ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕೋಶ

Author : ಎಂ.ವಿ ನಾಗರಾಜರಾವ್

Pages 402

₹ 200.00




Year of Publication: 2011
Published by: ಹೇಮಂತ ಸಾಹಿತ್ಯ
Phone: 91 94484 67728

Synopsys

ಕಾದಂಬರಿಗಳ ತರುವಾಯ ಸಣ್ಣಕಥೆಗಳದೇ ಅತ್ಯಂತ ಜನಪ್ರಿಯ ಪ್ರಕಾರ. ವಸ್ತುವಿನ ಆಯ್ಕೆ, ದೃಷ್ಟಿ, ತಿಳಿಹಾಸ್ಯ, ಸರಳ ಸುಲಭ ಶೈಲಿ – ಇವು ಕಥಾ ಪ್ರಪಂಚಕ್ಕೆ ಮಾರ್ಗದರ್ಶಕವಾಗಿವೆ. ಈ ಕೃತಿ ಮಕ್ಕಳನ್ನು ಪ್ರಪಂಚದ ಬೇರೆಬೇರೆ ಜಾಗಗಳಲ್ಲಿ ಕಾಣಬಹುದಾದ ಪ್ರಸಿದ್ಧ ಬರಹಗಾರರ ಕತೆಗಳಿಗೆ ಪರಿಚಯಿಸುತ್ತದೆ. ಈ ಕಥೆಗಾರರು ಈಗಿಲ್ಲದಿರಬಹುದು. ಆದರೆ ಇಲ್ಲಿಯ ಕಥೆಗಳು ಇನ್ನೂ ಬೆಳೆಯುವ ಕಿಶೋರ ಮನಸ್ಸಿಗೆ ಹೊಸದಾದ ಅನುಭವ ಲೋಕವನ್ನೇ ತೆರೆದಿಡುತ್ತವೆ. ಈ ನಿಟ್ಟಿನಲ್ಲಿ ಲೇಖಕ ಎಂ.ವಿ ನಾಗರಾಜರಾವ್ ಅವರ ಕೃತಿಗಳು ಮಹತ್ತರದ ಪಾತ್ರ ನಿರ್ವಹಿಸಿದೆ.

About the Author

ಎಂ.ವಿ ನಾಗರಾಜರಾವ್

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜ ರಾವ್, ಸರ್ಕಾರಿ ಜೂನಿಯರ್‍ ಕಾಲೇಜಿನ ಉಪಾನ್ಯಾಸಕರು ನಂತರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಎಂ.ಎ. ಹಾಗೂ ಬಿ.ಇಡಿ. ಸಾಹಿತ್ಯ ರತ್ನ ಪೂರೈಸಿದ್ದಾರೆ. ಜೇಮ್ಸ್ ಹ್ಯಾಡ್ಲಿ ಚೇಸ್ ಅವರ 20 ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಇವರದ್ದು. ಹಾಸ್ಯ-ವಿಡಂಬನೆ-ವೈಚಾರಿಕತೆ ಸೇರಿದಂತೆ ಸುಮಾರು 300ಕ್ಕೂ ಅಧಿಕ ಲೇಕನಗಳನ್ನು ಬರೆದಿದ್ದಾರೆ. ಇವರ ‘ಕಂಪನ’ ಕಾದಂಬರಿಯು ಚಲನಚಿತ್ರವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 1985ರಲ್ಲಿ ಶೃಂಗಾರ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಸುಮಾರು  242 ಪುಸ್ತಕಗಳನ್ನು ಪ್ರಕಟಿಸಿದ್ದು, ಕರ್ನಾಟಕ ಸರ್ಕಾರದಿಂದ ‘ಪುಸ್ತಕ ಸೊಗಸು’ ಪ್ರಶಸ್ತಿ ಪಡೆದಿದ್ದಾರೆ.  ಅನುವಾದಿತ ಕೃತಿಗಳು : ಜೇಮ್ಸ್‌ ಹ್ಯಾಡ್ಲಿ ...

READ MORE

Related Books