
ರಾಮಾಯಣ-ಆದಿಕಾವ್ಯವೆನಿಸಿದ್ದು, ಇದರಲ್ಲಿ ಆದರಣೀಯ ಪಾತ್ರಗಳು ಹಲವಾರು ಇವೆ. ಕಥಾನಾಯಕ ಶ್ರೀರಾಮನ ಆದರ್ಶಗುಣಗಳು ಎಲ್ಲ ಕಾಲಕ್ಕೂ ಎಲ್ಲರಿಗೂ ದಾರಿದೀಪವಾಗಿವೆ. ಜೀವನವೆಂದರೆ ಕಷ್ಟಸುಖಗಳು ಇದ್ದದ್ದೇ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಷ್ಟ ಎದುರಿಸದೆ ಸುಖ ಲಭಿಸದು. ಹಾಗೆಂದು ಕಷ್ಟವೇ ಬೇಡ ಎನ್ನಲಾಗದು. 'ಕಲ್ಲಾಗು ಕಷ್ಟಗಳ ಮಳೆ ಸುರಿಯೆ' ಎಂಬ ಕಗ್ಗದ ಮಾತು ಡಿ.ವಿ.ಗುಂಡಪ್ಪನವರ ಮಾತಿನ ಸಾರವು ಇದೇ ಆಗಿದೆ. ದುಷ್ಟಶಕ್ತಿಯ ದಮನ, ಶಿಷ್ಟತೆಯ ಸಾಧನೆಯು ಇಲ್ಲ ರಾಮನ ಅವತಾರದಲ್ಲಿ ಚಿತ್ರಿತವಾಗಿದೆ. ಮಹಾಭಾರತ ದ್ವಾಪರಯುಗದಲ್ಲಿ ನಡೆದಿರಬಹುದಾದ ದಾಯಾದಿ ಕಲಹ, ವಂಚನೆ, ಮೋಸ ಮುಂತಾದ ಅವಗುಣಗಳ ಪ್ರತೀಕವಾಗಿ ಕೌರವರ ಪಡೆ, ಧಾರ್ಮಿಕ, ಸತ್ಯ, ಸಹನೆ, ಹೊಂದಾಣಿಕೆಯ ಪ್ರತೀಕವಾಗಿ ಪಾಂಡವರು. ಈ ಎರಡರ ನಡುವೆ ನಡೆದ ಹೋರಾಟ, ಕೊನೆಗೆ ಸತ್ಯಕ್ಕೇ ಜಯ ಎಂಬುದನ್ನು ಚಿತ್ರಿಸುತ್ತದೆ.
©2025 Book Brahma Private Limited.