ಶತಮಾನದ ಕನ್ನಡ ಸಾಹಿತ್ಯ ಸಂಪುಟ 1

Author : ಜಿ. ಎಚ್. ನಾಯಕ

Pages 515

₹ 650.00




Year of Publication: 2023
Published by: ಅಭಿನವ
Address: ಅಭಿನವ, 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040.
Phone: 9448804905 / 9448676770

Synopsys

‘ಶತಮಾನದ ಕನ್ನಡ ಸಾಹಿತ್ಯ’ ಸಮೀಕ್ಷಾ ಸಂಪುಟ-1 ಹಿರಿಯ ವಿಮರ್ಶಕರಾದ ಜಿ.ಎಚ್. ನಾಯಕ ಅವರು ಸಂಪಾದಿಸಿರುವ ಕೃತಿ. ಕೃತಿಯ ಕುರಿತು ಬರೆಯುತ್ತಾ 'ಇಪ್ಪತ್ತನೆಯ ಶತಮಾನದ ಭಾರತದ ಒಟ್ಟೂ ಬದುಕಿನ ಸಂಸ್ಕೃತಿ ಪುನಾರಚನೆಯ ಸಂಕೀರ್ಣವಾದ ಮತ್ತು ಕಠಿಣತಮವಾದ ಸವಾಲನ್ನು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ನಮ್ಮ ಪ್ರಜ್ಞಾವಂತರು, ಪ್ರತಿಭಾವಂತರು ಹೇಗೆ ಎದುರಿಸಿದ್ದಾರೆ ಎಂಬ ಚರ್ಚೆ ಈ ಸಂಪುಟಗಳ ಮೂಲ ಉದ್ದೇಶ. ವಿಮರ್ಶಾತ್ಮಕ ಸಮೀಕ್ಷಾರೂಪದ ಈ ಅಧ್ಯಯನವು ಕನ್ನಡ ಸಾಹಿತ್ಯ ಲೋಕದ ಸಂವೇದನೆಯ ಸಂಸ್ಕಾರವನ್ನು ಶ್ರುತಿಗೊಳಿಸುವುದರಲ್ಲಿ ಮುಖ್ಯಪಾತ್ರವಹಿಸುತ್ತದೆ. ಇದು ಸಾಹಿತ್ಯದ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಆಕರವಾಗುವಲ್ಲಿ ಸಂದೇಹವಿಲ್ಲ. ಈ ಸಂಪುಟದಲ್ಲಿ ಕಾವ್ಯ, ನಾಟಕ, ಕಥೆ, ಕಾದಂಬರಿಯ ಪ್ರಕಾರಗಳಲ್ಲಿನ ಬೆಳವಣಿಗೆಗಳನ್ನು ಇಪ್ಪತ್ತೈದು ವರ್ಷಗಳ ಕಾಲಾವಧಿಯಲ್ಲಿ ಗುರುತಿಸಿದರೆ, ವಿಮರ್ಶೆ, ಸಂಶೋಧನೆ ಹಾಗು ಜಾನಪದ ಸಾಹಿತ್ಯ, ಮಕ್ಕಳ ಸಾಹಿತ್ಯ, ಅಂಕಣ ಸಾಹಿತ್ಯ, ಹಾಸ್ಯ ಸಾಹಿತ್ಯ, ಪ್ರವಾಸ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಆತ್ಮಕತೆ ಜೀವನ ಚರಿತ್ರೆಗಳನ್ನು ಕುರಿತ ಬರಹಗಳು ಎರಡನೆಯ ಸಂಪುಟದಲ್ಲಿವೆ ಎಂದಿದ್ದಾರೆ ಜಿ . ಎಚ್. ನಾಯಕ.

About the Author

ಜಿ. ಎಚ್. ನಾಯಕ
(18 September 1935 - 26 May 2023)

’ಜಿ.ಎಚ್. ನಾಯಕ’ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಿರುವ ವಿಮರ್ಶಕ ಗೋವಿಂದರಾಯ ಹಮ್ಮಣ್ಣ ನಾಯಕ ಅವರು ಜನಿಸಿದ್ದು 1935ರ ಸೆಪ್ಟೆಂಬರ್ 18ರಂದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದವರು. ಮೈಸೂರಿನ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ (1994-95) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠ (1996-97)ಗಳ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷ (1984), ನಿಜದನಿ (1988), ಸಕಾಲಿಕ (1995), ಗುಣಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ದಲಿತ ಹೋರಾಟ: ಗಂಭೀರ ...

READ MORE

Related Books