ಸಂಶೋಧನ

Author : ಲಕ್ಷ್ಮಣ್ ತೆಲಗಾವಿ

Pages 1022

₹ 400.00




Published by: ಚಿಂದಾನಂದ ಮೂರ್ತಿ ಕಮ್ಯೂನಿಟಿ
Address: 3, ರಾಗಿಣೀ ಸರ್ವೀಸ್ ರೋಡ್, ವಿಜಯನಗರ 2ನೇ ಹಂತ, ಬೆಂಗಳೂರು

Synopsys

’ಸಂಶೋಧನ’ ಗ್ರಂಥವು ಲಕ್ಷ್ಮಣ್ ತೆಲಗಾವಿ ಅವರ ಸಂಪಾದನಾ ಕೃತಿ. ಈ ಅಧ್ಯಯನ ಗ್ರಂಥವು ಎರಡು ವಿಭಾಗಗಳನ್ನು ಹೊಂದಿದೆ. ಪ್ರಥಮ ಹಂತದಲ್ಲಿ ಲೇಖನಗಳು, ಭಾಷೆ-ಸಾಹಿತ್ಯ-ಸಂಸ್ಕೃತಿ-ಶಾಸನ-ಚರಿತ್ರೆ-ಕಲೆಯ ಅಧ್ಯಯನವಾಗಿದ್ದು, ಎರಡನೇ ವಿಭಾಗದಲ್ಲಿ ಡಾ. ಎಂ. ಚಿದಾನಂದ ಮೂರ್ತಿಯವರ ಬದುಕು ಬರಹ -ಆತ್ಮಕಥನವನ್ನು ಒಳಗೊಂಡಿದೆ. 1.ಕನ್ನಡದ ಧ್ವನಿ ವಿಶ್ಲೇಷಣೆಯ ಬೆಳಕಿನಲ್ಲಿ ಇಂದಿನ ಬರವಣಿಗೆಯ ಪುನರವಲೋಕನವು:(ಬಿ. ಬಿ. ರಾಜಪುರೋಹಿತ), 2. ಭಾಷಾ ಆಧುನೀಕರಣ : ರಾಚನಿಕ ಮತ್ತು ಸಮಾಜೋಭಾಷಿಕ ಆಯಾಮಗಳು (ಎಸ್. ಎನ್. ಶ್ರೀಧರ್) 3. ಕನ್ನಡ ಸ್ವರಗಳ ಸ್ಪೆಗ್ರಾಫಿಕ್ ವಿಶ್ಲೇಷಣೆ (ಎಚ್. ಎಂ. ಮಹೇಶ್ವರಯ್ಯ). 4. ಧ್ವನಿಮಾ ವಿಜ್ಞಾನ: ವಿಶ್ಲೇಷಣೆ: ಒಂದು ಟಿಪ್ಪಣಿ: (ರಾಜಗೋಪಾಲ), 5. ಕವಿರಾಜಮಾರ್ಗ ಪೂರ್ವದ ಕೆಲವು ಅಪೂರ್ವ ಛಂದೋಬಂಧಗಳು (ಎಂ. ಬಿ. ನೇಗಿನಹಾಳ), 6. ಏಳೆಯ ಸ್ವರೂಪ (ಎಂ. ವಿ. ಸೀತಾರಾಮಯ್ಯ) 7. ವಿಷ್ಣು ರಗಳೆ ( ಕೆ. ಟಿ, ನಾರಾಯಣಪುಸಾದ್), 8. ಉಯ್ಯಾಲೆಗಣ ಮತ್ತು ಅಪೂರ್ವಲಯ : ಒಂದು ಪ್ರತಿಕ್ರಿಯೆ (ಎಸ್. ಎಸ್. ಲಕ್ಷ್ಮೀನಾರಾಯಣ ಭಟ್ಟ), 9. ಕೆಲವು ಪಟ್ಟದಕಾವ್ಯಗಳ ಪದ್ಯಾಂತ ಶೈಲಿ ( ಕೃ, ಅನ್ಸನ್), 10. ಕಲಬುರ್ಗಿ ಮುಸಲ್ಮಾನರ ಕನ್ನಡ (ಸಂಗಮೇಶ ಸವದತ್ತಿ ಮಠ ), 11. ಕಾಸರಗೋಡು ಕನ್ನಡ : ಹವ್ಯಕ ಮತ್ತು ಕೋಟ ಕನ್ನಡಗಳಲ್ಲಿ ಕಾಣುವ ಕೆಲವು ಸಾಮ್ಯ ವ್ಯತ್ಯಾಸಗಳು (ಎಂ. ರಾಮ), 12. ಆಂಧ್ರ-ಕರ್ನಾಟಕ ಸರಹದ್ದಿನಲ್ಲಿ ಕನ್ನಡ ( ಬಿ. ರಾಮಚಂದ್ರರಾವ್), 13. 'ಗೋರ್ ಬೋಲಿ' ಸಂಖ್ಯಾ ವಾಚಿಗಳು (ಎಚ್. ಎಸ್, ಬ್ರಹ್ಮಾನಂದ), 14. ನಿಘಂಟುಶಾಸ್ತ್ರ ಮತ್ತು ಕನ್ನಡ ನಿಘಂಟುಗಳು ( ಎನ್. ಬಸವಾರಾಧ್ಯ), 15. ಸ್ಥಳನಾಮಶಾಸ್ತ್ರ (ಕೊ.ವ್ಯಾ ರಮೇಶ), 16. ಸ್ಥಳನಾಮ ಅಧ್ಯಯನದಲ್ಲಿ ಶಾಸನಗಳ ಉಪಯೋಗ (ವಿ. ಗೋಪಾಲಕೃಷ್ಣ), 17. 'ಲಿಂಗ' ಶಬ್ದ : ಜೈನ ಆಧ್ಯಾತ್ಮಿಕ ದೃಷ್ಟಿಯಲ್ಲಿ (ಎಂ. ಡಿ. ವಸಂತರಾಜ್), 18. ವಚನಕಾರರ ಶಬ್ದ ಲೋಕ (ಟಿ. ಆರ್. ಮಹಾದೇವಯ್ಯ), 19. ಬಸವಣ್ಣನವರ ವಚನಗಳಲ್ಲಿ ಭಾಷಾಪ್ರಯೋಗ: (ಎ.. ಮುರಿಗೆಪ್ಪ),  20. ಬಸವಣ್ಣನವರ ವಚನಗಳಲ್ಲಿ 'ಅನುಭಾವ' ಪದದ ಅರ್ಥವ್ಯಾಪ್ತಿ (ಎಸ್, ವಿದ್ಯಾಶಂಕರ.), 21. ಅಲ್ಲಮಪ್ರಭುವಿನ ಅಂಕಿತದ ಹಿಂದೆ ಬಸವಣ್ಣ : ಜೈನ ಕೃತಿಕಾರರು ಕಂಡಂತೆ (ವೈ, ಸಿ, ಭಾನುಮತಿ ), 22. ಚೆನ್ನಬಸವಣ್ಣನ ವಚನಗಳಲ್ಲಿ ತಾತ್ವಿಕ ನೆಲೆ (ಬಸವರಾಜ ಸಬರದ), 23. ಹರಿದಾಸ ಆಂದೋಲನದ ಸ್ವರೂಪ: (ಎನ್. ಕೆ. ರಾಮಶೇಷನ್),  24. ಸಂಕೇತವಿಜ್ಞಾನ ಮತ್ತು ಜಾನಪದ ( ವಿಲ್ಯಂ ಮಾಡ್ತ), 25. ಜನಪದ ಪುರಾಣಗಳ ಸ್ವರೂಪ ಜಿಜ್ಞಾಸೆ ( ರಾಗೌ),  26. ಪರಮಲೆಬಲ್ಲಾಳ ಪಾಡ್ದನ : ಒಂದು ಅಧ್ಯಯನ (ಪೀಟರ್ ಜೆ. ಕ್ಲಾಸ್),  27. ಓಂ. ಶ್ರೀ ರೇಣುಕಾ ಎಲ್ಲಮ್ಮನ ಸಂಪ್ರದಾಯದಲ್ಲಿ ಸಾಂಕೇತಿಕತೆ: (ಕೆ. ಜಿ. ಗುರುಮೂರ್ತಿ),  28. ದಕ್ಷಿಣ ಕರ್ನಾಟಕದಲ್ಲಿ ಮೈಲಾರಲಿಂಗ ಸಂಪ್ರದಾಯ (ಹ. ಕ ರಾಜೇಗೌಡ), 29. ಮಾಸ್ತಿ, ಜನಪದಗೀತೆಗಳು : ಮಾಸ್ತಿ ಆಚರಣೆ ಹಾಗೂ ನಂಬಿಕೆಯನ್ನು ವಿರೋಧಿಸುವ ಆಶಯ ಸೂಚಕಗಳಾಗಿ (ಬಸವರಾಜ ಕುಡಿ), 30. ಜಾನಪದದಲ್ಲಿ ವರ್ಗಸಂಬಂಧ ( ಕೃಷ್ಣಮೂರ್ತಿ ಹನೂರು), 31. ಸಸ್ಯ ಮತ್ತು ಜನಪದ ಧರ್ಮ : ಸಂಬಂಧ ಮತ್ತು ತಾತ್ವಿಕತೆ ( ಕೆ. ಚಿನ್ನಪ್ಪಗೌಡ), 32. ಕೆಲವು ಬುಡಕಟ್ಟುಗಳಲ್ಲಿ ಫಲವಂತಿಕೆ (ವಾಮನ ನಂದಾವರ), 33. ಜನಪದಕತೆಗಳಲ್ಲಿ ವಿವಾಹ ಪದ್ಧತಿಗಳ ದಾಖಲಾತಿ (ವೀರಣ್ಣ ದಂಡೆ), 34. ಪ್ರದರ್ಶಕ ಸಿದ್ಧಾಂತದ ಹಿನ್ನೆಲೆಯಲ್ಲಿ ಜನಪದಕಥೆಯೊಂದರ ಅಧ್ಯಯನ (ಎ.ವಿ. ನಾವಡ), 35. ಜಾನಪದದಲ್ಲಿ ನವರತ್ನಗಳು (ವಿ.ಎನ್. ಶಿವರಾಮು),  36. ಜನಪದ ಮದ್ಯಪಾನೀಯಗಳು: (ಎಂ.ಪಿ.ಮಂಜಪ್ಪ ಶೆಟ್ಟಿ). 37. ಜಾನಪದ ಮತ್ತು ಗೃಹವಿಜ್ಞಾನ  (ಪಿ. ಕೆ. ರಾಜಶೇಖರ), 38. ಜನಪದರು ಕಂಡ ಹನುಮಂತ ( ಮೈಲಹಳ್ಳಿ ರೇವಣ್ಣ),  39. 'ಢಗಮು' : ಒಂದು ರೋಚಕ ಜನಪದ ವಾದ್ಯ (ಮೀರಾಸಾಬಿಹಳ್ಳಿ ಶಿವಣ್ಣ), 40. ಕೈಗಾರಿಕಾ ಜಾನಪದ (ಕೆ. ಆರ್. ಸಂಧ್ಯಾರೆಡ್ಡಿ), 41. ಉತ್ತರ ಕರ್ನಾಟಕದ ಭಜನೆಯ ಹಾಡಗಳು:ಬಸವರಾಜ ಮಲಶೆಟ್ಟಿ. 42. ಉತ್ತರಕನ್ನಡದ ಯಕ್ಷಗಾನ ರಂಗಭೂಮಿ : ಸಂಪ್ರದಾಯ ಮತ್ತು ಸೃಜನಶೀಲತೆ: ಜಿ. ಎಂ. ಹೆಗಡೆ. 43. ಮಣಿಪುರಿಯ ಬುಡಕಟ್ಟಿನ ಜನಪದ ನೃತ್ಯಗಳು: ಎಸ್. ಎ. ಕೃಷ್ಣಯ್ಯ. 44. ಕಾವ್ಯಸಂಯೋಜನೆಯ ಮೂಲಾಂಶಗಳು: ವಾಮನ ಬೇಂದ್ರೆ. 45. ರಾಮಾಯಣ ಕತೆಯ ಪೌರಾಣಿಕ ಮೂಲಾಂಶಗಳು : ಒಂದು ಟಿಪ್ಪಣಿ: ಕೆ. ಎಲ್. ಗೋಪಾಲಕೃಷ್ಣಯ್ಯ. 46. ಮೂರು ಭಾರತಗಳಲ್ಲಿ ಪಾಂಡು-ಮಾದ್ರೀ ಪ್ರಸಂಗ: ಸಿ. ಪಿ. ಕೃಷ್ಣಕುಮಾರ್. 47. ಚಾರುದತ್ತನ ಕಥೆ: ಮೂಲ-ಚೂಲ: ಹಂಪ ನಾಗರಾಜಯ್ಯ. 48. ಕನ್ನಡದ ಕೆಲವು ಶ್ರೇಷ್ಠ ಶತಕಗಳು : ಸಿದ್ಧಯ್ಯ ಪುರಾಣಿಕ. 49. ವಾಹಿಲ-ಓಹಿಲ: ಆರ್‍. ರಾಚಪ್ಪ. 50. ಗೋಸಲಪೀಠ ಪರಂಪರೆಯ ಸಾಹಿತ್ಯ : ಬಿ. ಆರ್. ಹಿರೇಮಠ. 51. ಬೋಳಬಸವೇಶ್ವರ : ಒಂದು ಸ್ಕೂಲ ಅಧ್ಯಯನ : ವೀರಣ್ಣ ರಾಜೂರ. 52. ಕುಮಾರವ್ಯಾಸನ ಕೃತಿಯ ಮರಾಠಿ ಅನುವಾದ : ಒಂದು ತೌಲನಿಕ ವಿಮರ್ಶೆ : ಕೀರ್ತಿನಾಥ ಕುರ್ತುಕೋಟ. 53. ಮುದ್ಙಣ : ಋಣ ಮತ್ತು ವೃದ್ಧಿ: ಪುರುಷೋತ್ತಮ ಬಿಳಿಮಲೆ. 54. ಕಂಬ-ಕುವೆಂಪು ರಾಮಾಯಣಗಳಲ್ಲಿ ಸೀತಾಸ್ವಯಂವರ : ಎರಡು ಮಾದರಿಗಳು: ಸಾ. ಶ. ಶ್ರೀನಿವಾಸ. 55. ಸಾಹಿತ್ಯ ವಿಮರ್ಶೆಯಲ್ಲಿ ಭಾಷೆ ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯ: ಎಂ. ಎಚ್. ಕೃಷ್ಣಯ್ಯ. 56. ಔತ್ತರೇಯ ಭಾರತೀಯ ಭಾಷೆ-ಕೃತಿಗಳಲ್ಲಿ ಕರ್ನಾಟಕ ಸಂಸ್ಕೃತಿಯ ಕೆಲವು ಉಲ್ಲೇಖನಗಳು: ವಿ. ಶಿವಾನಂದ. 57. ಕನ್ನಡಿಗರ ಭಾರತೀಯ ಸಂಸ್ಕೃತಿಯ ಹುಡುಕಾಟ : ಕೆಲವು ವಿಚಾರಗಳು: ಅರವಿಂದ ಮಾಲಗತ್ತಿ. 58. ಕನ್ನಡದಲ್ಲಿ ಸಾಂಸ್ಕೃತಿಕ ಸಂಶೋಧನೆ : ಸ್ಥಿತಿ-ಗತಿ:ತಾಗ್ರಜೆ ವಸಂತಕುಮಾರ). 59. ಕನ್ನಡ ಕಾವ್ಯಗಳಲ್ಲಿ ಚಾರಿತ್ರಿಕಾಂಶಗಳ ಪ್ರಸ್ತಾಪ, ಕರ್ನಾಟಕ ಚರಿತ್ರೆಗೆ ಒಂದು ಆಕರ: ತೆಲುಗು ಸಾಹಿತ್ಯ: ಪ್ರತಿಭಾ ಚಿಣ್ಣಪ್ಪ. 60. ಕನ್ನಡ ಕಾವ್ಯಗಳಲ್ಲಿ ಸಮರಾಯುಧಗಳು : ಒಂದು ಅವಲೋಕನ : ಕೆ. ಶ್ರೀಕಂಠಯ್ಯ. 61. ಕರ್ನಾಟಕದ ಪ್ರಾಚೀನ ವಿದ್ಯಾಕೇಂದ್ರಗಳು ಮತ್ತು ಕಾಳಾಮುಖರು : ಎಚ್. ಎಸ್. ಗೋಪಾಲರಾವ್. 62. ಆಂಧ್ರಪ್ರದೇಶದ ಕಾಳಾಮುಖ ಶೈವರು: ರಾ. ಗಣೇಶ. 63. ಎಕ್ಕೋಟಿ ಜಿನಾಲಯಗಳು: ಸಿ. ಯು, ಮಂಜುನಾಥ್. 64. ಕೊಡಗಿನಲ್ಲಿ ವೀರಶೈವದ ಚಾರಿತ್ರಿಕ ವಿಕಾಸ ಮತ್ತು ಪ್ರಭಾವ: ಎಂ. ಜಿ. ನಾಗಲಾ. 65. ಹಸ್ತಪ್ರತಿ ವಿಜ್ಞಾನ : ಒಂದು ಚಿಂತನೆ: ನಾ. ಗೀತಾಚಾರ. 66. ಬಖೈರು : ಒಂದು ಅಧ್ಯಯನ : ಲಕ್ಷ್ಮಣ್ ತೆಲಗಾವಿ). 67. ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ : ಕೃತಿ ಪರಿಶೀಲನೆ: ಜಿ.ಎಸ್.ದೀಕ್ಷಿತ್. 68. ಮುಸಲ್ಮಾನರ ಮತ್ತು ಆಂಗ್ಲರ ಆಡಳಿತ ಕಾಲ : ಕನ್ನಡ ನಾಡು-ನುಡಿಗಳ ಸ್ಥಿತಿ :ಸೂರ್ಯನಾಥ ಕಾಮತ್. 69. ಸರ್ ವಾಲ್ಟರ್ ಎಲಿಯೆಟ್ : ಕರ್ನಾಟಕದಲ್ಲಿ ಆತನ ಮೌಲಿಕ ಕಾರ್ಯಗಳು: ಶ್ರೀನಿವಾಸ ಹಾವನೂರ. 70. ಪುರಾತತ್ವ ವ್ಯಾಸಂಗದಲ್ಲಿ ಹೊಸ ಹುಡುಕಾಟ: ಎಚ್. ಆರ್. ರಘುನಾಥ ಭಟ್. 71. ದಕ್ಷಿಣ ಕನ್ನಡದ ಪ್ರಾಗಿತಿಹಾಸ: ಬಿ. ವಸಂತಶೆಟ್ಟಿ. 72. ಋಗ್ವದ ಸಂಹಿತೆಯಲ್ಲಿ 'ಶಾಸನ' ಪದ ಬಳಕೆಯ ಅರ್ಥವ್ಯಾಪ್ತಿ: ಆಳ್ವ, ಚಿರ೦ಜೀವಿ. 73. ಸನ್ನತಿಯ ಅಶೋಕನ ಶಿಲಾಶಾಸನಗಳು: ಎಂ. ವಿ. ವಿಶ್ವೇಶ್ವರ. 74. ಧರ್ಮಸ್ಥಳದ ಶಿಲಾಶಾಸನಗಳು : ವಿವೇಚನೆ : ವೈ, ಉಮಾನಾಥ ಶೆಣೈ. 75. ತಮಿಳುನಾಡಿನ ಕನ್ನಡ ಶಾಸನಗಳು : ಅವಲೋಕನ; ಪಿ.ವಿ ಕೃಷ್ಣಮೂರ್ತಿ. 76. ನಾಣ್ಯಶಾಸ್ತ್ರ ಮತ್ತು ಶಾಸನಗಳು ; ಎ.ವಿ. ನರಸಿಂಹಮೂರ್ತಿ. 77. ಶಕ್ತಿ ಹರ್ಷೆಯ ಕಿಟ್ಟಗಾವೆ ಸಂತತಿ: ಬಿ.ಪಿ.ಮಲ್ಲಾಪುರ. 78. ಬಂಕಾಪುರದ ಕದಂಬರು; ಚೆನ್ನಕ್ಕ ಎಲಿಗಾರ. 79. ಕೆಳದಿ ದೇವಾಲಯ : ಆಡಳಿತ ಮತ್ತು ಧಾರ್ಮಿಕ ಹಿನ್ನೆಲೆಯಲ್ಲಿ; ಕೆಳದಿ ವೆಂಕಟೇಶ್. 80. ಪ್ರಾಚೀನ ಕರ್ನಾಟಕದಲ್ಲಿ ನರಸಿಂಹ ಶಿಲ್ಪದ ವಿಕಾಸ: ವಿವೇಚನೆ; ಅ. ಸುಂದರ. 81. ಕರ್ನಾಟಕದ ಕಂಚುಶಿಲ್ಪಗಳು: ಎಂ.ಎಸ್. ಕೃಷ್ಣಮೂರ್ತಿ. 82. ಉತ್ತರಕನ್ನಡ ಜಿಲ್ಲೆಯ ವೀರಗಂಬಗಳು: ಶ್ರೀನಿವಾಸ ಬಡಿಗಾರ. 83. ಸವಿಯ ಸಿಂಗಾರ : ಜ್ಯೋತ್ಸ್ನಾ ಕಾಮತ್. 84. ಚಿತ್ರಕಲೆಯಲ್ಲಿ ನವಸ್ಥಾನಗಳು: ಉಷಾ 85. ಪರಿಣಯದ ವರ್ಣಚಿತ್ರಗಳು: ಸಿಂದಿಗಿ ರಾಜಶೇಖರ. 86. ಮೈಸೂರು ಅರಸರ ಕಾಲದ ಚಿತ್ರಗಳಲ್ಲಿ ಒಳಾಂಗಣ ದೃಶ್ಯಗಳು: ಗಾಳಿ ಕೃಷ್ಣಾನಂದ ಕಾಮತ್.

ಎರಡನೇ ವಿಭಾಗವು ಎಂ. ಚಿದಾನಂದ; ಬದುಕು -ಬರಹ- ಆತ್ಮಕಥನ 1. ಹಾರೈಕೆಯ ನುಡಿಗಳು: 2. ಮೂರ್ತಿ ಮೂರ್ತ ಸ್ವರೂಪ: ಪಂಡಿತ ಚನ್ನಪ್ಪ ಎರೇಸೀಮೆ. 3. ಗೆಳೆಯ ಡಾ. ಮೂರ್ತಿ: ಟಿ. ವಿ. ವೆಂಕಟಾಚಲ ಶಾಸ್ತ್ರೀ. 4. ಸಹಪಾರಿ ಗೆಳೆಯ ಚಿದಾನಂದ: ಸುಜನಾ. 5. ಚೌಕಟ್ಟಿಗೆ ಸಿಕ್ಕದ ವ್ಯಕ್ತಿತ್ವ : ಎಚ್. ಎಂ. ಮರುಳಸಿದ್ಧಯ್ಯ. 6. ಚಿದಾನಂದಮೂರ್ತಿ : ಅ.ರಾ. ಮಿತ್ರ. 7. ಡಾ. ಮೂರ್ತಿ: ನಾನು ಕಂಡಂತೆ; ಸಾ.ಶಿ. ಮರಯಳಯ್ಯ. 8. ನನ್ನ ಮಿತ್ರ ಬಂಧು: ನಾಗಭೂಷಣ. 9. ಕನ್ನಡ ಜಂಗಮ: ಸಿ. ವಿ. ನಾರಾಯಣ. 10. ಸಂಶೋಧನೆಯ ಸಂಶೋಧಕ: ಎ೦. ಎ೦. ಕಲಬುರ್ಗಿ . 11. ಕನ್ನಡ ಸಂಶೋಧನಾ ವಿಧಿ-ವಿಧಾನಗಳು: ಆರ್, ಶೇಷಶಾಸ್ತ್ರಿ. 12. ಭಾಷಾವಿಜ್ಞಾನ: ಕೃಷ್ಣ ಪರಮೇಶ್ವರ ಭಟ್ಟ 13. ಶಾಸನ ಮತ್ತು ಸಾಹಿತ್ಯ ಕ್ಷೇತ್ರಗಳು: ದೇವರಕೊಂಡಾರೆಡ್ಡಿ. 14. ಸಮಾಜೋ-ಸಾಂಸ್ಕೃತಿಕ ಅಧ್ಯಯನಗಳು: ತೀ.ನಂ. ಶಂಕರನಾರಾಯಣ. 15. ಅ೦ತರ್ ಶಿಸ್ತೀಯ ಅಧ್ಯಯ: ಎಂ. ಚಿದಾನಂದಮೂರ್ತಿಯವರ ಕೃತಿಗಳು ಮತ್ತು ಲೇಖನಗಳು. 16. ನನ್ನ ಬದುಕು : ಒಂದು ಕಿರುಚಿತ್ರ; ಎಂ. ಚಿದಾನಂದಮೂರ್ತಿ. ಅವರ ಲೇಖನಗಳನ್ನು ಒಳಗೊಂಡಿವೆ.

About the Author

ಲಕ್ಷ್ಮಣ್ ತೆಲಗಾವಿ
(01 January 1947)

ಇತಿಹಾಸಜ್ಞ, ಸಂಶೋಧಕ ಲಕ್ಷ್ಮಣ್‌ ತೆಲಗಾವಿಯವರು 1947 ಜನವರಿ 01 ಹುಟ್ಟಿದ್ದು ಚಿತ್ರದುರ್ಗದಲ್ಲಿ. ಹಲವಾರು ಐತಿಹಾಸಿಕ, ಸಾಮಾಜಿಕ ಚಳುವಳಿಗಳ  ಗ್ರಂಥಗಳ ರಚಿಸಿ ಮತ್ತು ಪ್ರಕಟಿಸಿದ್ಧಾರೆ. ಚಿತ್ರದುರ್ಗ ದರ್ಶಿನಿ, ಇದು ಚಿತ್ರದುರ್ಗ, ಚಿತ್ರದುರ್ಗ ಹ್ಯಾನ್‌ ಇನ್‌ಸೈಟ್‌, ಬುರುಗು (ಚಿಂತನ ಲೇಖನಗಳು), ಕರ್ನಾಟಕ ಹಿಂದುಳಿದ ವರ್ಗಗಳ ಮತ್ತು ದಲಿತ ಚಳುವಳಿಗಳು, ಮೌರ್ಯ ಮತ್ತು ಶಾತವಾಹನಯುಗ, ಚಿತ್ರದುರ್ಗಜಿಲ್ಲಾ ಇತಿಹಾಸ, ಚಿತ್ರದುರ್ಗ ನಾಯಕ ಅರಸರು, ವಿಜಯನಗರಕಾಲದ ರಾಮಾನುಜಕೂಟಗಳು, ಎಪ್ಪತ್ತೇಳು ಪಾಳಯಗಾರರು, ಚಿತ್ರದುರ್ಗದ ಒನಕೆ ಓಬವ್ವ, ಚಾರಿತ್ರಿಕ ವಿವೇಚನೆ, ದೊಡ್ಡೇರಿಕದನ ಮುಂತಾದ ಕೃತಿಗಳನ್ನು ಸ್ವಾತಿ ಪ್ರಕಾಶನ, ವಾಲ್ಮೀಕಿ ಸಾಹಿತ್ಯ ಸಂಪದ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯಗಳು ...

READ MORE

Related Books