
ಕಾಂತಾವರ ಕನ್ನಡ ಸಂಘದ ’ನಾಡಿಗೆ ನಮಸ್ಕಾರ’ ಸರಣಿಯಲ್ಲಿ ಪ್ರಕಟವಾಗುತ್ತಿರುವ 194ನೇ ಪುಸ್ತಕವಿದು. ’ಮುಂಗಾರು’ ಪತ್ರಿಕೆಯ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಸಾಧನೆ ಮಾಡಿದವರು ವಡ್ಡರ್ಸೆ. ಪ್ರಜಾವಾಣಿ ಪತ್ರಿಕೆಯಲ್ಲಿ ಎರಡು ದಶಕಗಳ ಕಾಲ ಪತ್ರಕರ್ತರಾಗಿದ್ದವರು ’ಸ್ಕೂಪ್’ ಸುದ್ದಿ ಪ್ರಕಟಿಸುವುದಕ್ಕಾಗಿ ಹೆಸರುವಾಸಿಯಾಗಿದ್ದರು. ’ಓದುಗರ ಒಡೆತನದ ಪತ್ರಿಕೆ’ಯ ಪರಿಕಲ್ಪನೆಯ ಭಾಗವಾಗಿ ’ಮುಂಗಾರು’ ಆರಂಭಿಸಿದರು. ನಂತರ ಕೃಷಿಕರಾಗಿ ಜೀವನ ನಡೆಸಿದರು. ದೇವರಾಜು ಅರಸರ ಬಗ್ಗೆ ಜೀವನ ಚರಿತ್ರೆ ರಚಿಸಿದ್ದಾರೆ. ವಡ್ಡರ್ಸೆ ಅವರ ಜೀವನ ಸಾಧನೆಯನ್ನು ಈ ಕಿರು ಪುಸ್ತಿಕೆಯ ಮೂಲಕ ನೀಡಲಾಗಿದೆ.
©2025 Book Brahma Private Limited.