ಶ್ರೀ ಚೈತನ್ಯ ಸಂಭ್ರಮ

Author : ಮಲ್ಲೇಪುರಂ ಜಿ. ವೆಂಕಟೇಶ್‌

Pages 176
Year of Publication: 2018
Published by: ಟಚ್ ಸ್ಟೋನ್ ಪ್ರತಿಷ್ಠಾನ
Address: ಹರೇಕೃಷ್ಣಗಿರಿ, ಕಾರ್ಡ್ ರಸ್ತೆ, ರಾಜಾಜಿನಗರ, ಬೆಂಗಳೂರು-560010
Phone: 08023471956

Synopsys

ಶ್ರೀ ಚೈತನ್ಯ ಸಂಭ್ರಮ-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಶ್ರೀ ಚೈತನ್ಯರ ಕುರಿತು ವಿವಿಧ ಲೇಖಕರ ಬರಹಗಳನ್ನು ಸಂಪಾದಿಸಿದ ಕೃತಿ ಇದು. ಶ್ರೀ ವಿಶ್ವೇಶತೀರ್ಥರು ಶ್ರೀಪಾದಂಗಳೂ, ಮಧುಪಂಡಿತ ದಾಸ, ವ್ಯಾಸನಕೆರೆ ಪ್ರಭಂಜನಾಚಾರ್ಯ, ಆರ್. ವೆಂಕಟರಾವ್ ಹಾಗೂ ಭಾಗ=2 ರಲ್ಲಿ ಪ್ರಸಂಗಾವಧಾನಗಳನ್ನು ಸಂಪಾದಿಸಿದ್ದಾರೆ. ಜಗಾಯ್ ಮತ್ತು ಮಧಾಯ್ ಪ್ರಸಂಗ, ಕೇಶವ ಕಾಶ್ಮೀರಿ ಪ್ರಸಂಗ, ಪ್ರತಾಪರುದ್ರ ಪ್ರಸಂಗ, ಶ್ರೀಚೈತನ್ಯರ ಬಾಲ್ಯಕಾಂಡ, ಛಾಂದಖಾಜಿ ಪ್ರಸಂಗ, ಪ್ರಕಾಶಾನಂದ ಸರಸ್ವತಿ ಪ್ರಸಂಗಗಳ ಕುರಿತು ಪ್ರಸ್ತಾಪಿಸಿ ಬರೆದ ಬರಹಗಳನ್ನು ಒಳಗೊಂಡಿವೆ.  

ಬಂಗಾಳದ ನವದ್ವೀಪದಿಂದ ಓಡಿಸ್ಸಾದ ಪುರಿಯಲ್ಲಿ ನೆಲೆನಿಂತ ಶ್ರೀ ಚೈತನ್ಯ (1486-1534) ಮಹಾಪ್ರಭುಗಳು ಸಂಗೀತ, ಕಲೆ, ಸಾಹಿತ್ಯ, ಧಾರ್ಮಿಕ ಹೀಗೆ ವಿವಿಧ ವಲಯಗಳ ಮೇಲೆ ತಮ್ಮದೇ ಆದ ಶ್ರೀ ಕೃಷ್ಣಪ್ರಜ್ಞೆಯ ಪ್ರಭಾವ ಬೀರಿದವರು. ಬ್ರಹ್ಮ ಸಮಾಜ, ರಾಮಕೃಷ್ಣ ಮಿಷನ್ ಮುಂತಾದ ಸಂಸ್ಥೆಗಳ ಮೇಲೂ ಶ್ರೀ ಚೈತನ್ಯರ ಪ್ರಭಾವವಿದೆ. ಭಾರತ ಕಂಡ ಮಹಾವೇದಾಂತಿಗಳ ಪೈಕಿ ಶ್ರೀ ಚೈತನ್ಯರು ಪ್ರಮುಖರು. ತಮ್ಮ ಭಕ್ತ ಸಮೂದಾಯಕ್ಕೆ `ಹರೇ ಕೃಷ್ಣ ಹರೇ ರಾಮ' ಎಂಬ ಮಂತ್ರವನ್ನು ನೀಡಿದವರು ಶ್ರೀ ಚೈತನ್ಯರೇ! `ದೇಹವು ಮಣ್ಣು ಹಾಗೂ ನಾವು ಉಣುವ ವಸ್ತುವೂ ಮಣ್ಣು' ಎಂಬ ವೈರಾಗ್ಯದ ಸೂತ್ರವನ್ನು ಜನತೆಗೆ ಬೋಧಿಸಿದರು. ಜಾತಿ, ಮತ ಬೇಧಗಳನ್ನು ತೊರೆದರೆ ಭಗವಂತನ ಅನುಗ್ರಹ ಸಾಧ್ಯ ಎಂಬುದನ್ನು ಜಾತ್ಯತೀತವಾಗಿ ಸಾರಿದವರು. ಈ ಮಹಾನ್ ಚೇತನರ ದಿವ್ಯ ಬದುಕು-ಸಂದೇಶಗಳನ್ನು ಒಳಗೊಂಡ ಕೃತಿ ಇದು.

About the Author

ಮಲ್ಲೇಪುರಂ ಜಿ. ವೆಂಕಟೇಶ್‌
(05 June 1952)

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಮಲ್ಲೇಪುರಂ ಜಿ. ವೆಂಕಟೇಶ ಅವರು 1952, ಜೂನ್ 5ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್‌ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ,  ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿAದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ‍್ಯಾಂಕಿನೊಡನೆ ಕುವೆಂಪು ಚಿನ್ನದ ...

READ MORE

Related Books