
ಸಿದ್ದು ಯಾಪಲಪರವಿ ಕಾರಟಗಿ ಅವರು ಬರೆದ ಡಾ. ಬಿ. ಎಫ್. ದಂಡಿನ ಅವರ ಬಾಳ ಕಥನವೇ “ದಣಿವರಿಯದ ದಾರಿ…”. ಆದರಣೀಯರೂ ಅನುಕರಣೀಯರೂ ಗದಗ ನಗರದ ಅಭಿನವ ಭೀಷ್ಮಾಚಾರ್ಯರೂ ಆದ ಶ್ರೀ ಬಿಷ್ಟಪ್ಪ ಫಕೀರಪ್ಪ ದಂಡಿನ ಅವರದು ದಣಿವರಿಯದ ಶತಕದೆಡೆಗೆ ಮುನ್ನಡೆಯುತ್ತಿರುವ ಬಾಳನಡಿಗೆ. ಇವರು ಸಾರ್ಥಕತೆಯತ್ತ ಸಾಗುತ್ತಿರುವ ವಿಶಿಷ್ಟ ಸಾಧಕರು. ದಣಿವರಿಯದ ದಾರಿ ಎಂಬ ಗ್ರಂಥದ ಮೂಲಕ ಇವರ ವ್ಯಕ್ತಿತ್ವವನ್ನು ಕನ್ನಡಿಗರಿಗೆ ಶ್ರೀ ಸಿದ್ದು ಯಾಪಲಪರವಿ ಸಮರ್ಥವಾಗಿ ತೆರೆದಿಟ್ಟಿದ್ದಾರೆ. ಸಿದ್ದು ಯಾಪಲಪರವಿ ಅವರ ಬರಹದಲ್ಲಿ ದಂಡಿನ ಅವರ ವ್ಯಕ್ತಿ ವೈಭವೀಕರಣ ಇಲ್ಲ; ವ್ಯಕ್ತಿ ಸ್ತುತಿ ಇಲ್ಲ. ಬದಲಾಗಿ ಅವರ ವ್ಯಕ್ತಿತ್ವದ ಸುಂದರ ಅನಾವರಣವಿದೆ. ‘ದಣಿವರಿಯದ ದಾರಿ’ಯ ಮೂಲಕ ಡಾ. ಬಿ. ಎಫ್. ದಂಡಿನ ಅವರು ನಾಡಿನಾದ್ಯಂತ ಇನ್ನೂ ಹೆಚ್ಚು ಜನರ ಹೃದಯಕ್ಕೆ ಹತ್ತಿರವಾಗಲಿದ್ದಾರೆ.
©2025 Book Brahma Private Limited.