ಪ್ರೊ. ಮಲ್ಲೇಪುರಂ: ಸಹಸ್ಪಂದನ

Author : ಎಂ.ಬಿ. ಕಟ್ಟಿ

Pages 208

₹ 150.00
Year of Publication: 2018
Published by: ಉದಯ ಪ್ರಕಾಶನ
Address: #984, 11ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು- 560010
Phone: 08023389143

Synopsys

‘ಪ್ರೊ. ಮಲ್ಲೇಪುರಂ: ಸಹಸ್ಪಂದನ’ ಕೃತಿಯನ್ನು ಡಾ.ಎಂ.ಬಿ. ಕಟ್ಟಿ ಅವರು ಸಂಪಾದಿಸಿದ್ದಾರೆ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ನಮ್ಮ ನಡುವಿನ ಅಪರೂಪದ ಬಹುಶ್ರುತ ವಿದ್ವಾಂಸರಲ್ಲೊಬ್ಬರು. ಸಂಸ್ಕೃತ ಮತ್ತು ಕನ್ನಡ ಭಾಷೆ- ಸಾಹಿತ್ಯ- ಸಂಸ್ಕೃತಿಗಳಲ್ಲಿ ಸಮದಂಡಿಯಾದ ವಿದ್ವತ್ತನ್ನು ಸಂಪಾದಿಸಿಕೊಂಡು ಅವದನ್ನು ಮಾತು, ಉಪನ್ಯಾಸ, ಬರಹಗಳಲ್ಲಿ ನಿರಂತರವಾಗಿ ಧಾರೆ ಎರೆಯುತ್ತಲೇ ಬಂದಿದ್ದಾರೆ. ಶಂಬಾ ಜೋಷಿಯವರಿಂದ ಹಿಡಿದು ಶಿವತತ್ತ್ವರತ್ನಾಕರ ವರೆಗೆ ಸಂಶೋಧನಾ ಜಗತ್ತಿನಲ್ಲಿ ವಿಹರಿಸಿ, ನಾರಿಕೇಳ ಪಾಕವನ್ನು ಕಾಂತಾಸಮ್ಮಿತದಲ್ಲಿ ರಸವತ್ತಾಗಿ ಉಣಬಡಿಸುತ್ತಿರುವುದು ಅವರಿಗೆ ಅವರೇ ಸಾಟಿ ಎನಿಸುವಂಥ ಪ್ರತಿಭಾ ಸಾಹಸ. ಈ ಎಲ್ಲವನ್ನೂ ಸಹೃದಯರಿಗೆ ಪರಿಚಯಿಸುವ ಉದ್ದೇಶದಿಂದ ಅಭಿನಂದನ ಗೌರವದ ಇನ್ನೊಂದು ಮಾದರಿಯಾಗಿ ಈ ಕೃತಿ ರೂಪಿತವಾಗಿದೆ.

ಮಲ್ಲೇಪುರಂ ಅವರ ಗೌರವಾದರಗಳಿಗೆ ಪಾತ್ರರಾದ ಹಿರಿಯರು, ಅವರೊಂದಿಗೆ ಒಡನಾಡಿ ಜೊತೆಯಲ್ಲಿ ಹೆಜ್ಜೆಹಾಕಿದ ಗೆಳೆಯರು, ಅವರ ವಿದ್ವತ್ತು ಮತ್ತು ಪ್ರೀತಿಗೆ ಮಣಿದು ಸತತ ಸಂಪರ್ಕವಿರಿಸಿಕೊಂಡಿರುವ ಪ್ರತ್ಯಕ್ಷ, ಅದಕ್ಕಿಂತ ಮಿಗಿಲಾದ ಪರೋಕ್ಷ ಶಿಷ್ಯರು ಬದುಕು ವ್ಯಕ್ತಿತ್ವ ಸಾಧನೆಗಳನ್ನು ಕುರಿತು ಪ್ರೀತಿ ಅಭಿಮಾನಗಳಿಂದ ಬರೆದ ಲೇಖನಗಳನ್ನು ಸಹಸ್ಪಂದನ ಒಳಗೊಂಡಿದೆ.

Related Books