ಕಣ್ಣ ಕನ್ನಡಿಯಲ್ಲಿ

Author : ಅಬ್ಬೂರು ಪ್ರಕಾಶ್

Pages 136

₹ 170.00




Year of Publication: 2023
Published by: ಬಹುರೂಪಿ ಪ್ರಕಾಶನ
Address: ಬಸಪ್ಪ ಬಡಾವಣೆ, ಆರ್.ಎಂ.ವಿ 2ನೇ ಘಟ್ಟ, ಸಂಜಯನಗರ, ಬೆಂಗಳೂರು.
Phone: 7019182729

Synopsys

‘ಕಣ್ಣ ಕನ್ನಡಿಯಲ್ಲಿ’ ಅಬ್ಬೂರು ಪ್ರಕಾಶ್ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಪ್ರೊ. ಹೆಚ್.ಎಸ್. ಈಶ್ವರ ಅವರ ಮುನ್ನುಡಿ ಬರಹವಿದೆ: ಕುಟುಂಬಕ್ಕೆ ಸಂಬಂಧಿಸಿದ ಲೇಖನಗಳು- ಹಿರೀಕರು, ತಂದೆ ಅಣ್ಣಯ್ಯ, ತಾಯಿ ವೆಂಕಟಮ್ಮ, ಅಣ್ಣ ರಾಜು, ಅಕ್ಕ ಜಯಮ್ಮ- ಎಲ್ಲವೂ ಆತ್ಮೀಯವಾಗಿ ಹೊರಹೊಮ್ಮಿವೆ. ಒಬ್ಬೊಬ್ಬರದೂ ಅನನ್ಯ ವ್ಯಕ್ತಿತ್ವ ಅವರು ಎದರಿಸುವ ಸವಾಲುಗಳು, ಅವರ ಸಾಧನೆಗಳು ಅವರ ಸಂದರ್ಭಗಳಲ್ಲಿ ಮಾದರಿ ವ್ಯಕ್ತಿಗಳನ್ನಾಗಿಸಿವೆ. ನಿಮ್ಮ ತಂದೆ ತಾಯಿಯರ ಸರಳ ಬದುಕು, ಕಾಯಕವೇ ಕೈಲಾಸದ ಆದರ್ಶಗಳು ಗ್ರಾಮೀಣ ಬದುಕಿನ ಅವಿಭಾಜ್ಯ ಲಕ್ಷಣಗಳೇ ಆಗಿದ್ದು, ಅವರು ಆ ಬಗೆಯ ಬದುಕಿನ ಪ್ರತಿನಿಧಿಗಳಾಗಿ ಬೆಳಗುತ್ತಾರೆ.

ಹಳ್ಳಿಯ ಹಿಂದಿನ ಬದುಕನ್ನು ನೆನೆಸಿಕೊಂಡಾಗ ಕುವೆಂಪು ಅವರ ಕಿಂದರಿ ಜೋಗಿ ಕವಿತೆಯ 'ಅಯ್ಯೋ ಹೋಯಿತೆ ಆ ನಾಕ, ಅಯ್ಯೋ ಬಂದಿತೆ ಈ ಲೋಕ ಎಂಬ ಸಾಲು ನನ್ನನ್ನು ಕಾಡುತ್ತದೆ, ಕಷ್ಟ ಕೋಟಲೆಗಳ ನಡುವೆಯೂ ಆ ಬದುಕಿನಲ್ಲಿ ನೆಮ್ಮದಿ ಇತ್ತು, ಸಾಮರಸ್ಯ ಇತ್ತು. ನಿಮ್ಮ ದಾದೂ ಮತ್ತು ಬೂಬಮ್ಮರ ಸಂಗತಿ ಮಾಯವಾಗುತ್ತಿರುವ ಕೋಮು ಸೌಹಾರ್ದವನ್ನು ನೆನಪಿಸುತ್ತದೆ. ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಹಳ್ಳಿಗಳ ಅವಿಭಾಜ್ಯ ಅಂಗವೇ ಆಗಿದ್ದ ಮುಸ್ಲಿಂ ಕಸಬುದಾರರು, ಪಾತ್ರೆಗಳಿಗೆ ಕಲಾಯಿ ಹಾಕುತ್ತಿದ್ದ ಕಲಾಯಿ ಸಾಬರು, ಹಾಸಿಗೆ ತಯಾರಿಸುತ್ತಿದ್ದ ಥಡಿ ಸಾಬರು, ಮೀನು ಹೊತ್ತು ತರುತ್ತಿದ್ದ ಕರಿಮೀನು ಸಾಬರು ಹೀಗೆ ಹತ್ತು ಹಲವಾರು ಸಂಗತಿಗಳನ್ನು ನೆನಪಿಸುವ ನಿಮ್ಮ ಈ ಬರಹಗಳು ನನಗೆ ಇಷ್ಟವಾದುವು ಎಂದು ಪ್ರೊ. ಹೆಚ್.ಎಸ್. ಈಶ್ವರ ಹೆಸರಾಂತ ಸಂವಹನ ತಜ್ಞರು ಈ ಪುಸ್ತಕದಲ್ಲಿ ತಿಳಿಸಿದ್ದಾರೆ.

About the Author

ಅಬ್ಬೂರು ಪ್ರಕಾಶ್

ಅಬ್ಬೂರು ಪ್ರಕಾಶ್ ಅವರು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮೂರು ದಶಕಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಕೃತಿಗಳು: ಟಿಕೆಟ್ ಇಲ್ಲ,ಪ್ರಯಾಣ ನಿಲ್ಲಲ್ಲ ...

READ MORE

Related Books