ನವೋದಯ ಕಾವ್ಯ ಭಾಗ 2

Author : ವಿ.ಕೃ. ಗೋಕಾಕ (ವಿನಾಯಕ)

Pages 416

₹ 375.00




Year of Publication: 2018
Published by: ಐಬಿಎಚ್ ಪ್ರಕಾಶನ
Address: ಐಬಿಎಚ್ ಪ್ರಕಾಶನ, #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085
Phone: 9845070613

Synopsys

ಭಾರತೀಯ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯಂತ ಗೌರವಾನ್ವಿತ ಸ್ಥಾನ ಪಡೆದ ಎತ್ತರದ ವ್ಯಕ್ತಿಗಳಲ್ಲಿ ಸಾಹಿತಿ ವಿ. ಕೃ  ಗೋಕಾಕರೂ ಒಬ್ಬರು. 

ಹದಿನಾರು ಸಂಪುಟಗಳಲ್ಲಿ ಪ್ರಕಟಿಸಲು ಉದ್ದೇಶಿಸಿದ್ದ ಡಾ.ವಿನಾಯಕ ಕೃಷ್ಣ ಗೋಕಾಕರ ಸಮಗ್ರ ಸಾಹಿತ್ಯ ಮಾಲೆಯ ಎರಡನೆಯ ಸಂಪುಟವಾಗಿ ’ನವೋದಯ ಕಾವ್ಯ ಭಾಗ - 2' ಕೃತಿ ರಚಿತವಾಗಿದೆ.

ಪ್ರಸ್ತುತ ಸಂಪುಟವು ವಿನಾಯಕರ ನವೋದಯ ಕಾವ್ಯದ ಒಂದು ಭಾಗವನ್ನೊಳಗೊಂಡಿದೆ. ಇಲ್ಲಿ ಪಯಣ, ಕಲೋಪಾಸಕ, ತ್ರಿವಿಕ್ರಮರ ಆಕಾಶಗಂಗೆ, ಹಿಗ್ಗು ಸಂಕಲನಗಳಲ್ಲದೆ ಅನೇಕ ಸುನೀತಗಳು ಸೇರಿವೆ. ವಿನಾಯಕ ಎಂಬ ಕಾವ್ಯನಾಮದಲ್ಲಿ ಪ್ರಸಿದ್ಧವಾಗಿರುವ ಡಾ. ಗೋಕಾಕರು ಹೊಸಗನ್ನಡ ಸಾಹಿತ್ಯವನ್ನು ನಿರ್ಮಿಸಿದ ಶಿಲ್ಪಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.  ಅವರ ಸಮುದ್ರ ಗೀತೆಗಳು ಕನ್ನಡ ಕಾವ್ಯಕ್ಕೆ ಹೊಸ ಮೆರುಗನ್ನು ಬೆರಗನ್ನೂ ತಂದಿತು. ಕಾವ್ಯ, ಕಾದಂಬರಿ, ನಾಟಕ, ವಿಮರ್ಶೆ, ಪ್ರವಾಸಕಥನ, ಪ್ರಬಂಧ ಮೊದಲಾಗಿ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಕೆಲಸ ಮಾಡಿದ ಅವರು, ಖ್ಯಾತರೆನ್ನಿಸಿದ ಭಾರತೀಯ ಇಂಗ್ಲೀಷ್ ಲೇಖಕರಲ್ಲಿಯೂ ಒಬ್ಬರಾಗಿದ್ದಾರೆ.

About the Author

ವಿ.ಕೃ. ಗೋಕಾಕ (ವಿನಾಯಕ)
(09 August 1909 - 28 April 1992)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...

READ MORE

Related Books