ದೇವರ ಮಗು

Author : ಕಿ.ರಂ. ನಾಗರಾಜ

Pages 104

₹ 75.00
Year of Publication: 2016
Published by: ಅಭಿನವ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಸಾಹಿತ್ಯ.  ನಾಟಕ, ಸಮಾಜಸೇವೆ, ಶಿಕ್ಷಣ, ಆರೋಗ್ಯ, ವಾತ್ಸಲ್ಯ, ಪ್ರೀತಿ, ಪತ್ರಿಕೋದ್ಯಮ ಹೀಗೆ  ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು ಪಂಡಿತ ತಾರಾನಾಥರು. ಅವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸುವ ಯೋಚನೆ ಮೊದಲು ಹೊಳೆದದ್ದು ಪ್ರೊ. ಕಿ.ರಂ. ನಾಗರಾಜ ಅವರಿಗೆ. ಅವರ ಅಪ್ರಕಟಿತ ಲೇಖನಗಳ ಸಂಕಲನ 'ಅಂಟಿದ ನಂಟು' ಹೊರಬರುವಷ್ಟರಲ್ಲಿಯೇ ಕಿ.ರಂ.ಇಹಲೋಕ ತ್ಯಜಿಸಿದ್ದರು. ಆನಂತರ ಅವರ ಆಶಯದಂತೆ ಆರೋಗ್ಯ ಮತ್ತು ಚಿಕಿತ್ಸಾವಿಧಾನಗಳ ಕುರಿತಂತೆ 'ರಸೌಷಧಿ' ಕೃತಿಯನ್ನು ಹೊರತರಲಾಯಿತು. ಬಳಿಕ ಮೂರನೆಯ ಸಂಪುಟದಲ್ಲಿ ತಾರಾನಾಥರ ಕಥೆಗಳು ಮತ್ತು ನಾಟಕಗಳನ್ನು ಸಂಪಾದಿಸಲಾಗಿದೆ.

ತಾರಾನಾಥರು ವಿವಿಧ ದಿನ ಪತ್ರಿಕೆ ವಾರ ಮತ್ತು ಮಾಸ ಪತ್ರಿಕೆಗಳಲ್ಲಿ ಬರೆದ ಲೇಖನ ಮತ್ತು ಕಥೆಗಳನ್ನು ಸಂಗ್ರಹಿಸಿ ಇಲ್ಲಿ ಕೊಟ್ಟಿದ್ದಾರೆ. ಜೊತೆಗೆ ತಾರಾನಾಥರ ಹಸ್ತಪ್ರತಿಗಳು ಮತ್ತು ಅವುಗಳ ಮಾಹಿತಿ ಕೂಡ ಅವರ ಶಿಷ್ಯರಲ್ಲಿ ಹಂಚಿಹೋಗಿರುವುದರಿಂದ ಅವೆಲ್ಲವನ್ನು ಕೃತಿಯ ಮೂಲಕ ಒಂದುಗೂಡಿಸಿ ನೀಡಲಾಗಿದೆ. 

About the Author

ಕಿ.ರಂ. ನಾಗರಾಜ
(05 December 1943 - 07 August 2010)

ಕನ್ನಡ ವಿಮರ್ಶಾಲೋಕದಲ್ಲಿ ಕಿ.ರಂ. ಎಂದೇ ಚಿರಪರಿಚಿತರಾಗಿದ್ದರು ಕಿತ್ತಾನೆ ರಂಗಣ್ಣ ನಾಗರಾಜ್ ಅವರು. ಅಪಾರ ಶಿಷ್ಯವರ್ಗ ಹೊಂದಿದ್ದ ಕಿ.ರಂ. ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅವರ ಶಿಷ್ಯವರ್ಗದಲ್ಲಿ ಕ್ಲಾಸ್‌ರೂಮ್‌ನಲ್ಲಿ ಪಾಠ ಕೇಳಿದ ವಿದ್ಯಾರ್ಥಿಗಳಿಗಿಂತ ಕಾವ್ಯಾಸಕ್ತ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹಾಸನ ಜಿಲ್ಲೆಯ ’ಕಿತ್ತಾನೆ’ಯಲ್ಲಿ 1943ರ ಡಿಸೆಂಬರ್ 5 ರಂದು ಜನಿಸಿದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ 'ಬಿ.ಎ.ಪದವಿ' ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (ಎಂ.ಎ) ಪದವಿ ಪಡೆದರು. ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಕಿ.ರಂ.  ಅವರು ನಂತರ ಮೂರು ...

READ MORE

Related Books