
“ಸಂತೆಯಿಂದ ಸಂತನೆಡೆಗೆ..” ರಾಗಂ ಅವರ ಕೃತಿಯಾಗಿದ್ದು, ಸಿದ್ಧೇಶ್ವರ ಶ್ರೀಗಳ ಬಗೆಗಿನ ವಿಚಾರಧಾರೆಗಳನ್ನು ಒಳಗೊಂಡಿದೆ. ಸಿದ್ಧೇಶ್ವರರು ವಿರಳರಲ್ಲಿ ವಿರಳರು; ಸರಳರಲ್ಲಿ ಸರಳರು. ಅವರು ಅವರಿವರಂತೆ ಬದುಕಲಿಲ್ಲ ಮತ್ತು ಅವರು ಅವರಿವರಿಗಾಗಿ ಬದುಕಲಿಲ್ಲ. ಅವರು ಅವರಂತೆಯೇ ಬದುಕಿದರು. ಅವರದು ಅಧೀನದ ಬದುಕಲ್ಲ. ಅವರು ಯಾರದೇ ಅರ್ಜಿ, ಮರ್ಜಿ, ಮುತುವರ್ಜಿಗಳಿಗಾಗಿ ಬದುಕಿದವರಲ್ಲ. ಏಕೆಂದರೆ, ಅವರು ಸರ್ವತಂತ್ರ ಸ್ವತಂತ್ರ ಸಿದ್ಧೇಶ್ವರ. ಅವರದು “ಅಲಕ್ ನಿರಂಜನ" ವ್ಯಕ್ತಿತ್ವ. ಅವರು ತಮ್ಮ ಬದುಕಿನದ್ದುಕ್ಕೂ ದಾಹ, ಮೋಹ, ವ್ಯಾಮೋಹಗಳನ್ನು ಹತ್ತಿರಕ್ಕೆ ಕೂಡ ಬಿಟ್ಟುಕೊಳ್ಳಲಿಲ್ಲ ಇಂತಹ ಮಾಹಾನು ವ್ಯಕಿಯ ಬಗೆಗಿನ ಕುತೂಹಲ ಕಾರಿ ವಿಷಯಗಳು ಈ ಕೃತಿಯಲ್ಲಿ ಒಳಗೊಂಡಿದೆ. ಈ ಕೃತಿಯನ್ನು ಮಹಾ ಬೋಧಿಯ ಹಾದಿಯಲ್ಲಿ, ಹಳ್ಳ ದಾಟುವ ಹೊತ್ತು, ನೀ ಬದಲಾದರೆ ಬದುಕೇ ಬದಲು, ನದಿಗಳು ಹರಿವವು ಕಡಲಿನ ಕಡೆಗೆ, ಈ ನೆಲವೆಂದರೆ, ಸಿದ್ಧಸಂಗಮ, ಹಲಸಂಗಿಗೊಂದು ಹೊಸ ಅಂಗಿ, ತುಳಸಿಮಾಲೆ ಇದ್ದರೆ ಸಾವು ತಪ್ಪುವುದೆ?, ಪರಮ ಗುರು ಆ ಸಾಧು, ದಯಾಳುಹೊ ಕೃಪಾಳುಹೊ, ನೆರಳೂ ನೀನೆ, ನೆಮ್ಮದಿಯೂ ನೀನೆ, ಕೂಡಿದರೆ ಕೆನೆಮೊಸರು, ನಿನ್ನ ಸಂಗವೇ ಪರಮ ಮಂಗಳ, ಕ್ರೌಂಚದ ಕಣ್ಣೀರು, ಆಸೆಯಾ ಬಿಡಲಾರೆ, ಪರಮಾಗತಿಯ ಪವಿತ್ರ ಭೂಮಿ, ಭಾರತದ ಅಂತಃಸತ್ವ: ಪ್ರಜಾತಂತ್ರ, ನಮ್ಮ ಶಕ್ತಿಗೆ, ದಿವ್ಯ ಭಕ್ತಿಗೆ ನನ್ನನ್ನು ಉಪೇಕ್ಷಿಸಿ, ಜಗತ್ತನ್ನು ಪ್ರೀತಿಸಿ, ಶಬ್ದದಾಚೆಯ ಶಬ್ದ, ಕವಿ ಕಾಯುವ ಧರ್ಮ, ಪೆನ್ನು ಹಿಡಿಯುವ ಕೈ ಗನ್ನು ಹಿಡಿಯುವುದೆ?!!!, ನಿರ್ಮೋಹಿ ಬಂಧು, ನಿರಾಭಾರಿ ಗುರು, ಕಾರಣ, ಕಾರಣವಾಗದೇ ಹೋಗುವ ಕಾರಣ, ಈಶಾವಾಶ್ಯಮಿದಂ, ಒಡನೆ ಇಲ್ಲ ಒಳಗಿನ ಬೆಳಕು, ಏಳು ಏಳು ಜಗದಗ್ನಿ ಲಿಂಗವೆ, ಬೆಳಕಿನ ಬೀಜ ಬ್ರಂಟನ್, ಧರೆಯ ದುಷ್ಟರ ನಡುವೆ, ಪ್ರಜ್ಞೆಯ ಪರಿವರ್ತನೆಯ ಅವತಾರ ಎಂಬ 30 ಭಾಗಗಳಾಗಿ ವಿಂಗಡಿಸಿ ವಿವರಿಸಲಾಗಿದೆ.
©2025 Book Brahma Private Limited.