
ಕಲಾತ್ಮಕವಾಗಿರುವ ಮಕ್ಕಳ ಕನಸುಗಳಿಗೆ ನೀರೆರೆದು ಪೋಷಿಸುವಂತಿರುವ ಕಥೆಗಳ ಸಂಕಲನ ಬಣ್ಣ. ಮಕ್ಕಳ ಪ್ರಪಂಚವೆಂದರೆ ಬಣ್ಣ ಬಣ್ಣದ ರಮ್ಯಲೋಕ. ಅವರಿಗೆ ಇರುವ ಸಣ್ಣ ಸಣ್ಣ ಆಸೆ ಆಕಾಂಕ್ಷೆಗಳು ದೊಡ್ಡವರ ದೃಷ್ಟಿಯಲ್ಲಿ ಕೆಲವೊಮ್ಮೆ ನಗಣ್ಯವೆನಿಸಿದರೂ ಮಕ್ಕಳಿಗೆ ಮಾತ್ರ ಅವು ಈಡೇರಿದಾಗ ಆಗುವ ಆನಂದ ಅಷ್ಟಿಷ್ಟಲ್ಲ. ಇಲ್ಲಿನ ಕಥೆಗಳೆಲ್ಲ ಮಕ್ಕಳು ಬಯಸಿದ್ದೆಲ್ಲ ಸುಲಭವಾಗಿ ಸಿಗದಿರುವ ಬಡ ಕುಟುಂಬಗಳ ಕಥೆಗಳೇ ಆಗಿದ್ದರೂ ಮಕ್ಕಳ ಜಾಣತನಕ್ಕೇನೂ ಬಡತನವಿದ್ದಂತಿಲ್ಲ. ಜಗಳ ಆಡದೆ ಸ್ನೇಹಿತರಂತಿದ್ದು ಹಂಚಿ ತಿನ್ನುವ ಸದ್ವರ್ತನೆಯನ್ನು ಕಲಿಸಬಲ್ಲ ತಾಯಿಯೊಬ್ಬಳು ``ಕಪ್ಪೆ ಮರಿಯ ಸ್ನೇಹ'' ಕಥೆಯಲ್ಲಿದ್ದಾಳೆ. ಮಕ್ಕಳಿಗೂ ಹಿರಿಯರಿಗೂ ಆದರ್ಶಗಳನ್ನು ಕಲಿಸಬಲ್ಲ ಕಥೆಗಳು ಈ ಕೃತಿಯಲ್ಲಿವೆ.
©2025 Book Brahma Private Limited.