
ಅಪಾಯ ಬಂದಾಗ ತನಗೆ ತಾನೇ ಸುತ್ತಿಕೊಳ್ಳುವ ಚಿಪ್ಪುಹಂದಿ ಹಂದಿ ವಂಶಕ್ಕೆ ಸೇರಿದಲ್ಲ. ದೇಹದಷ್ಟೇ ಉದ್ದದ ನಾಲಗೆ ಹೊಂದಿರುವ ಈ ಪ್ರಾಣಿಯ ಮೈತುಂಬಾ ಚಿಪ್ಪು ಆವೃತ್ತವಾಗಿರುವುದರಿಂದ ಇದಕ್ಕೆ ಚಿಪ್ಪು ಹಂದಿ ಎಂಬ ಹೆಸರಿದೆ. ಈ ಪ್ರಾಣಿಯ ಕುರಿತು ವಿಶೇಷ ಮಾಹಿತಿ ತಿಳಿದುಕೊಳ್ಳಲು ಚಿಪ್ಪೂ ಪುಟ್ಟನ ಚಮತ್ಕಾರ ಪುಸ್ತಕವನ್ನು ಓದಲೇಬೇಕು. ಲೇಖಕರು ಕಥೆಯ ರೂಪದಲ್ಲಿ ಚಿಪ್ಪು ಹಂದಿಯ ಕುರಿತು ವಿವರಣೆ ನೀಡಿರುವುದು ವಿಭಿನ್ನವಾಗಿದೆ. ಪೋ ಎಂಬ ಚಿಪ್ಪೂ ಪುಟ್ಟ ರಾತ್ರಿ ಸಮಯದಲ್ಲಿ ಆಹಾರ ಹುಡುಕುತ್ತಾ ಹೊರಟಾಗ ಎದುರಾಗುವ ಸಮಸ್ಯೆಯಿಂದ ಹೇಗೆ ಪಾರಾಯಿತು ಎಂಬುದನ್ನು ತಿಳಿಯಲು ನೀವು ಓದಿ ಚಿಪ್ಪೂ ಪುಟ್ಟನ ಚಮತ್ಕಾರ
©2025 Book Brahma Private Limited.