ಕನ್ನಡ ಸಾಹಿತ್ಯ ಸಂಚಯ

Author : ಭೀಮಾಶಂಕರ ಬಿರಾದಾರ

Pages 112

₹ 65.00




Year of Publication: 2023
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ
Address: ಸರಸ್ವತಿ ಗೋದಾಮು, ಕಲಬುರಗಿ- 585101
Phone: 9448124431

Synopsys

`ಕನ್ನಡ ಸಾಹಿತ್ಯ ಸಂಚಯ’ ಡಾ. ಭೀಮಾಶಂಕರ ಬಿರಾದಾರ ಅವರ ಸಂಪಾದಿತ ಸಾಹಿತ್ಯ ಸಂಚಯ ಕೃತಿಯಾಗಿದೆ. ಕೃತಿ ಕುರಿತು ಸಂಪಾದಕರು ಹೀಗೆ ಹೇಳಿದ್ದಾರೆ; ಯುವ ಸಮುದಾಯವೊಂದು ತನ್ನ ಕಾಲದ ತಲ್ಲಣಗಳನ್ನು ಎದುರಿಸಬೇಕಾದ ಸಾಧ್ಯತೆಗಳು ಬಸವರಾಜ ಕಟ್ಟಿಮನಿ ಅವರ ಆತ್ಮಕತೆಯ ಆಯ್ದ ಭಾಗದ ಓದಿನೊಂದಿಗೆ ಅರಿಯಲು ಅನುಕೂಲವೆಂದು ಆಯ್ಕೆಮಾಡಲಾಗಿದೆ. ಗಿರೀಶ್ ಕಾರ್ನಾಡ ಅವರ 'ತಲೆದಂಡ' ಮತ್ತು ಸಿದ್ಧಲಿಂಗಯ್ಯನವರ 'ಏಕಲವ್ಯ' ನಾಟಕದ ತಲಾ ಒಂದು ದೃಶ್ಯ ಮಾತ್ರ ಆಯ್ಕೆ ಮಾಡಲಾಗಿದೆ. ಅಧಿಕಾರದ, ಪ್ರಭುತ್ವದ, ಜ್ಞಾನದ ಸಂಕಥನವನ್ನು ವಿದ್ಯಾರ್ಥಿಗಳ ಅರಿವನ್ನು ಈ ಎರಡು ನಾಟಕದ ದೃಶ್ಯಗಳಿಂದ ವಿಸ್ತರಿಸಬಹುದು. 'ತಲೆದಂಡ' ಮತ್ತು 'ಏಕಲವ್ಯ' ಎರಡೂ ನಾಟಕಗಳ ಪೂರ್ಣ ಪಠ್ಯ ಓದಿ ವಿದ್ಯಾರ್ಥಿಗಳು ಚರ್ಚಿಸಿದರೆ ಹಲವು ಹೊಳವು ದೊರಕಬಹುದೆಂದು ಆಶಿಸುವೆ. ಎರಡನೇ ಘಟಕದಲ್ಲಿ ತಾತ್ವಿಕ ಲೇಖನಗಳಿವೆ. ಯುವಕರ ಪ್ರತಿಭೆಯ ಪೋಲಾಗುವಿಕೆ, ಭಾಷಾ ಮಾಧ್ಯಮ, ಸಾಹಿತ್ಯ ಮತ್ತು ಸಮಾಜದ ಅಂತರ್‌ಸಂಬಂಧ ಹಾಗೂ ಕನ್ನಡ ಜಗತ್ತು ರೂಪುಗೊಂಡ ಬಗೆಯನ್ನು ಪಿ. ಲಂಕೇಶ್, ದೇವನೂರು ಮಹಾದೇವ, ಎಚ್. ಟಿ. ಪೋತೆ, ವಿಕ್ರಮ ವಿಸಾಜಿ ಅವರ ತಾತ್ವಿಕ ಚಿಂತನೆಗಳಿಂದ ವಿದ್ಯಾರ್ಥಿಗಳಲ್ಲಿ ಅರಿವಿನ ಪ್ರಜ್ಞೆಯೊಂದು ಮೂಡಿಸಬಹುದಾಗಿದೆ. ಈ ಎರಡು ಘಟಕದ ಲೇಖನಗಳ ಓದು ವಿದ್ಯಾರ್ಥಿಗಳಲ್ಲಿ ಹೊಸ ಅರಿವು, ಚಿಂತನೆಯನ್ನು ಮೂಡಿಸುತ್ತದೆಂಬ ನಂಬಿಕ ನಮ್ಮದು ಎನ್ನುತ್ತಾರೆ.

About the Author

ಭೀಮಾಶಂಕರ ಬಿರಾದಾರ

ಭೀಮಾಶಂಕರ ಬಿರಾದಾರ ಅವರು ಮೂಲತಃ ಕಲಬುರಗಿಯವರು. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಕನ್ನಡ ಸಾಹಿತ್ಯ ಸಂಚಯ, ದೇಶಾಂಶ ಹುಡಗಿ ...

READ MORE

Related Books