ಹೊಳೆದಂಡೆಯ ಅಂಕಣಮಾಲೆ, ನೋಟ-2

Author : ನಾಗತಿಹಳ್ಳಿ ಚಂದ್ರಶೇಖರ್‌

Pages 100

₹ 100.00




Year of Publication: 2010
Published by: ಅಭಿವ್ಯಕ್ತಿ ಒಂದು ಸಾಂಸ್ಕೃತಿಕ ವೇದಿಕೆ
Address: #166, 28ನೇ ಅಡ್ಡರಸ್ತೆ, 17ನೇ ಮುಖ್ಯರಸ್ತೆ, ಬಿ.ಎಸ್. ಕೆ. 2ನೇ ಹಂತ, ಬೆಂಗಳೂರು-560070
Phone: 08026715235

Synopsys

ಲೇಖಕ ನಾಗತಿಹಳ್ಳಿ ಚಂದ್ರಶೇಖರ ಅವರ ಅಂಕಣಗಳ ಬರೆಹ ಈ ಕೃತಿ-’ಹೊಳೆ ದಂಡೆ ಅಂಕಣಮಾಲೆ-ನೋಟ-2' . ಅಂಕಣಕಾರನ ಖಾಸಗಿ ಹಾಗೂ ಸಾರ್ವತ್ರಿಕ ಚಿಂತನೆಗಳು, ತತ್ಕಾಲಿಕ ಸಂಗತಿಗಳು ಇಲ್ಲಿ ಅರ್ಥ ವಿಸ್ತಾರವನ್ನು ಪಡೆದುಕೊಂಡಿವೆ. ಲೇಖಕರೇ ಹೇಳುವಂತೆ, ಅಂಕಣಕಾರ ಸೂರ್ಯನ ಕೆಳಗಿರುವ ಎಲ್ಲವನ್ನೂ ದಾಖಲಿಸಲು ಯತ್ನಿಸುತ್ತಿರುತ್ತಾನೆ. ಹೀಗಾಗಿ, ಅಂಕಣಕಾರನ ಪ್ರಜ್ಞೆ ಪ್ರವಾಹ ರೂಪದಲ್ಲಿರುತ್ತದೆ. ಹೊಳೆದಂಡೆಯ ಮೇಲೆ ಕುಳಿತು ತುಂಬಿ ಹರಿಯುವ ಬದುಕಿನ ಪ್ರವಾಹವನ್ನು ಬಿಡುಗಣ್ಣಿನಿಂದ ನೋಡ ತೊಡಗಿ ಹತ್ತು ವರ್ಷಗಳಾಯಿತು. ಈ ಕೃತಿಯು ಹೊಳೆದಂಡೆ ಅಂಕಣ ಮಾಲೆಯ ಎರಡನೇ ನೋಟ ಎಂದು ಲೇಖಕರೇ ತಮ್ಮ ಕೃತಿ ಬಗ್ಗೆ ಹೇಳಿಕೊಂಡಿದ್ದಾರೆ. ಪ್ರತಿ ಅಂಕಣದ ವಿಷಯ ವೈವಿಧ್ಯತೆಯಿಂದ ಕೂಡಿದ್ದು, ಓದುಗರನ್ನು ಸೆಳೆಯುತ್ತದೆ.

About the Author

ನಾಗತಿಹಳ್ಳಿ ಚಂದ್ರಶೇಖರ್‌
(15 August 1958)

ನಾಗತಿಹಳ್ಳಿ ಚಂದ್ರಶೇಖರ್ ಮೂಲತಃ ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯವರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದರು. ಸ್ನಾತಕೋತ್ತರ ಪದವಿಯನ್ನು ಹಲವಾರು ಸ್ವರ್ಣಪದಕಗಳೊಂದಿಗೆ ಗಳಿಸಿದ ಚಂದ್ರಶೇಖರ್ ತಮ್ಮ ಗ್ರಾಮ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ’ಯನ್ನು ಆರಂಭಿಸಿದರು. ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ’ಕ್ಕೆ ಸಹಾ ಚಾಲನೆ ನೀಡಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ...

READ MORE

Related Books