ತಾಯಿ ಬೇರು

Author : ವಿಲ್‌ಫ್ರೆಡ್ ಡಿಸೋಜ

Pages 184

₹ 150.00




Year of Publication: 2017
Published by: ಅಭಿರುಚಿ ಪ್ರಕಾಶನ
Address: 386, 14ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಸರಸ್ವತಿಪುರ, ಮೈಸೂರು-9
Phone: 99805 60013

Synopsys

ವಿಲ್ಫ್ರೆಡ್ ಡಿಸೋಜಾ ಅವರ ’ತಾಯಿಬೇರು’ ಕೃತಿಯು ಗ್ರಾಮೀಣಾಭಿವೃದ್ಧಿಯನ್ನ ಕೇಂದ್ರವಾಗಿಟ್ಟುಕೊಂಡ ಅಂಕಣ ಬರೆಹಗಳ ಸಂಕಲನ. ’ಗ್ರಾಮಗಳು ಭಾರತದ ಬೆನ್ನೆಲುಬು’ ಎಂಬುದು ಕ್ಲೀಷೆಯ ಮಾತು ಎಂಬಂತೆ ಕೇಳಿಸುತ್ತಿರುವ ದಿನಗಳಲ್ಲಿ, ನಗರಗಳ ಅಬ್ಬರವೇ ಮುನ್ನೆಲೆಗೆ ಬಂದು ಅದು ಮಾತ್ರ ಬದುಕು-ಭರವಸೆ-ಬೆಳಕು ಎಂಬಂತಾಗಿರುವ ಹೊತ್ತಿನಲ್ಲಿ ವಿಲ್ಫ್ರೆಡ್ ಅವರು ಗ್ರಾಮೀಣ ಬದುಕಿನತ್ತ ಮುಖ ಮಾಡಿದ್ದಾರೆ. ಗ್ರಾಮ ಎಂದರೆ ಲೇಖಕರಿಗೆ ಪ್ರಿಯ ಎಂಬ ಕಾರಣಕ್ಕಾಗಿ ಅದು ಈ ಸಂಕಲನದ ಬರೆಹಗಳಲ್ಲಿ ಆದ್ಯತೆ ಪಡೆದಿಲ್ಲ ಎಂಬುದು ಸ್ವರೂಪ ನೋಡಿದರೇ ಗೊತ್ತಾಗುತ್ತದೆ. ಗ್ರಾಮ ಸ್ವರಾಜ್ಯ- ಸ್ವಾವಲಂಬಿ ಗ್ರಾಮೀಣ ಬದುಕು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ’ಪಂಚಾಯಿತಿ ರಾಜ್’ಗೆ ಇರುವ ಅನನ್ಯ ಮಹತ್ವವನ್ನು ಈ ಗ್ರಂಥದ ಬರೆಹಗಳು ಸೂಚಿಸುತ್ತವೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ತಾಯಿ ಬೇರಾದ ಪಂಚಾಯತ್ ರಾಜ್ಯ ವ್ಯವಸ್ಥೆಯು ಬಲಗೊಳ್ಳುವುದು ರಾಜ್ಯದ-ದೇಶದ ಪ್ರಮುಖ ರಾಜಕೀಯ ಪಕ್ಷಗಳಿಗೆ ಹಾಗೂ ರಾಜಕಾರಣಿಗಳಿಗೆ ಇಷ್ಟವಿಲ್ಲದ ಸಂಗತಿ. ಹಾಗಂತ ಅದನ್ನು ಕೈ ಬಿಡುವ ಸ್ಥಿತಿಯಲ್ಲಿಯೂ ಇಲ್ಲ. ವಿಕೇಂದ್ರೀಕರಣದ ಆಶಯ ಅದು ಸಾಗುತ್ತಿರುವ ದಾರಿಯನ್ನು ವಿಲ್ಫ್ರೆಡ್ ಅವರು ಈ ಗ್ರಂಥದಲ್ಲಿ ದಾಖಲಿಸಿದ್ದಾರೆ. ಉದ್ಯೋಗ ಖಾತರಿ ಯೋಜನೆ ವೈಫಲ್ಯಕ್ಕೆ ಕಾರಣಗಳನ್ನು ಹುಡುಕುವ ಲೇಖಕರು ಗ್ರಾಮೀಣ ಆಡಳಿತ ವ್ಯವಸ್ಥೆ ದಾರಿ ತಪ್ಪಿದ್ದೆಲ್ಲಿ ಎಂದು ಆತ್ಮಾವಲೋಕನ ಕೂಡ ಮಾಡಿಕೊಳ್ಳುತ್ತಾರೆ. ಸೋಲು-ಗೆಲುವು- ಸಾಧ್ಯತೆಗಳನ್ನು ವಿವರಿಸುವ-ದಾಖಲಿಸುವ- ವಿಶ್ಲೇಷಿಸುವ ವಿಧಾನ ಸೊಗಸಾಗಿದೆ. ಭ್ರಷ್ಟಾಚಾರದ ಸಾಂಸ್ಥೀಕರಣ ಬೆಳವಣಿಗೆಯು ಹುಟ್ಟು ಹಾಕಿರುವ ಆತಂಕವನ್ನು ವ್ಯಕ್ತಪಡಿಸುವ ಲೇಖಕರು ಮಹಿಳಾ ಮೀಸಲಾತಿಯ ವೈಫಲ್ಯವನ್ನೂ ಚರ್ಚಿಸದೇ ಇರಲಾರರು. ರಾಜಕಾರಣವು ಗ್ರಾಮೀಣ ಬದುಕಿನಲ್ಲಿ  ಉಂಟು ಮಾಡಿರುವ-ಮಾಡುತ್ತಿರುವ ತಲ್ಲಣಗಳ ಬಗ್ಗೆ ದಾಖಲಿಸುವ-ಚರ್ಚಿಸುವ ಪುಸ್ತಕ. ಮಾಹಿತಿಪೂರ್ಣ ಚರ್ಚೆಯನ್ನು ನೀಡುವ ಕೃತಿಯಿದು.

About the Author

ವಿಲ್‌ಫ್ರೆಡ್ ಡಿಸೋಜ
(23 October 1962)

ಕೃಷಿಕ- ಸಾಮಾಜಿಕ ಕಾರ್ಯಕರ್ತರಾಗಿರುವ ವಿಲ್‌ಫ್ರೆಡ್‌ ಡಿಸೋಜಾ ಅವರು ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬಜೆತ್ತೋರು‌ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಕೆಲಕಾಲ ಮೈಸೂರಿನಲ್ಲಿ ಇದ್ದ ಅವರು ಸದ್ಯ ಸ್ವಂತ ಗ್ರಾಮದಲ್ಲಿ ಕೃಷಿಕರಾಗಿದ್ದಾರೆ. ಕೃತಿಗಳು: ತಾಯಿಬೇರು (ಅಂಕಣಗಳ ಬರಹ) ...

READ MORE

Related Books