ಮತ್ತೊಮ್ಮೆ ಭಗವದ್ಗೀತೆ

Author : ಡಿ.ವಿ. ಪ್ರಹ್ಲಾದ್

₹ 200.00

Buy Now

Synopsys

ಲೇಖಕ ಡಿ. ವಿ. ಪ್ರಹ್ಲಾದ್ ಅವರ ಸಂಪಾದಿತ ಕೃತಿ ʻಮತ್ತೊಮ್ಮೆ ಭಗವದ್ಗೀತೆ- ಹಲವು ನೋಟಗಳುʼ. ಪುಸ್ತಕದಲ್ಲಿ “ಕಾಲಕಾಲವೂ ದೇಶ ದೇಶವೂ ತಮ್ಮ ತಮ್ಮ ಉಪಾಧಿಗಳಿಂದ ಗೀತೆಯನ್ನು ಬಂಧಿಸ ಹೊರಟರೂ, ಯಾವ ದೇಶದ ಮತ್ತು ಕಾಲದ ಹಿಡಿತಕ್ಕೂ ಅದು ಸಂಪೂರ್ಣವಾಗಿ ಅಳವಡಿಸಿಕೊಳ್ಳದೆ ತನ್ನ ಪ್ರವಚನ ಪ್ರಚೋದನಾ ಸಾಮರ್ಥ್ಯವನ್ನು ಉಳಿಸಿಕೊಂಡೇ ನಡೆಯುತ್ತಿದೆ. ಗೀತೆಯ ಸ್ವಾರಸ್ಯವನ್ನು ಬುದ್ಧಿಯೊಂದೇ ಅಲ್ಲ, ಹೃದಯವೂ ಕಂಡುಕೊಳ್ಳಬೇಕಾಗಿರುವುದರಿಂದ, ಈ ವಾಗಮೃತವನ್ನು ವಿಪುಲಾರ್ಥವುಳ್ಳ 'ಧ್ವನಿ' ಕಾವ್ಯವೆಂದು ಕರೆಯಬಹುದು” ಎಂದು ಹೇಳಲಾಗಿದೆ.

About the Author

ಡಿ.ವಿ. ಪ್ರಹ್ಲಾದ್

ಕವಿ ಡಿ. ವಿ. ಪ್ರಹ್ಲಾದ್ ಅವರು ಮೂಲತಃ ಬೆಂಗಳೂರಿನವರು. 'ಡೀಮರ್', 'ನಾಳೆಯಿಂದ', 'ದಯಾ... ನೀ ಭವಾ... ನೀ' - ಪ್ರಕಟಿತ ಕವನ ಸಂಕಲನ. 'ಹೊಳೆದದ್ದು ತಾರೆ' - ಆಯ್ದ ಸಂಪಾದಕೀಯ. 'ಅನುದಿನವಿದ್ದು' - ಅಗಲಿದ ಲೇಖಕರ ನೆನಪುಗಳ ಸಂಗ್ರಹ. ‘ಎ. ಕೆ. ರಾಮಾನುಜನ್ ಹೆಜ್ಜೆಗುರುತು' ಸಹ ಸಂಪಾದಿತ ಕೃತಿ, 'ಬಗೆ ತೆರೆದ ಬಾನು'- ಸಾಹಿತಿಗಳ ಸಂದರ್ಶನ ಸಂಕಲನ, 'ಮುಕ್ತ ಛಂದ'- ಶಾಂತಿನಾಥ ದೇಸಾಯಿ ವ್ಯಕ್ತಿ ಕುರಿತ ಅನೇಕ ಕೃತಿಗಳನ್ನು ಸಂಪಾದಿಸಿದ್ಧಾರೆ. `ಸಂಚಯ’ ಸಾಹಿತ್ಯ ಪತ್ರಿಕೆಯ ನಿರಂತರ ಮೂರು ದಶಕಗಳಿಂದ ಸಂಪಾದಿಸಿ ಪ್ರಕಟಿಸುತ್ತಿದ್ದರು. ...

READ MORE

Related Books