ದೇಸಾಯಿ ಕಥನ

Author : ಟಿ.ಪಿ. ಅಶೋಕ

Pages 124

₹ 125.00
Year of Publication: 2021
Published by: ಅಭಿನವ ಪ್ರಕಾಶನ
Address: # 17/18-2, ಮೊದಲನೇ ಮು ಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗೂರು-560 040
Phone: 9448804905

Synopsys

ಖ್ಯಾತ ಕಾದಂಬರಿಕಾರ, ಕಥೆಗಾರ ಡಾ. ಶಾಂತಿನಾಥ ದೇಸಾಯಿ ಅವರ ಸಮಗ್ರ ಸಾಹಿತ್ಯ ಅಧ್ಯಯನ ಕುರಿತು ವಿಮರ್ಶಕ ಡಾ. ಟಿ..ಪಿ. ಅಶೋಕ ಅವರು ರಚಿಸಿದ ಕೃತಿ-ದೇಸಾಯಿ ಕಥನ. ದೇಸಾಯಿ ಅವರ ಸಾಹಿತ್ಯವು (1927-1998) ಕನ್ನಡ ಸಾಹಿತ್ಯದಲ್ಲಿ ನವ್ಯ ಸಂವೇದನೆಯನ್ನು ಉಂಟು ಮಾಡಿದೆ. ಸಣ್ಣಕಥೆ, ಕಾದಂಬರಿ ಹಾಗೂ ವಿಮರ್ಶಾ ಕ್ಷೇತ್ರದಲ್ಲಿ ಪ್ರಮುಖರು. ಸಣ್ಣಕತೆ, ಕಾಧಂಬರಿಗಳಲ್ಲಿ ನವ್ಯ ಪ್ರಜ್ಞೆಯನ್ನು ತಂದ ಮೊದಲಿಗರು. ನವ್ಯ ಚಳವಳಿಯ ಪ್ರಮುಖ ಪ್ರತಿಪಾದಕರು ಹಾಗೂ ಸಮರ್ಥಕರೂ ಆಗಿದ್ದರು. ನವ್ಯ ಕೃತಿಗಳನ್ನು ನಿಷ್ಠುರವಾಗಿ ವಿಮರ್ಶೆಗೆ ಒಳಪಡಿಸಿ, ಅವುಗಳ ಹೊಸತನವನ್ನು ಅನಾವರಣಗೊಳಿಸಿ, ಇತಿಮಿತಿಗಳನ್ನು ತೋರಿಸಿ, ಯಾವತ್ತೂ ವಸ್ತುನಿಷ್ಠತೆಯನ್ನು ಉಳಿಸಿಕೊಂಡಿದ್ದವರು. ಹೊಸ ಪೀಳಿಗೆಯ ತರುಣ-ತರುಣಿಯರಲ್ಲಿಯ ಗೊಂದಲಗಳು, ಅಭಿಪ್ಸೆಗಳು, ಆಶೋತ್ತರಗಳು ಲವಲವಿಕೆಯಿಂದ ನಿರೂಪಿಸಿದ್ದರು. ಸ್ವಾತಂತ್ಯ್ರೋತ್ತರ ಭಾರತದ ಬದಲಾದ ಆಶೋತ್ತರಗಳು, ಗುರಿಗಳು, ಆದರ್ಶಗಳು ಇವುಗಳನ್ನು ಸೂಕ್ಷ್ಮವಾಗಿ ತೆರೆದು ತೋರಿದ್ದರು. ಅವರ ಸಾಮಾಜಿಕ-ರಾಜಕೀಯ ವಿಚಾರಗಳು ಕಥನ ಪ್ರಕ್ರಿಯೆಯ ಅವಿಭಾಜ್ಯ ಅಂಗಗಳಾಗಿದ್ದವು. ದೇಸಾಯಿ ಅವರ ಸಮಗ್ರ ಸಾಹಿತ್ಯ ವನ್ನು ವಿಶ್ಲೇಷಣಾತ್ಮಕವಾಗಿ, ವಿಮರ್ಶಾತ್ಮಕವಾಗಿ ಚರ್ಚಿಸುವ ಪ್ರಸ್ತುತ ಕೃತಿ ದೇಸಾಯಿ ಕಥನ. ಅವರ ಕೃತಿಗಳ ಕುರಿತ ಚರ್ಚೆಯನ್ನು ಅರ್ಥಪೂರ್ಣವಾಗಿ ಮುಂದುವರಿಸಿದೆ. ಮತ್ತು, ಹೊಸ ಆಯಾಮಗಳನ್ನು ಕೂಡಿಸಿದೆ. ಕನ್ನಡದ ಪ್ರಮುಖ ಲೇಖಕರೊಬ್ಬರ ಕುರಿತು ತಲಸ್ಪರ್ಶಿ ಅಧ್ಯಯನ ಇದು ಎಂದು ಲೇಖಕ ಹಾಗೂ ವಿಮರ್ಶಕ ಡಾ. ಟಿ.ಪಿ. ಅಶೋಕ ಅವರು ಅಭಿಪ್ರಾಯಪಟ್ಟಿದ್ದಾರೆ.

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Related Books