ಬಸವ ನಿಷ್ಠೆ

Author : ನಿಷ್ಠಿ ರುದ್ರಪ್ಪ

Pages 103

₹ 50.00




Year of Publication: 2009
Published by: ರಾಷ್ಟ್ರೀಯ ಬಸವದಳ ಪ್ರಕಾಶನ
Address: ಬಳ್ಳಾರಿ ಜಿಲ್ಲಾ ಘಟಕ, ಬಳ್ಳಾರಿ-583103

Synopsys

ಶರಣ ಸಂಸ್ಕೃತಿಯ ವೈಚಾರಿಕ ಚಿಂತನಾ ಬರಹಗಳ ಸಂಗ್ರಹ ಕೃತಿ-ಬಸವ ನಿಷ್ಠೆ. ಲೇಖಕ ನಿಷ್ಠಿ ರುದ್ರಪ್ಪ ಅವರು ರಚಿಸಿದ್ದು,ಬಸವ ಚಿಂತನೆಗಳನ್ನು ಕೇಂದ್ರೀಕರಿಸಿ ಬಹುಮುಖೀಯ ಆಯಾಮಗಳಲ್ಲಿ ಸ್ಪಂದಿಸಿ, ಅಭಿವ್ಯಕ್ತಿಪಡಿಸಿದ ಒಟ್ಟು 35 ಬರಹಗಳನ್ನು ಸಂಕಲಿಸಲಾಗಿದೆ. ಈ ಚಿಂತನೆಗಳು ಬಸವಣ್ಣ ಅವರ ವ್ಯಕ್ತಿತ್ವದ ದರ್ಶನವೂ ಆಗಲಿದೆ. ಬರಹಗಳ ಚಿಂತನೆಯಲ್ಲಿ ಜೀವನ ದರ್ಶನವಿದೆ. ಅಲೌಕಿಕ ನೋಟವೂ ಇದೆ. ಸತ್ಯದ ಕಾಣ್ಕೆಯೂ ಇದೆ. ಇಲ್ಲಿಯ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿವೆ. ಶರಣರ ಚಿಂತನೆಗಳು ಸಮಾಜೋಧಾರ್ಮಿಕ ಚಿಂತನೆಗಳನ್ನು ಹೊಂದಿದ್ದು, ಅವುಗಳ ಸಾರ್ವಕಾಲೀಕ ಸತ್ಯವನ್ನು ಮುಂದಿನ ಪೀಳಿಗೆಗೆ ಮುಂದುವರೆಸುವ ಅವಶ್ಯಕತೆಯನ್ನು ಈ ಕೃತಿಯು ಪ್ರತಿಪಾದಿಸುತ್ತದೆ. 21ನೇ ಶತಮಾನದಲ್ಲಿಯೂ ಮೌಢ್ಯತೆಯ ಕೂಪದಲ್ಲಿ ಬಿದ್ದಿರುವವರನ್ನು ಶರಣರ ವೈಚಾರಿಕ ಚಿಂತನೆಗಳು ಚಿಂತನೆಗೆ ಹಚ್ಚುವ ಕೆಲಸ ಮಾಡುತ್ತವೆ. ಶರಣರ ವಚನಗಳ ಅಂತಹ ಅಂತಃಸತ್ವವನ್ನು ಈ ಕೃತಿಯು ಒಳಗೊಂಡಿದೆ.

About the Author

ನಿಷ್ಠಿ ರುದ್ರಪ್ಪ
(01 June 1966)

ಲೇಖಕ ನಿಷ್ಠಿ ರುದ್ರಪ್ಪ ಅವರು ಮೂಲತಃ ಬಳ್ಳಾರಿಯವರು. ತಂದೆ ನಿಷ್ಠಿ ಬಸವರಾಜಪ್ಪ, ತಾಯಿ ಪ್ರಭಾವತಿ. ಬಿ.ಕಾಂ, ಎಂ.ಎ, ಬಿ.ಇಡಿ ಪದವೀಧರರು. ಸ್ಮಾತಕೋತ್ತರ ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್,  ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರು, ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯರು. ಖಾಸಗಿ ಕಂಪನಿಯಲ್ಲಿ ಸೇವೆ, ಬಳ್ಳಾರಿಯ ಲೋಕದರ್ಶನ ಪತ್ರಿಕೆಯಲ್ಲಿ ವರದಿಗಾರರಾಗಿ, ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಾರಿ ಹಾಗೂ ಕಲ್ಪತರು ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೊಸಪೇಟೆಯ ಆಕಾಸವಾಣಿ ಕೇಂದ್ರದಿಂದ ‘ಚಿಂತನೆ’ ಹಾಗೂ ಹಚ್ಚೇವು ಕನ್ನಡದ ದೀಪ’ ದೂರದರ್ಶನದಲ್ಲಿ ...

READ MORE

Related Books