ಅಪ್ಪ - ಶಾಂತರಸ ನುಡಿಸ್ಮಾರಕ

Author : ಎಚ್.ಎಸ್. ಮುಕ್ತಾಯಕ್ಕ

Pages 224

₹ 125.00




Year of Publication: 2008
Published by: ಡಾ. ಚೆನ್ನಬಸವ ಪಟ್ಟದ್ದೇವರು ಪ್ರತಿಷ್ಠಾನ
Address: ಹಿರೇಮಠ ಸಂಸ್ಥಾನ, ಭಾಲಿ. ತಾ, ಭಾಲ್ಕಿ ಜಿ. ಬೀದರ,
Phone: 08484262284

Synopsys

ಲೇಖಕಿ ಎಚ್. ಎಸ್. ಮುಕ್ತಾಯಕ್ಕ ಅವರ ಸಂಪಾದಿತ ಕೃತಿ ಸಾಹಿತಿ ಡಾ. ಶಾಂತರಸರ ಬದುಕಿನ ಕುರಿತ ಲೇಖನಗಳ ಸಂಕಲನ ‘ಅಪ್ಪ’. ಶಾಂತರಸರ ದ್ವಿಪದಿಗಳ ಸಾಲು - ‘ಉರಿದುರಿದು ಹೆಮ್ಮೆಯಲಿ ತಲೆಯೆತ್ತಿ ಬೆಳಕಿತ್ತ ಜ್ಯೋತಿಯೆ ತೈಲ ಮುಗಿದು ಬತ್ತಿ ಕರಕಾಯ್ತು ಹೇಳೀಗ ನಿನ್ನ ಸಂದೇಶವೇನು ?’ ‘ಮುಗಿಯ ಬಂದಿದೆ ಎಣ್ಣೆ ದೀಪದಲಿ ಮಾಡುವುದು ಬಹಳವಿತ್ತು ಕತ್ತಲೆಯನಪ್ಪಿದ್ದೆ ಉರಿವಾಗ ನೋಡುವುದು ಬಹಳ ಇತ್ತು.’ ಇಂತಹ ಸಾಲುಗಳ ಮೂಲಕ ಅರ್ಥಪೂರ್ಣ ಸಾಹಿತ್ಯವನ್ನು ಕಟ್ಟಿಕೊಟ್ಟ ಶಾಂತರಸರ ಬದುಕು ಹಾಗೂ ಸಾಹಿತ್ಯಕ ಸಾಧನೆಯನ್ನು ಈ ಕೃತಿ ಹತ್ತು ಹಲವು ಬರಹಗಳ ಮೂಲಕ ಸುಂದರ ಚಿತ್ರಣ ನೀಡುತ್ತದೆ. 

About the Author

ಎಚ್.ಎಸ್. ಮುಕ್ತಾಯಕ್ಕ
(28 January 1954)

ಎಚ್.ಎಸ್. ಮುಕ್ತಾಯಕ್ಕ ಅವರು 1954 ಜನವರಿ 28ರಂದು ಜನಿಸಿದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ನಾನು ಮತ್ತು ಅವನು, ನೀವು ಕಾಣಿರೇ ನೀವು ಕಾಣಿರೇ, ಡಕ್ಕೆಯ ಬೊಮ್ಮಣ್ಣ, ಶಿವಶರಣೆ ಮುಕ್ತಾಯಕ್ಕ, ಕಭೀ ಕಭೀ ಮುಂತಾದವು. ಇವ ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ...

READ MORE

Related Books