ಮುಳ್ಳೂರು ನಾಗರಾಜ ಸಮಗ್ರ ಸಾಹಿತ್ಯ ಸಂಪುಟ-೨ (ವಚನ ಕಾವ್ಯ)

Author : ಅಪ್ಪಗೆರೆ ಸೋಮಶೇಖರ್‌

Pages 540

₹ 650.00




Year of Publication: 2019
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-06
Phone: 08022107704

Synopsys

‘ವಚನ, ಕಾವ್ಯ’ ಎಂಬ ಎರಡನೆಯ ಸಂಪುಟವು ಮುಳ್ಳೂರು ನಾಗರಾಜರ ‘ವಚನಗಳು’ ಹಾಗೂ ‘ದಾಖಲೆ, ಹೊಲೆಯೂರು, ಸಾವ ಕಾಲದ ಹಕ್ಕಿ’ ಎಂಬ ಸಮಗ್ರ ಕವಿತೆಗಳನ್ನು ಒಳಗೊಂಡಿದೆ.

ಪ್ರಸ್ತುತ ಸಂಪುಟವು ಭಾರತೀಯ ಸಾಮಾಜಿಕ ವ್ಯವಸ್ಥೆ ಹಾಗೂ ಸಾಂಸ್ಕೃತಿಕ ಪರಂಪರೆಯ ತಲ್ಲಣಗಳನ್ನು ಪ್ರತಿರೋಧದ ಪರಿಭಾಷೆಯ ಮೂಲಕ ಜಿಜ್ಞಾಸೆಗೆ ಒಳಪಡಿಸುತ್ತದೆ. ಮುಳ್ಳೂರು ನಾಗರಾಜ ಅವರ ಕೃತಿಗಳನ್ನು ಅಪ್ಪಗೆರೆ ಸೋಮಶೇಖರ್‌ ಅವರು ಸಂಪಾದಿಸಿದ್ದು ಕನ್ನಡ ಪುಸ್ತಕ ಪ್ರಾಧಿಕಾರ ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದೆ.

About the Author

ಅಪ್ಪಗೆರೆ ಸೋಮಶೇಖರ್‌
(19 December 1975)

ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ, ಅಪ್ಪಗೆರೆ ಗ್ರಾಮದ ಡಾ. ಅಪ್ಪಗೆರೆ ಸೋಮಶೇಖರ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು 7ನೇ ರಾಂಕ್ ಪಡೆದು ಪಾಸಾದವರು. ’ಡಾ. ಸಿದ್ದಲಿಂಗಯ್ಯ ಅವರ ಜೀವನ ಮತ್ತು ಸಾಹಿತ್ಯ : ಒಂದು ಅಧ್ಯಯನ” ಎಂಬ ವಿಷಯ ಕುಳಿತು ಸಂಶೋಧನೆ ನಡೆಸಿ, 2008ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ನಡೆವ ನಡೆ (ವಿಮರ್ಶೆ), ಮೌನ ಮಾತು ಪ್ರತಿಭಟನೆ (ವಿಮರ್ಶೆ), ಡಾ. ರಾಜಕುಮಾರ್, ಸುಟ್ಟಾವು  ಬೆಳ್ಳಿ ಕಿರಣ (ವಿಮರ್ಶೆ), ತನು ಮುಟ್ಟದ ಮುನ್ನ(ವಿಮರ್ಶೆ), ಸಂಬಜ ಅನ್ನೋದು ದೊಡ್ಡದು ಕನಾ, ಬಡವರ ನಗುವಿನ ಶಕ್ತಿ ...

READ MORE

Related Books