ನೆಲದಾಯ ಪರಿಮಳ

Author : ಸ್ಮಿತಾ ಅಮೃತರಾಜ್

Pages 188

₹ 180.00




Year of Publication: 2021
Published by: ನಿವೇದಿತಾ ಪ್ರಕಾಶನ
Address: ನಂ.3437, (1ನೆ ಮಹಡಿ), 4ನೆ ಮುಖ್ಯರಸ್ತೆ, 9ನೆ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ, 2ನೆ ಹಂತ, ಬೆಂಗಳೂರು-28
Phone: 9448733323

Synopsys

ಲೇಖಕಿ ಸ್ಮಿತಾ ಅಮೃತರಾಜ್ ಸಂಪಾಜೆ ಅವರ  ಲಲಿತ ಪ್ರಬಂಧಗಳ ಸಂಕಲನ ‘ನೆಲದಾಯ ಪರಿಮಳ’. ವಿವಿಧ ನಿಯತಕಾಲಿಕಗಳಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿರುವ ನಲವತ್ತಕ್ಕೂ ಹೆಚ್ಚಿನ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ.  ‘ಎಂತ ಗೊತ್ತುಂಟ ?‘... ಎಂಬಂತಹ ಸಹಜ ಆಪ್ತತೆಯ ಮಾತಿನ ಹರಟೆಯಂತೆಯೇ ಆರಂಭವಾಗುವ ಅವರ ಪ್ರಬಂಧಗಳಲ್ಲಿ ಬಾಲ್ಯದ ಬೆರಗು, ಕೌಮಾರ್ಯದ ಕನಸು ಮತ್ತು ಬದುಕಿನ ವಾಸ್ತವಗಳನ್ನು ಆಪ್ತವಾಗಿ ಅರುಹಿ, ಹೊರ ಬಂದೂ ದಣಪೆ ದಾಟಲಾರದ ಹೆಂಗಸರ ಅಂಗಳದಂಚಿಗೇ ಉಳಿದ ಕನವರಿಕೆಗಳನ್ನೂ ಈಗಾಗಲೇ ತಮ್ಮ ಪ್ರಬಂಧದಲ್ಲಿ ಪರಿಚಯಿಸಿದ್ದಾರೆ. ಇರುವುದನ್ನು ಒಪ್ಪುವ, ಬಂದಿದ್ದನ್ನು ಸ್ವೀಕರಿಸುವ ಈ ಆರ್ದ್ರ ಮನಸ್ಸು ಪ್ರವಾಹಕ್ಕೆ ಬಲಿಯಾದ ಬದುಕುಗಳ ಬಗ್ಗೆ ಕಳವಳಿಸಿ, ಈ ಪ್ರಾಕೃತಿಕ ಅವಘಡಕ್ಕೆ ಕಾರಣಗಳನ್ನೂ ಚಿಂತಿಸುತ್ತದೆ. ಬರೆಯುವ ಧ್ಯಾನ ಮತ್ತು ಸುಖದ ಬಗ್ಗೆ ಹೇಳುತ್ತಲೇ ಬರಹಗಳಿಂದಲೇ ಬರುವ ಬಹಿರ್ಮುಖತೆಯನ್ನು ಅದರ ಮುಜುಗರವನ್ನೂ ವಿವರಿಸಿ ಅಗತ್ಯವಾದ ಅಂತರ್ಮುಖತೆಯ ಬಗ್ಗೆ ಬೆರಳು ತೋರುತ್ತದೆ. ಕೌಟುಂಬಿಕತೆಯ ರೂಪವೇ ಆದ ಆದರಾತಿಥ್ಯ ಮತ್ತು ಕಾಲಿಕ ಪಲ್ಲಟಗಳ ನಡುವೆಯೂ ನಿಜ ‘ಗೃಹ’ದ ಗೃಹೀತವನ್ನು ಮನಗಾಣಿಸುವ ಇಂತಹ ಬಹರಗಳಲ್ಲೇ ಇರುವ ನಿಜವಾದ ಸ್ತ್ರೀ ಮತ್ತು ಅವಳ ವೈಚಾರಿಕತೆ ವರ್ತಮಾನಕ್ಕೆ ಅತ್ಯಗತ್ಯ ಎಂದು ಬರಹಗಾರ ಆನಂದ ಖುಗ್ವೇದಿ ಅವರು ಕೃತಿಯ ಹಿನ್ನುಡಿಯಲ್ಲಿ ಬರೆದುಕೊಂಡಿದ್ದಾರೆ.

About the Author

ಸ್ಮಿತಾ ಅಮೃತರಾಜ್
(08 January 1978)

ಲೇಖಕಿ ಸ್ಮಿತಾ ಅಮೃತರಾಜ್, ಸಂಪಾಜೆ, ಗೃಹಿಣಿ ಮತ್ತು ಕೃಷಿಕ ಮಹಿಳೆ. ಕನ್ನಡ ಎಂ. ಎ.ಪದವೀಧರೆ. ಲಲಿತ ಪ್ರಬಂಧ,ಕವನ ಸಂಕಲನ,ಪುಸ್ತಕ ಪರಿಚಯ ಸೇರಿದಂತೆ ಒಟ್ಟು ಏಳು ಪುಸ್ತಕಗಳು ಪ್ರಕಟಗೊಂಡಿವೆ. ‘ಕಾಲ ಕಾಯುವುದಿಲ್ಲ’, ‘ತುಟಿಯಂಚಿನಲ್ಲಿ ಉಲಿದ ಕವಿತೆಗಳು’ ‘ಮಾತು ಮೀಟಿ ಹೋಗುವ ಹೊತ್ತು’ ಅವರ ಕವನ ಸಂಕಲನಗಳು. ‘ಅಂಗಳದಂಚಿನ ಕನವರಿಕೆಗಳು’, ‘ಒಂದು ವಿಳಾಸದ ಹಿಂದೆ’, ‘ನೆಲದಾಯ ಪರಿಮಳ’ ಮೂರು ಲಲಿತ ಪ್ರಬಂಧಗಳು. ‘ಹೊತ್ತಗೆ ಹೊತ್ತ’ ಪುಸ್ತಕ ಪರಿಚಯ. ಇವರ ಕೆಲವು ಕವಿತೆ ಮತ್ತು ಪ್ರಬಂಧಗಳಿಗೆ ಬಹುಮಾನಗಳು ಸಂದಿವೆ. ಇವರ ಕೆಲ ಕವಿತೆಗಳು ಇಂಗ್ಲಿಷ್ ಮತ್ತು ಮಲಯಾಳಂಗೆ ಅನುವಾದಗೊಂಡಿದೆ. ಒಂದು ಪ್ರಬಂಧ, ...

READ MORE

Related Books