ಶಿವಕೋಟ್ಯಾಚಾರ್ಯ ವಿರಚಿತ ವಡ್ಡಾರಾಧನೆ

Author : ಡಿ.ಎಲ್. ನರಸಿಂಹಾಚಾರ್‌

Pages 354

₹ 160.00




Year of Publication: 2014
Published by: ಡಿ.ವಿ.ಕೆ. ಮೂರ್ತಿ
Address: ಮೈಸೂರು 4

Synopsys

ಬ್ರಾಜಿಷ್ಣು ರಚಿಸಿದ ವಡ್ಡಾರಾಧಣೆಯನ್ನು ಹಿರಿಯ ವಿದ್ವಾಂಸ ಡಿ.ಎಲ್. ನರಸಿಂಹಾಚಾರ್‌ ಅವರು ಸಂಪಾದಿಸಿದ್ದಾರೆ. ಈ ಪುಸ್ತಕದ ಬಗ್ಗೆ ಪೀಠಿಕೆಯಲ್ಲಿ ಡಿಎಲ್‌ಎನ್‌ ಅವರು ಬರೆದಿರುವ ಮಾತುಗಳು ಹೀಗಿವೆ- 'ವಡ್ಡಾರಾಧನೆ' ಹತ್ತೊಂಬತ್ತು 'ಮಹಾಪುರುಷರ್ಕಳ ಕಥೆಗಳಂ' ಹೇಳುವುದಾಗಿದೆ. ಈ ಕಥೆಗಳೆಲ್ಲ ಧರ್ಮಕಥೆಗಳು, ಅವುಗಳ ನಾಯಕರೆಲ್ಲ ಧರ್ಮವೀರರು; ಕೆಲವರು ಮೋಕ್ಷವನ್ನು ಸಂಪಾದಿಸಿಕೊಳ್ಳುತ್ತಾರೆ, ಕೆಲವರು ಮೋಕ್ಷಕ್ಕೆ ನೆರೆಮನೆ ಯಾದ ಸರ್ವಾರ್ಥ ಸಿದ್ದಿಯೆಂಬ ಸ್ವರ್ಗಕ್ಕೆ ಹೋಗುತ್ತಾರೆ; ಅವರು ಪಡೆದ ಸಿದ್ದಿಗಳು ಇವು. ಅವರಿಗೆ ಇವು ಉಂಟಾದದ್ದು ಪುಣ್ಯಪಾಪ ರೂಪವಾದ ಕರ್ಮ ಕ್ಷಯದಿಂದ ಅಥವಾ ಅದರ ಉಪಶಮನದಿಂದ. ಈ ಮೂಲದಲ್ಲಿರುವ ಕಥೆಗಳು ಒಂದೊಂದೇ ಗಾಹೆಯಲ್ಲಿ ನಿರೂಪಿತವಾಗಿವೆ. ಅವು ಅತಿ ಸಂಕ್ಷಿಪ್ತವಾಗಿವೆ ; ಕಥೆಗಳ ಯಾವ ವಿವರಗಳೂ ಅಲ್ಲಿ ದೊರೆಯುವುದಿಲ್ಲ. ಹರಿಷೇಣನೂ ಕೋಗಳಿಯ ಶಿವಕೋಟಿಯೂ ಈ ಕಥೆಗಳನ್ನು ಸವಿಸ್ತರವಾಗಿಯೂ ಸಾಲಂಕಾರವಾಗಿಯೂ ನಿರೂಪಿಸಿದ್ದಾರೆ. ಹರಿಷೇಣನಿಗಿಂತ ಶಿವಕೋಟಿಯು ಹೆಚ್ಚು ವಿವರಗಳನ್ನು ಕೊಡುತ್ತಾನೆ. ಹರಿಷೇಣನು 'ಅಭಿನಂದನಮುನಿ ಕಥಾನಕ'ವನ್ನು ಅತಿ ಸಂಗ್ರಹವಾಗಿ ೮ ಶ್ಲೋಕಗಳಲ್ಲಿ ಯಾವ ವರ್ಣನೆಗೂ ಹೋಗದೆ ಸುದ್ದಿಯನ್ನು ತಿಳಿಸುವ ವರದಿಗಾರನಂತೆ ಹೇಳಿದ್ದಾನೆ. ಇದೇ ಕಥೆ 'ವಡ್ಡಾರಾಧನೆ'ಯಲ್ಲಿ ಮಹೇಂದ್ರದತ್ತಾ ಚಾತ್ಯರ್ ಮೊದಲಾದ ಅಯೂರ್ವರ್ ರಿಸಿಯರ್ಕಳ ಕಥೆ” ಎಂಬ ಹೆಸರಿನಿಂದ ಸಪರಿಕರವಾಗಿ, ಸರಸವಾಗಿ, ಕುತೂಹಲಕಾರಕವಾಗಿ ಹೃದ್ಯವಾದ ಗದ್ಯದಲ್ಲಿ ಐದು ಪುಟಗಳಲ್ಲಿ ನಿರೂಪಿತವಾಗಿದೆ. ಆದ್ದರಿಂದ ಈ ಇಬ್ಬರು ಕವಿಗಳು ತಮಗೆ ಸಿಕ್ಕ ಮೂಲ ಸಾಮಗ್ರಿಯನ್ನು ತಮಗೆ ಇಷ್ಟಬಂದ ಹಾಗೆ ಬಳಸಿಕೊಂಡಿದ್ದಾರೆಂದು ಭಾವಿಸ ಬಹುದು. ಇವರಿಬ್ಬರಿಗೆ ಸಮಾನ ಮೂಲವೊಂದು ಇದ್ದಿತೆಂದೂ ಅದು 'ಭಗವತೀ ಆರಾಧನಾ' ಗ್ರಂಥಕ್ಕೆ ಇದ್ದಿರಬಹುದಾದ ಯಾವುದೋ ಪ್ರಾಕೃತ ವ್ಯಾಖ್ಯಾನವೆಂದೂ ಡಾ, ಆ, ನೇ. ಉಪಾಧ್ಯೆಯವರು ಕೆಲವು ಆಧಾರಗಳ ಮೇಲೆ ಊಹಿಸಿದ್ದಾರೆ. ಇದು ಅತ್ಯಂತ ಸಂಭವನೀಯವೆಂದೂ ಪರಿಗ್ರಾಹ್ಯಯೋಗ್ಯವೆಂದೂ ತೋರುತ್ತದೆ. ಈ ಮೂಲದಲ್ಲಿ ಒಂದೊಂದು ಗಾಹೆಯಲ್ಲೇ ಸೂಚಿತವಾಗಿದ್ದ ಕಥೆಗಳನ್ನು ವ್ಯಾಖ್ಯಾನ ದಲ್ಲಿ ವಿಸ್ತರಿಸಿ ನಿರೂಪಣೆ ಮಾಡಿದ್ದಿತೆಂದು ಹೇಳಬಹುದು. ಈ ವಿಸ್ತ್ರತ ಕಥೆಗಳನ್ನು ಕವಿಯ ದೃಷ್ಟಿಯಿಂದ ಹರಿಷೇಣನೂ ಶಿವಕೋಟಿಯೂ ನೋಡಿ ಅವುಗಳ ನಿರೂಪಣೆ ಯಲ್ಲಿ ತಮ್ಮ ಕೌಶಲ್ಯವನ್ನೂ ಪ್ರತಿಭೆಯನ್ನೂ ಪ್ರಕಾಶಪಡಿಸಿರುವರೆಂದು ತಿಳಿಯ ಬಹುದು....'ವಡ್ಡಾರಾಧನೆ'ಯ ನಿರೂಪಣೆ, ಸಂನಿವೇಶ ನಿರ್ಮಾಣ, ಪಾತ್ರರಚನೆ, ರಸಾವಿಷ್ಕರಣ, ಗದ್ಯದ ರಮಣೀಯತೆ, ವಾಕ್ಯಗಳ ವೈವಿಧ್ಯ, ಧ್ವನಿ-ಇವೆಲ್ಲ ಹರಿಷೇಣನ ಕೃತಿಯಲ್ಲಿ ಇರುವುದಕ್ಕಿಂತ ಅಧಿಕ ಪ್ರಮಾಣದಲ್ಲೂ ಗುಣದಲ್ಲೂ 'ವಡ್ಡಾರಾಧನೆ'ಯಲ್ಲಿ ಇವೆಯೆಂದು ಸ್ಥಾಪಿಸಲು ಸಾಧ್ಯವಾಗುತ್ತದೆ. ಈ ತೋಲನಾತ್ಮಕ ದೃಷ್ಟಿಯಿಂದಲೇ ಈ ಕೃತಿಯ ಮೌಲ್ಯವಿಚಾರ ನಡೆಯಬೇಕಾಗಿದೆ. ಈ ಕೃತಿಯು ಇದುವರೆಗೆ 16 ಮುದ್ರಣಗಳನ್ನು ಕಂಡಿದೆ.

About the Author

ಡಿ.ಎಲ್. ನರಸಿಂಹಾಚಾರ್‌
(27 October 1906 - 01 May 1971)

ಪಂಡಿತ- ಸಂಶೋಧಕ ಶ್ರೇಷ್ಠ ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ಯ ಅವರನ್ನು ಕನ್ನಡ ಸಾಹಿತ್ಯ- ಸಂಶೋಧನೆಗೆ ಸಂಬಂಧಿಸಿದಂತೆ ಚಲಿಸುವ ವಿಶ್ವಕೋಶ ಎಂದು ಗುರುತಿಸಲಾಗುತ್ತಿತ್ತು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ 1906ರ ಅಕ್ಟೋಬರ್ 27ರಂದು ಜನಿಸಿದರು. ತಂದೆ ಶ್ಯಾಮಯ್ಯಂಗಾರ್, ತಾಯಿ ಲಕ್ಷ್ಮಮ್ಮ. ಬಾಲ್ಯದ ವಿದ್ಯಾಭ್ಯಾಸವನ್ನು ಪಾವಗಡ, ಸಿರಾ ತುಮಕೂರುಗಳಲ್ಲಿ ಮುಗಿಸಿ 1924ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು. ಎಂ.ಎ. ಪದವಿ (1929) ಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು. ಮೈಸೂರು ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‍ನಲ್ಲಿ ರೆಸಿಡೆಂಟ್ ಕನ್ನಡ ಪಂಡಿತ (1930) ಆಗಿ ನೇಮಕವಾದರು. ಕನ್ನಡ ಅಧ್ಯಾಪಕ (1939), ಪ್ರಾಧ್ಯಾಪಕ (1956) ಆಗಿ ...

READ MORE

Related Books