
ಎಂ. ಅಬ್ದುಲ್ ರೆಹಮಾನ್ ಪಾಷಾರವರು ಕನ್ನಡೇತರರಿಗೆ ಕನ್ನಡ ನುಡಿಯನ್ನು ಕಲಿಸುವ ಪರಿಯನ್ನು ಮತ್ತು ಸೈದ್ಧಾಂತಿಕ ವಿವರಗಳನ್ನು 'ಕನ್ನಡೇತರರಿಗೆ ಕನ್ನಡ ಕಲಿಸುವವರ ಕೈಪಿಡಿ' ಎಂಬ ಈ ಕೃತಿಯಲ್ಲಿ ಅತಿ ಸರಳವಾಗಿ ವಿವರಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ಪಠ್ಯಕ್ರಮದಲ್ಲಿ ಕನ್ನಡದಲ್ಲಿ ಪ್ರಥಮ ಭಾಷೆ, ದ್ವಿತೀಯ ಭಾಷೆ ಇತ್ಯಾದಿ ವಿಷಯಗಳು (ಪೇಪರ್‌ಗಳು) ಇರುತ್ತವೆ. ಅವು ಸಾಮಾನ್ಯವಾಗಿ ಕನ್ನಡ ಭಾಷೆಯ ಮೂಲಕ ಕನ್ನಡ ಸಾಹಿತ್ಯವನ್ನು ಕಲಿಸುವ ಉದ್ದೇಶವನ್ನು ಹೊಂದಿರುತ್ತವೆ. ಎಂದರೆ, ಕಲಿಕೆಯ ಗುರಿ ಕನ್ನಡ ಸಾಹಿತ್ಯವಾಗಿರುತ್ತದೆ, ಕನ್ನಡ ಭಾಷೆ ಕೇವಲ ಸಾಧನವಾಗಿರುತ್ತದೆ. ಆದರೆ, ಈ ಹೊತ್ತಿಗೆಯಲ್ಲಿ ಪಾಷಾರವರ ಗುರಿ ಇರುವುದು ನೇರವಾಗಿ ಭಾಷೆಯನ್ನೇ, ಅಥವಾ ಭಾಷಾ ಕೌಶಲಗಳನ್ನೇ ಕಲಿಸುವುದರ ಕುರಿತು. ಬಳಕೆಯಾಗಬಹುದಾದ ವಸ್ತು ಭಾಷಾ ಕಲಿಕೆಗೆ ಕೇವಲ ಸಾಧನವಷ್ಟೇ.
©2025 Book Brahma Private Limited.