ಉತ್ತರ ಕರ್ನಾಟಕದ ಕನ್ನಡ ಜನಪದ ಒಡಪುಗಳು

Author : ಶಾಂತಾ ಇಮ್ರಾಪುರ

Pages 480

₹ 50.00




Year of Publication: 2014
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002

Synopsys

ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಗದ್ಯಪದ್ಯ ಮಿಶ್ರಿತವಾದ ಒಡಪುಗಳು ಒಂದು ವಿಶಿಷ್ಠವಾದ ಪ್ರಕಾರ. ಒಗಟು ಮತ್ತು ಒಡಪಿನ ನಡುವೆ ವ್ಯತ್ಯಾಸವಿರುತ್ತದೆ ಎನ್ನುವ ಲೇಖಕರು ಒಡಪುಗಳ ವಿಶೇಷತೆಯನ್ನು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ. ‘ಬಣ್ಣದ ಸೀರಿ ಉಟಗೊಂಡು ಮಣ್ಣಾಗ ಕುಂತಾಳ...’ ಇದು ಹೆಂಡತಿಯ ಹೆಸರನ್ನು ಹೇಳುವ ಗಂಡನ ಒಡಪು. ಇದು ಹೇಗೆ ಒಡಪು ಆಗುತ್ತದೆ ಎಂಬುದನ್ನು ಲೇಖಕರು ವಿವರಿಸಿದ್ದಾರೆ. ಹೀಗೆ ಉತ್ತರ ಕರ್ನಾಟಕದ ಭಾಗದಲ್ಲಿ ಚಾಲ್ತಿಯಲ್ಲಿರುವ ಒಡಪುಗಳ ಬಗ್ಗೆ ಸಮಗ್ರ ಮಾಹಿತಿ, ಕುತೂಹಲಕಾರಿ ಅಂಶಗಳು ಈ ಕೃತಿಯಲ್ಲಿವೆ.

About the Author

ಶಾಂತಾ ಇಮ್ರಾಪುರ

ಲೇಖಕಿ ಶಾಂತಾ ಇಮ್ರಾಪುರು ಅವರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುದ್ದೇಬಿಹಾಳಗಲ್ಲಿ ಪೂರ್ಣಗೊಳಿಸಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಿ.ಯು.ಸಿ 5ನೇ ರ್ಯಾಂಕ್ ನಲ್ಲಿ ಉತ್ತೀರ್ಣರಾದರು. ಬಿ.ಎ. ಪದವಿಯನ್ನೂ 7ನೇ ರ್ಯಾಂಕ್ ನಲ್ಲಿ ಪಡೆದರು. ಎಂ.ಎ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಡೆದ ಅವರು ಅಕ್ಕಮಹಾದೇವಿ ಜೀವನ, ಸಾಧನೆ ಕುರಿತು ಪ್ರೌಢ ಪ್ರಬಂಧ ಮಂಡಿಸಿ ಚಿನ್ನದ ಪದಕದೊಡನೆ ಪಿಎಚ್.ಡಿ. ಪದವಿ ಪಡೆದರು. ಈನಂತರ ಧಾರವಾಡದ ಶ್ರೀ ಹುರಕಡ್ಡಿ ಅಜ್ಜ ಸಂಸ್ಥೆಯ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದರು. ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ‍್ಯ ...

READ MORE

Excerpt / E-Books

http://kanaja.in/ebook/images/PDF/%E0%B2%89%E0%B2%A4%E0%B3%8D%E0%B2%A4%E0%B2%B0_%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%A6_%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%9C%E0%B2%A8%E0%B2%AA%E0%B2%A6_%E0%B2%92%E0%B2%A1%E0%B2%AA%E0%B3%81%E0%B2%97%E0%B2%B3%E0%B3%81.pdf

Related Books