
ಹಿರಿಯ ಪತ್ರಕರ್ತ ಕೆ. ಶಿವಸುಬ್ರಹ್ಮಣ್ಯ ಅವರು ಅತ್ಯುತ್ತಮ ಛಾಯಾಗ್ರಾಹಕರೂ ಹೌದು. ಕನ್ನಡ ಪ್ರಭ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದ ಅವರು ಉದಯವಾಣಿ ಪತ್ರಿಕೆಯಲ್ಲಿ ಸಂಪಾದಕರಾಗಿದ್ದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಆಸಕ್ತಿಯುಳ್ಳ ಶಿವಸುಬ್ರಹ್ಮಣ್ಯ ಅವರು ಛಾಯಾಗ್ರಹಣದಲ್ಲಿ ತಮ್ಮದೇ ನೆಲೆ ಕಂಡುಕೊಂಡವರು. ಛಾಯಾಗ್ರಾಹಕರಾಗಿ ಅವರು ಅನುಪಮ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಅವರ ಜೀವನ-ಸಾಧನೆಯನ್ನು ಕುರಿತ ಕಿರು ಪುಸ್ತಕ. ಕಾಂತಾವರ ಕನ್ನಡ ಸಂಘ ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯ 134ನೇ ಪುಸ್ತಕವಿದು.
©2025 Book Brahma Private Limited.