ ಕೈಪಿಡಿ. ಈ ಕೃತಿಗೆ ಖ್ಯಾತನಾಮರು ಬೆನ್ನುಡಿ ಬರೆದಿದ್ದಾರೆ. ‘ಕತೆ ಎನ್ನುವುದು ಮನುಷ್ಯ ಸೃಷ್ಟಿ ಮಾಡಿದ ಮೊಟ್ಟ ಮೊದಲ ಕಲಾಕೃತಿ ಇರಬಹುದು ಎಂಬುದು ನನ್ನ ಊಹೆ ಏಕೆಂದರೆ ಒಂದು ಕಲಾಕೃತಿಯಲ್ಲಿ ಇರಬಹುದಾದ ಎಲ್ಲ ಅಂಶಗಳನ್ನು  ಒಂದು ಕತೆಯಲ್ಲಿ ಜೋಡಿಸಿ ಇಡುವ ಹಾಗೆ ಬೇರೆ ಮಾಧ್ಯಮದಲ್ಲಿ ಆಗುವುದಿಲ್ಲ. ಈ ಗುಟ್ಟನ್ನು ಅಂತಃಕರಣ ಕೈವಶ ಮಾಡಿಕೊಂಡಿದ್ದಾನೆ’ ಎನ್ನುತ್ತಾರೆ ಹಿರಿಯ ಕತೆಗಾರ ಡಾ. ನಾ. ಡಿಸೋಜಾ. ಅಂತಃಕರಣನ ಬಹುತೇಕ ಕತೆಗಳಲ್ಲಿ ಸಮಷ್ಠಿಪ್ರಜ್ಞೆ ಮತ್ತೆ ಮತ್ತೆ ಪ್ರಕಟಗೊಂಡಿದೆ.

About the Author

ಅಂತಃಕರಣ

ಅಂತಃಕರಣ  ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ  ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ  ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...

READ MORE

Related Books