
‘ಪಂಚತಂತ್ರದ ಕಥೆಗಳು’ ಕೃತಿಯು ಸು.ರುದ್ರಮೂರ್ತಿ ಶಾಸ್ತ್ರಿ ಅವರ ಮಕ್ಕಳ ಸಾಹಿತ್ಯವಾಗಿದೆ. 'ಪಂಚತಂತ್ರ' ಎಂದರೆ ಐದು ಉಪಾಯಗಳು ಎಂದು ಸಾಮಾನ್ಯ ಅರ್ಥ. ಒಬ್ಬ ರಾಜ ತುಂಟರಾದ, ಅಂಕೆಗೆ ಸಿಕ್ಕದ ತನ್ನ ಮಕ್ಕಳಾದ ರಾಜಕುಮಾರರನ್ನು ಸುಶಿಕ್ಷಿತರನ್ನಾಗಿ ಮಾಡಲು ಒಬ್ಬ ಬ್ರಾಹ್ಮಣ ಗುರುವಿನ ಬಳಿಗೆ ಕಳಿಸುತ್ತಾನೆ. ರಾಜನೀತಿಯಲ್ಲಿ ಪರಿಣತನಾದ ಆತ ಆ ಮಕ್ಕಳನ್ನು ಸ್ವಾರಸ್ಯವಾದ ಕಥೆಗಳ ಮೂಲಕ ವಿದ್ಯಾವಂತರನ್ನಾಗಿ ಮಾಡುತ್ತಾನೆ. ರಾಜರಿಗೆ ಅಗತ್ಯವಾದ ಮಿತ್ರಲಾಭ, ಮಿತ್ರಭೇದ ಮೊದಲಾದ ಐದು ನೀತಿಗಳಿಗೆ ಐದು ವಿಭಾಗಗಳನ್ನಾಗಿ ವಿಂಗಡಿಸಿ ಕಥೆ ಹೇಳಲಾಗಿದೆ. ಪ್ರಾಣಿ ಪಕ್ಷಿಗಳೇ ಬಹುಪಾಲು ಕಥೆಗಳ ಪಾತ್ರಗಳಾದರೂ, ಮನುಷ್ಯರ ಕಥೆಗಳೂ ಬರುತ್ತವೆ. ಇವು ಕೇವಲ ರಾಜಕುಮಾರರಿಗೆ ಮಾತ್ರವಲ್ಲದೆ ಎಲ್ಲ ಮನುಷ್ಯರಿಗೆ ಉಪಯುಕ್ತವಾಗುವ ಕಥೆಗಳಾಗಿವೆ. ಪ್ರಾಣಿ ಪಕ್ಷಿಗಳ ಕಥೆಗಳು ಎಲ್ಲ ಮಕ್ಕಳಿಗೂ ಖಂಡಿತ ಪ್ರಿಯವಾಗುತ್ತವೆ. ನೀತಿಯೇ ಈ ಕಥೆಗಳ ಮೂಲ ಗುರಿ. ಇದು ಹಳಗನ್ನಡದಲ್ಲಿ ಬರೆದಿರುವ ದುರ್ಗಸಿಂಹನ ಕೃತಿಯ ಸರಳ ಗದ್ಯರೂಪವಾಗಿದ್ದು, ಎಲ್ಲ ಮಕ್ಕಳಿಗೂ ಸುಲಭವಾಗಿ ಅರ್ಥವಾಗುತ್ತವೆ.
©2025 Book Brahma Private Limited.