
‘ವಿಶ್ವೇಶ್ವರಿ’ ಸುಧಾಮೂರ್ತಿಯವರ ವ್ಯಕ್ತಿತ್ವ ಮತ್ತು ಸಾಹಿತ್ಯ ಆಧಾರಿತ ಡಾ. ವಾಸಯ್ಯ ಎನ್ ಅವರ ಕೃತಿಯಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಡಾ.ಸುಧಾಮೂರ್ತಿ ಅವರು ಒಬ್ಬರಾಗಿದ್ದು, ಅವರದು ಬಹುಮುಖ ಪ್ರತಿಭೆ ಹಾಗೂ ನಾನಾ ಮುಖಗಳ ವ್ಯಕ್ತಿತ್ವ, ಸೃಜನಶೀಲ, ಚಿಂತನಶೀಲ, ಸಾಹಸಶೀಲ, ಉದ್ಯಮಶೀಲ, ವಿನಯಶೀಲ ವ್ಯಕ್ತಿತ್ವ. ಟಾಟಾ (ಟೆಲ್ಲೊ) ಕಂಪೆನಿಯಲ್ಲಿ ಲಿಂಗ ತಾರತಮ್ಯದ ನಿಲುವನ್ನು ಪ್ರಶ್ನಿಸಿ ಪತ್ರ ಬರೆದು, ವಿಶೇಷ ಸಂದರ್ಶನದ ಮೂಲಕ ಅಲ್ಲಿ ನೇಮಕಗೊಂಡ ಮೊದಲ ಮಹಿಳಾ ಇಂಜಿನಿಯರ್ ಎಂಬ ಖ್ಯಾತಿಗೂ ಅವರು ಪಾತ್ರರಾಗಿದ್ದಾರೆ. ಇದು ಪುರುಷರಿಗೆ ಮಾತ್ರ ಸಾಧ್ಯವಾಗುವ ಕೆಲಸ ಎಂಬ ಮನೋಭಾವನೆಯನ್ನು, ಅಪಪ್ರಥೆಗಳನ್ನು ಬದಲಾಯಿಸಿ ಮಹಿಳೆ ಎಲ್ಲ ರಂಗಗಳಲ್ಲೂ ಕೆಲಸ ಮಾಡಬಲ್ಲಳು. ಅವಳಲ್ಲಿ ಅಗಾಧವಾದ ಶಕ್ತಿ ಸಾಮರ್ಥ್ಯಗಳಿವೆ ಎಂಬುದನ್ನು ಅವರು ತಮ್ಮ ಬದುಕಿನಲ್ಲಿ, ಬರವಣಿಗೆಯಲ್ಲಿ ತೋರಿಸಿಕೊಡುತ್ತಾ ಬಂದಿದ್ದಾರೆ. ಅವರದು ನಿಜವಾಗಿಯೂ ಕ್ರಾಂತಿಕಾರಿ ಮನೋಧರ್ಮ. ಬದುಕಿನ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸು ಕಂಡ ಸಾಹಸಿಯೂ ಆಗಿದ್ದಾರೆ. ಅಂತೆಯೇ ಡಾ.ವಾಸಯ್ಯ ಎನ್. ಅವರು ಸಮಕಾಲೀನ ಸಂವೇದನೆಗಳು ಮತ್ತು ಸುಧಾಮೂರ್ತಿ ಅವರ ಸಾಹಿತ್ಯವನ್ನು ಕುರಿತು ವಿಚಾರ ಸಂಕಿರಣವನ್ನು ಅಯೋಜಿಸಿ ಸುಧಾ ಮೂರ್ತಿ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯದ ಕುರಿತ ವಿಷಯಗಳನ್ನೊಳಗೊಂಡ ಪುಸ್ತಕ ಇದಾಗಿದೆ.
©2025 Book Brahma Private Limited.