ನಾನು ಕನಸಿಗ

Author : ನರಹಳ್ಳಿ ಬಾಲಸುಬ್ರಹ್ಮಣ್ಯ

Pages 172

₹ 200.00
Year of Publication: 2022
Published by: ಅಭಿನವ ಪ್ರಕಾಶನ
Address: # 17, 18 - 2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ಪಿಎಫ್ ಬಡಾವಣೆ, ವಿಜಯನಗರ, ಬೆಂಗಳೂರು-560040
Phone: 094488 04905

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿ.ಕೃ.ಗೋಕಾಕ್ ಅವರ ಜೀವನ ಮತ್ತು ಸಾಹಿತ್ಯ ಕುರಿತು ಒಂದು ಹೊಸ ನೋಟವನ್ನು ನೀಡುವ ಕೃತಿ-ನಾನೂ ಕನಸಿಗ. ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಸಂಪಾದಕರು. ಕಲೋಪಾಸಕ ಮತ್ತು ಇತರ ಕವಿತೆಗಳು ಸಂಕಲನಕ್ಕೆ ದ.ರಾ.ಬೇಂದ್ರೆ ಅವರು ಬರೆದ ಮುನ್ನುಡಿಯಲ್ಲಿ ‘ಗೋಕಾಕರ ನೀಳ್ಗವಿತೆಗಳನ್ನು ಒಂದು ಕನಸಿನ ಮಾಯೆ ಆವರಿಸಿಕೊಂಡಿದೆ. ಬ್ಲೇಕ್, ಕೊಲರಿಜ್ ಮೊದಲು ಮಾಡಿಕೊಂಡು ಏಟ್ಸ್ ಮೊದಲಾದ ಕವಿಗಳವರೆಗೂ ಅನೇಕರು ತಮ್ಮ ಸಾಹಿತ್ಯರಂಗವನ್ನು ತಮ್ಮ ಸ್ವಪ್ನಗಳಿಗೆ ಒಡ್ಡಿದ್ದಾರೆ. ಆದ್ದರಿಂದ, ಆಂಗ್ಲ ವಾಙ್ಮಯವು ಹೊಸ ಹಾದಿಯನ್ನು ಕಂಡಿದೆ. ಕಾವ್ಯಸೃಷ್ಟಿಯೇ ಒಂದು ಬಗೆಯ ಶಾಬ್ಧಿಕ ಸ್ವಪ್ನ ಸೃಷ್ಟಿಯಿದ್ದಂತೆ. ಇವೆರಡರಲ್ಲೂ ವಾಚ್ಯಕ್ಕಿಂತ ಧ್ವನಿಗೇ ಪ್ರಾಧಾನ್ಯತೆ ಹೆಚ್ಚು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಮಹತ್ವದ ಅಭಿಪ್ರಾಯಗಳ ವಿವಿಧ ಲೇಖಕರ ಬರಹಗಳನ್ನು ಇಲ್ಲಿ ಸಂಗ್ರಹಿಸಿ, ಸಂಪಾದಿಸಿದ್ದು ಮತ್ತು, ಈ ಬರಹಗಳ ಬೆಳಕಿನಲ್ಲಿ ಗೋಕಾಕರ ಬದುಕು ಹಾಗೂ ಸಾಹಿತ್ಯದ ಮೇಲೆ ಹೊಸ ನೋಟಗಳ, ಹರವುಗಳ ವಿಸ್ತರಣೆಯೂ ಸಾಧ್ಯವಾಗುತ್ತದೆ ಎಂಬುದು ಈ ಕೃತಿಯ ವೈಶಿಷ್ಟ್ಯ.

About the Author

ನರಹಳ್ಳಿ ಬಾಲಸುಬ್ರಹ್ಮಣ್ಯ
(05 September 1953)

ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಮಂಡ್ಯ ಜಿಲ್ಲೆಯ ನರಹಳ್ಳಿಯಲ್ಲಿ1953 ಸೆಪ್ಟೆಂಬರ್ 5ರಂದು ಜನಿಸಿದರು. 1973ರಲ್ಲಿ ಬಿ.ಎ. (ಆನರ್), 1975ರಲ್ಲಿ ಎಂ.ಎ. ಪದವಿಗಳನ್ನು ಪ್ರಥಮ ಬ್ಯಾಂಕ್, ಚಿನ್ನದ ಪದಕಗಳೊಂದಿಗೆ ಪಡೆದ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ರಾಜ್ಯಪ್ರಶಸ್ತಿ ಮನ್ನಣೆ ಗಳಿಸಿದ್ದರು. ಭಾರತ ಸರ್ಕಾರದ ಪ್ರತಿಭಾ ವಿದ್ಯಾರ್ಥಿವೇತನ ಪಡೆದವರು. 1992ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ.  ಪಡೆದಿರುವ ನರಹಳ್ಳಿಯವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. 'ಅನುಸಂಧಾನ', 'ನವ್ಯತೆ', 'ಇಹದ ಪರಿಮಳದ ಹಾದಿ', 'ಸಾಹಿತ್ಯ ಸಂಸ್ಕೃತಿ', “ಕುವೆಂಪು ನಾಟಕಗಳ ಅಧ್ಯಯನ', ...

READ MORE

Related Books