
ಶಾ ಮಂ ಕೃಷ್ಣರಾಯ ಅವರ ಕೃತಿ ರಸಚೇತನ. ಅನಕೃ ಅವರಿಗೆ 60 ವಯಸ್ಸು ತುಂಬಿದಾಗ ಮತ್ತು ಅವರಿಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಾಗ ಹೊರಬಂದ ಪುಸ್ತಕವಿದು. ಪುಸ್ತಕದಲ್ಲಿ ಸಾಹಿತಿಗಳು, ರಾಜಕಾರಣಿಗಳು ಅನಕೃ ಅವರ ಬಗ್ಗೆ ಬರೆದಿದ್ದಾರೆ. ಲೇಖನ ಶುರುವಾಗುವುದೇ ತರಾಸು ಅವರಿಂದ. ಪ್ರಿಯಶಿಷ್ಯ ಪ್ರಾರಂಭ ಮಾಡುವುದಲ್ಲದೆ ಮತ್ತಾರು ಮಾಡಲು ಸಾಧ್ಯ! ಅದೇ ರೀತಿ ಸಾಹಿತಿಗಳಾದ ನಿರಂಜನ, ನಾಡಿಗೇರ ಕೃಷ್ಣರಾಯ, ರಾಶಿ, ಕೃಷ್ಣಮೂರ್ತಿ ಪುರಾಣಿಕ, ಬೀchi, ಕೀರ್ತಿನಾಥ ಕುರ್ತಕೋಟಿ ಹೀಗೆ ಹಲವು ಲೇಖಕರು ಬರೆದಿದ್ದಾರೆ. ಪ್ರತಿ ಲೇಖನ ಕಂಡಾಗ ಅನಕೃ ಅವರ ಮೇಲಿನ ಪ್ರೀತಿ, ಗೌರವ ಇಮ್ಮಡಿಗೊಳ್ಳುತ್ತದೆ. ಕನ್ನಡಕ್ಕಾಗಿ ಅವರು ತಮ್ಮ ಜೀವನವನ್ನೇ ಮೂಡುಪಾಗಿಟ್ಟವರು. ಯುವಸಾಹಿತಿಗಳಿಗೆ ತಮ್ಮ ಅಭಯಹಸ್ತ ನೀಡಿ ಅವರನ್ನು ಮೇಲೆತ್ತಿದವರು.
©2025 Book Brahma Private Limited.