
“ವಿಸ್ಮಯ ವಿಮರ್ಶೆ” ಚಂದ್ರಕಾಂತ ವಡ್ಡು ಅವರ ಸಂಪಾದಿತ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯದ ಅವಲೋಕನವಾಗಿದೆ. ಸಾಹಿತಿಯೊಬ್ಬನನ್ನು ವಿಮರ್ಶೆಯ ಮೂಸೆಗೆ ಹಾಗೂ ಟೀಕೆಗಳ ಒರೆಗಲ್ಲಿಗೆ ಹಚ್ಚುವವರೆಗೆ ಆತನ ಸಾಹಿತ್ಯದ ಶ್ರೇಷ್ಠತೆ ಸಿದ್ಧವಾಗುವುದಿಲ್ಲ. ಆತನ ಸಾಹಿತ್ಯಕೃಷಿಯ ಆಳ-ಅಗಲಗಳು ಅನಾವರಣಗೊಳ್ಳುವುದಿಲ್ಲ. ಹಾಗೆಯೇ ಇತಿಮತಿಗಳ ಮಧ್ಯೆಯೂ ಆತನ ಸಾಹಿತ್ಯದ ವಿಶಿಷ್ಟತೆ, ಸಾರ್ವಕಾಲಿಕತೆ ಹಾಗೂ ಸೌಂದರ್ಯ ಒಪ್ಪುಗೂಡುವುದಿಲ್ಲ. ಹೀಗೆಂದು ಪ್ರಬಲವಾಗಿ ನಂಬಿದ ಸಮಾಜಮುಖಿ ಮಾಸಪತ್ರಿಕೆಯು ಸತತ ಮೂರು ಸಂಚಿಕೆಗಳಲ್ಲಿ ಸರಣಿ ಲೇಖನಗಳನ್ನು ಪ್ರಕಟಿಸುವ ಮೂಲಕ ತೇಜಸ್ವಿ ಸಾಹಿತ್ಯಕೃಷಿಯನ್ನು ವಸ್ತುನಿಷ್ಠವಾಗಿ ಅವಲೋಕಿಸುವ ಅನನ್ಯ ಪ್ರಯತ್ನ ಮಾಡಿತು. ತೇಜಸ್ವಿ ಸಾಹಿತ್ಯವನ್ನು ಮೆಚ್ಚುಗೆ, ಟೀಕೆ ಮತ್ತು ವಿಶ್ಲೇಷಣೆಗೆ ಈಡು ಮಾಡಿದ, ಸಮಾಜಮುಖಿಯಲ್ಲಿ ಪ್ರಕಟವಾದ ಆಯ್ದ ಲೇಖನಗಳ ಸಂಕಲನವೇ ಈ ಕೃತಿ.
©2025 Book Brahma Private Limited.