ಕಂನಾಡ ಸಾಹಿತ್ಯಜ್ಞರ ಆತ್ಮಕಥನ

Author : ಬುರ್ಲಿ ಬಿಂದುಮಾಧವ (ಆಚಾರ್ಯ)

Pages 171

₹ 2.00
Year of Publication: 1953
Published by: ಮಿಂಚಿನ ಬಳ್ಳಿ ಪ್ರಕಾಶನ
Address: ಧಾರವಾಡ

Synopsys

ಕಂನಾಡ ಸಾಹಿತ್ಯಜ್ಞರ ಆತ್ಮಕಥನ-ಕೃತಿಯನ್ನು ಬುರ್ಲಿ ಬಿಂದು ಮಾಧವ ಆಚಾರ್ಯರು ಸಂಪಾದಿಸಿದ್ದಾರೆ. 1952ರಲ್ಲಿ ಮೊದಲ ಮುದ್ರಣ ಕಂಡಿತ್ತು. ಮದ್ರಾಸ್ ವಿ.ವಿ.ಯಲ್ಲಿ ಬಿ.ಎ, ಹಾಗೂ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಮ್ಯಾಟ್ರಿಕುಲೇಷನ್ ಗೆ ಪಠ್ಯವಾಗಿತ್ತು.

1942ರಲ್ಲಿ ದೇಶದ ಸ್ವಾತಂತ್ಯ್ರಕ್ಕಾಗಿ ಜೈಲು ವಾಸ ಅನುಭವಿಸಿದ ನಂತರ ದೇಶದ ವಿವಿಧೆಡೆಯಿಂದ ಬಂದವರ ಆತ್ಮಕಥನ ಕೇಳತೊಡಗಿ, ಅವುಗಳನ್ನೇ ಒಂದು ಕೃತಿಯಾಗಿ ರಚಿಸಿದರೆ ಹೇಗೆ? ಎಂಬ ಸಂಶಯ ಕಾಡಿದ್ದೇ ಈ ಕೃತಿ.

ಜೈಲಿನಿಂದ ಹೊರ ಬಂದ ನಂತರ ಅವರವರ ಅನುಭವವನ್ನು ಆತ್ಮಕಥನವೆಂಬಂತೆ ಬರೆದುಕೊಡಲು ವಿನಂತಿಸಲಾಯಿತು ಮತ್ತು ಈ ರೀತಿಯ ಕೃತಿ ಹಿಂದಿಯಲ್ಲಿದೆ ಎಂದು ತಿಳಿಯಿತು. ಕನ್ನಡದಲ್ಲೂ ಇಂತಹ ಕಥನದ ಕೃತಿ ಅಗತ್ಯ ಎಂದು ಲೇಖನಗಳನ್ನು ತರಿಸಿಕೊಳ್ಳಲಾಗಿತ್ತು. ಆದ್ದರಿಂದ, ಈಗ ಗೋವಿಂದ ಪೈ, ಆರ್.ವಿ.ಜಾಗೀರದಾರ, ದೇವುಡು, ರಂ.ಶ್ರೀ. ಮುಗಳಿ, ದ.ರಾ.ಬೇಂದ್ರೆ, ಸಿ.ಕೆ.ವೆಂಟರಾಮಯ್ಯ, ವಿ.ಕೃ.ಗೋಕಾಕ, ಬೆಟಗೇರಿ ಕೃಷ್ಣಶರ್ಮ, ಶಂ.ಬಾ. ಜೋಶಿ, ಉತ್ತಂಗಿ ಚೆನ್ನಪ್ಪ, ಎ.ಆರ್.ಕೃಷ್ಣಶಾಸ್ತ್ರಿ ಇತರರ ಲೇಖನಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

ದೇಶ ಮತ್ತು ಅದರ ಸ್ವಾತಂತ್ಯ್ರ,ಕ್ಕಾಗಿ ಜೈಲುವಾಸವು ಒಂದು ವಿಶಿಷ್ಟ ಅನುಭವ ನೀಡಿದ್ದು, ಅದು ಇತರರಿಗೂ ಪ್ರೇರಣೆ ಮೂಡಿದ್ದು,ಮಾದರಿ ಎಂಬಂತೆ ಇಲ್ಲಿಯ ಬರೆಹಗಳಿವೆ. 

About the Author

ಬುರ್ಲಿ ಬಿಂದುಮಾಧವ (ಆಚಾರ್ಯ)
(18 August 1899 - 27 October 1981)

ಬುರ್ಲಿ ಬಿಂದುಮಾಧವ (ಆಚಾರ್ಯ) ಅವರು ಸ್ವಾತಂತ್ಯ್ರ ಯೋಧರು. ಮಧ್ವ ತತ್ವ ಅನುಯಾಯಿಗಳು. ತಂದೆ ವೆಂಕಣ್ಣಾ ಚಾರ್ಯರು. ಬಾಗಲಕೋಟೆಯ ಕನ್ನಡ ಶಾಲೆಯಲ್ಲಿ (jಜನನ: 18-08-1899) ಮುಲ್ಕಿ ಪರೀಕ್ಷೆ ಮುಗಿಸಿ, ಧಾರವಾಡದಲ್ಲಿ ಶಿಕ್ಷಕ ತರಬೇತಿ ಪಡೆದು, 1920ರಲ್ಲಿ ಬಿಜಾಪುರ ಜಿಲ್ಲೆಯ ಗಲಗಲಿಯಲ್ಲಿ ಶಿಕ್ಷಕರಾದರು. ಮಹಾತ್ಮಾ ಗಾಂಧಿಯವರ ಪ್ರಭಾವಕ್ಕೊಳಗಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಧಾರವಾಡಕ್ಕೆ ಬಂದರು. ಅಲ್ಲಿ ಸ್ಥಾಪಿತವಾದ ಗಾಂಧೀ ವಿಚಾರದ ರಾಷ್ಟ್ರೀಯ ಶಾಲೆಯಲ್ಲಿ ಉಪಾಧ್ಯಾಯರಾದರು. ಬಡ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಆಶ್ರಮ ಸ್ಥಾಪಿಸಿದರು.  ಉಪ್ಪಿನ ಸತ್ಯಾಗ್ರಹ (1930), ಅರಣ್ಯ ಸತ್ಯಾಗ್ರಹ (1932), ವೈಯಕ್ತಿಕ ಸತ್ಯಾಗ್ರಹ (1941) ಮತ್ತು ಚಲೇಜಾವ್ ಚಳುವಳಿ (1942)ಯಲ್ಲಿದ್ದರು. ಪತ್ನಿ ಪದ್ಮಾವತಿ ಮತ್ತು ಹಿರಿಯ ಮಗ ...

READ MORE

Related Books