ಬುದ್ಧನ ಕಥೆಗಳು

Author : ಜಿ.ವಿ. ಆನಂದಮೂರ್ತಿ

Pages 76

₹ 100.00




Year of Publication: 2021
Published by: ಪ್ರೀತಿ ಪುಸ್ತಕ ಪ್ರಕಾಶನ
Address: ಜಿ.ವಿ. ಆನಂದಮೂರ್ತಿ, ‘ಅಕ್ಕರೆ’, ನೇತಾಜಿ ರಸ್ತೆ, ವಿದ್ಯಾನಗರ, ತುಮಕೂರು-572103
Phone: 9449306979 

Synopsys

ಲೇಖಕ ಜಿ.ವಿ. ಆನಂದಮೂರ್ತಿ ಅವರ ಕೃತಿ-ಬುದ್ಧನ ಕಥೆಗಳು. ಬುದ್ಧ ದೇವನು ತನ್ನ ಬೋಧನೆಯನ್ನು ಜನಸಾಮಾನ್ಯರಿಗೆ, ಬಿಕ್ಕುಗಳಿಗೆ ಸರಳವಾಗಿ ತಿಳಿಸಿದ ಕಥೆಗಳಾಗಿವೆ. ತನ್ನ ಕಣ್ಣೆದುರಿನ ಸಾಮಾನ್ಯ ಸಂಗತಿಗಳ ಮೂಲಕವೇ ಉನ್ನತವಾದ ಬದುಕಿನ ಚಿಂತನೆಗಳನ್ನು ಈ ಕಥೆಗಳು ನಮ್ಮ ಮುಂದಿಡುತ್ತವೆ. ತರ್ಕವಿಲ್ಲದ, ಅಲೌಕಿಕತೆ, ಅಧ್ಯಾತಿಕತೆ ಮುಂತಾದ ಸಂಕೀರ್ಣ ವಿಚಾರಗಳನ್ನು ಪ್ರಸ್ತಾಪಿಸದೆ, ಮನುಷ್ಯ ನಿಸರ್ಗವನ್ನು ಹಾಗೂ ತನ್ನ ಸಹಜೀವಿಗಳನ್ನು ನೋಯಿಸದೆ, ಸಂತಸದಿಂದ ಬದುಕುವುದು ಹೇಗೆಂದು ತಿಳಿಸುವ ಇಲ್ಲಿನ ಕಥೆಗಳು ಜಗತ್ತಿನ ಯಾವುದೇ ಸಮುದಾಯಕ್ಕೆ, ಯಾವುದೇ ಧರ್ಮದವರಿಗೆ, ಯಾವುದೇ ಭಾಷಿಕರಿಗೆ ಅನ್ವಯವಾಗುವಂತೆ ಹೊಂದಿಕೊಳ್ಳುತ್ತವೆ. ಇದೇ ಬುದ್ಧ ದೇವನು ಬೋಧಿಸಿದ ಕಥೆಗಳ ವೈಶಿಷ್ಟ್ಯತೆ ಇರುವುದು.

     ಬುದ್ಧದೇವನ ಪ್ರವಚನವು ದೈನಂದಿನ ಭಾಷೆ ಮತ್ತು ಅನುಭವಕ್ಕೆ ಎಟಕುವ ವಿವರಗಳನ್ನು ಒಳಗೊಂಡು ಅತ್ಯಂತ ಸರಳವಾಗಿ ಮತ್ತು ಅಷ್ಟೇ ಗಾಂಭೀರ್ಯದಿಂದ ಭಾವುಕತೆಯಿಲ್ಲದೆ ಎಲ್ಲವನ್ನೂ ತಿಳಿಸುತ್ತವೆ. ಈ ಪ್ರವಚನಗಳೆಲ್ಲವನ್ನೂ ಬುದ್ಧದೇವ ತನ್ನ ಕಣ್ಣೆದುರಿನ ಸಮಾಜದಲ್ಲಿನ ಆರ್ಥಿಕ, ರಾಜಕೀಯ, ಧಾರ್ಮಿಕ ಮತ್ತು ಹಸನುಗೊಳ್ಳಬೇಕಾದ ಮಾನವನ ವೈಯಕ್ತಿಕ ಬದುಕನ್ನು ಕುರಿತು ಬೋಧಿಸಿದ್ದು. ಇವೆಲ್ಲವೂ ಆಶ್ಚರ್ಯ ಹುಟ್ಟಿಸುವಷ್ಟು ಆಧುನಿಕವಾಗಿವೆ. ಧರ್ಮ, ಅಧ್ಯಾತ್ಮ, ಇಹ-ಪರಗಳೆಂಬ ಯಾವ ಅಮೂರ್ತ ವಿಚಾರಗಳ ಜಿಜ್ಞಾಸೆಯೂ ಇಲ್ಲದ ಇಲ್ಲಿನ ಕಥೆಗಳು ಓದುಗರೊಳಗೆ ಕರುಣೆ ಮತ್ತು ಮೈತ್ರಿಯ ಮಳೆಯನ್ನೇ ಸುರಿಸುತ್ತವೆ. ದ್ವೇಷ, ಈರ್ಷೆ, ಸ್ವಾರ್ಥ, ಹಿಂಸೆಗಳಲ್ಲೇ ಮುಳುಗಿರುವ ಮಾನವ ಜನಾಂಗ ಭವಿಷ್ಯದಲ್ಲಿ ನಡೆಯಬೇಕಾದ ಪಂಚಶೀಲ ಮಾರ್ಗವನ್ನು ತೋರುತ್ತವೆ. ಇದು ಇಲ್ಲಿಯ ಎಲ್ಲ ಕಥೆಗಳ ಹಂಬಲ.
 

 

 

 

About the Author

ಜಿ.ವಿ. ಆನಂದಮೂರ್ತಿ

ಡಾ. ಜಿ.ವಿ.ಆನಂದಮೂರ್ತಿ ಅವರು ಮೂಲತಃ ತುಮಕೂರು ಜಿಲ್ಲೆಯ ಬೆಳ್ಳಾವೆ ಮಜರೆ ಗ್ರಾಮದ ತಿಗಳರ ಗೊಲ್ಲಹಳ್ಳಿಯವರು.   ತುಮಕೂರು ಮತ್ತು ಬೆಂಗಳೂರಿನಲ್ಲಿ ಪದವಿವರೆಗೆ  ಶಿಕ್ಷಣ ಪಡೆದು ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ  (2005) ರಲ್ಲಿ ಪಿಎಚ್.ಡಿ ಪಡೆದರು. ಸಾಹಿತಿ-ಲೇಖಕರಾಗಿರುವ ಅವರು (1998-2001)ರಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದರು.  ಕೃತಿಗಳು: ಬುದ್ದತೋರಿದ ದಾರಿ (ಬುದ್ಧದೇವನ ಜೀವತದ ವಿವರಗಳು), ನೀರಗಂಧ (ಕವನಸಂಕಲನ), ಹೊಳೆಸಾಲು (ಜನಪದ ಕಲಾವಿದರನ್ನು ಕುರಿತ ಬರಹ), ಜಾಲಾರ ಹೂವು (ಪ್ರಬಂಧ). ಶಾಂತವೇರಿ ಗೋಪಾಲಗೌಡ ನೆನಪಿನ ಸಂಪುಟ, ಗರಿಗೆದರಿದ ನವಿಲು (ಜನಪದ ಕಲಾವಿದರ ಆತ್ಮಕಥೆಗಳ ನಿರೂಪಣೆ), ಸಾಲ ಸಂಪಿಗೆ ನೆರಳು (ಎಳೆಯರಿಗಾಗಿ ಜಾನಪದ ಹಲವು ತೋಟದ ಹೂಗಳು -ಜನಪದ ತತ್ವಪದಗಳ ...

READ MORE

Related Books