ಸ್ತ್ರೀ (ಸಮಾನತೆಯ ಸಂಧಿಕಾಲದಲ್ಲಿ)

Author : ನಾಗರೇಖಾ ಗಾಂವಕರ

Pages 162

₹ 150.00




Year of Publication: 2020
Published by: ಸಾಧನಾ ಪಬ್ಲಿಕೇಷನ್ಸ್
Address: ಬಳೇಪೇಟೆ, ಬೆಂಗಳೂರು-560053.
Phone: 08040114455

Synopsys

ಲೇಖಕಿ ನಾಗರೇಖಾ ಗಾಂವಕರ್ ಅವರ ಸ್ತ್ರೀ ಕುರಿತ ಚಿಂತನಾತ್ಮಕ ಲೇಖನಗಳ ಸಂಗ್ರಹ ಕೃತಿ-ಸ್ತ್ರೀ. ಸಮಾನತೆಯ ಸಂಧಿಕಾಲದಲ್ಲಿ ಎಂಬ ಉಪಶೀರ್ಷಿಕೆಯೊಂದಿಗೆ ಮಹಿಳೆಯರ ಸ್ಥಿತಿಗತಿ-ಸ್ಥಾನಮಾನಗಳ ಕುರಿತು ವಿಶ್ಲೇಷಿಸಿದ ಲೇಖನಗಳನ್ನು ಒಳಗೊಂಡಿದೆ. ಜನಮಾಧ್ಯಮ ದಿನಪತ್ರಿಕೆಯಲ್ಲಿ ಬರೆಯುತ್ತಿದ್ದ ಅಂಕಣಬರಹಗಳನ್ನು ಸಂಗ್ರಹಿಸಲಾಗಿದೆ. 

ಸಾಹಿತಿ ಡಾ. ಎಚ್.ಎಲ್. ಪುಷ್ಪಾ ಅವರು ಕೃತಿಗೆ ಮುನ್ನುಡಿ ಬರೆದು ‘ಒತ್ತಡದ ಬರಹಗಳಲ್ಲೂ ಲೇಖಕಿಯು ಸ್ತ್ರೀ ಪ್ರಜ್ಞೆಯನ್ನು ಕೇಂದ್ರವಾಗಿರಿಸಿಕೊಂಡು ಅದರ ಬುಡದಲ್ಲಿ ಬಲವಾಗಿ ಹರಡಿಹೋದ ಬೇರುಗಳನ್ನು ಪರಿಶೀಲಿಸುವ ಕ್ರಮ ಮೆಚ್ಚುವಂತದ್ದು. ಸ್ತ್ರೀ, ಸ್ತ್ರೀ ಪ್ರಜ್ಞೆ, ಲಿಂಗ ಅಸಮಾನತೆ ಕುರಿತು ಪೂರ್ವಗ್ರಹ ಚೌಕಟ್ಟುಗಳಿರುವುದರಿಂದ, ಬಹುತೇಕ ಲೇಖಕರು ತಮ್ಮ ಆಲೋಚನಾ ಕ್ರಮದಿಂದ ಮುಟ್ಟಲಾಗದ ಈ ಮರವನ್ನು ಲೇಖಕಿ ಮತ್ತೇ ಮತ್ತೆ ಮುಟ್ಟುತ್ತಾರೆ. ಲೇಖಕಿಯು ಸಾಹಿತ್ಯ ಮತ್ತು ಸ್ತ್ರೀ ಚಳವಳಿಗಳು ಒಟ್ಟಾಗಿಯೇ ನೋಡಿದ್ದಾರೆ. ಹೋರಾಟದ ಫಲವಾಗಿ ಮಹಿಳೆಯರು ಕೆಲವು ಹಕ್ಕುಗಳನ್ನು ಪಡೆದಿದ್ದಾರೆ.  ಆದರೆ, ಹಳೆಯ ವಿಚಾರಗಳನ್ನು ಬಿಟ್ಟುಕೊಡುತ್ತಿಲ್ಲ. ಬದಲಾವಣೆಗೆ ಒಪ್ಪುತ್ತಿಲ್ಲ. ಹಳೆಯ ಜಗತ್ತನ್ನು ಹೇಗೆ ಬದಲಾಯಿಸಬೇಕು?, ಏಕಕಾಲದಲ್ಲಿ ಹತ್ತು ಹಲವು ಕಾರ್ಯ ಸಾಮರ್ಥ್ಯಗಳನ್ನು ತೋರುವ, ಹೊಣೆಗಾರಿಕೆಯನ್ನು ನಿರ್ವಹಿಸುವ ಮಹಿಳೆ ಕೌಟುಂಬಿಕ ಸಂಬಂಧಗಳಲ್ಲಿ ಎಂದೂ ಎರಡನೇ ಪ್ರಜೆಯಾಗಿಯೇ ಏಕೆ ನಿಲ್ಲಬೇಕು? ಎಂಬ ಪ್ರಶ್ನೆಗಳು ಇಲ್ಲಿಯ ಲೇಖನಗಳು ಆರೋಗ್ಯಕರವಾಗಿ ಚರ್ಚಿಸುತ್ತವೆ ’ ಎಂದು ಪ್ರಶಂಸಿಸಿದ್ದಾರೆ. 

 

 

About the Author

ನಾಗರೇಖಾ ಗಾಂವಕರ

ಸೂಕ್ಷ್ಮ ಸಂವೇದನೆಯ ಕತೆಗಾರ್ತಿ ನಾಗರೇಖಾ ಗಾಂವಕರ ಅವರು ಮೂಲತಃ ಉತ್ತರ ಕನ್ನಡದವರು. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿಧರೆಯಾದ ಅವರು ಪ್ರಸ್ತುತ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. `ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ’ (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ (ಅಂಕಣ ಬರಹ ಕೃತಿ), ಸಮಾನತೆಯ ಸಂಧಿಕಾಲದಲ್ಲಿ (ಮಹಿಳಾ ಸಮಾನತೆಯ ಕುರಿತ ಅಂಕಣ ಬರಹ ಕೃತಿ), ಕವಾಟ (ಪುಸ್ತಕ ಪರಿಚಯ ಕೃತಿ) ಅವರ ಪ್ರಮುಖ ಕೃತಿಗಳು.  ಅವರ ‘ಏಣಿ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ...

READ MORE

Reviews

’ಸ್ತ್ರೀ ಸಮಾನತೆಯ ಸಂಧಿಕಾಲದಲ್ಲಿ’ ಕೃತಿಯ ವಿಮರ್ಶೆ

ಸ್ತ್ರೀ ಸಮಾನತೆಯ ಹಾದಿಯಮುಳ್ಳು-ತೊಡರುಗಳು

ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಅಂಕಣ ಬರಹಗಳ ಸಂಗ್ರಹದ ಪುಸ್ತಕ ಸ್ತ್ರೀ-ಸಮಾನತೆಯ ಸಂಧಿಕಾಲದಲ್ಲಿ. ನಾಗರೇಖಾ ಗಾಂವಕರ ಅವರು ಈ ಪುಸ್ತಕದಲ್ಲಿ ಸ್ತ್ರೀ-ಪುರುಷ ಅಸಮಾನತೆಗಳ ಬಿಡಿಚಿತ್ರಗಳ ಬಿಂಬಗಳನ್ನು ಹೆಕ್ಕಿತೆಗೆದು ತೋರಿಸಿದ್ದಾರೆ. ಹೆಣ್ಣು ಗಂಡುಗಳ ಸಹಜೀವನದ ಹೊಂದಾಣಿಕೆಗೆ ಬೇಕಾದ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ.

ಮಹಿಳೆಯಾಗಲಿ, ಪುರುಷನಾಗಲಿ ಅವನ/ಳ ನಡವಳಿಕೆಗಳು ಸಾಮಾಜಿಕ ಸಂರಚನೆಗಳ (ಸೋಷಿಯಲ್ ಕನ್ ಸ್ಟ್ರಕ್) ಅನ್ವಯ ರೂಪಗೊಳ್ಳುತ್ತವೆ. ದೈಹಿಕಭಿನ್ನತೆಯನ್ನು ಹೊರತುಪಡಿಸಿ, ಬೇರೆ-ಬೇರೆ ಸಾಮಾಜಿಕ ಸಂರಚನೆಗಳಾಗಿ ರೂಪುಗೊಂಡ ವಿವಿಧ ಪಾತ್ರಗಳ ನಿಭಾವಣೆಯನ್ನು ಸ್ತ್ರೀ-ಪುರುಷರಿಬ್ಬರೂ ಮಾಡಬೇಕಾಗುತ್ತದೆ. ಮಹಿಳೆಯಿಂದ ನಿರೀಕ್ಷಿಸಲಾಗುವ ವಿವಿಧ ಪಾತ್ರಗಳಾದ ಕರುಣಾಮಯಿ ತಾಯಿ, ಹೊಂದಿಕೊಂಡು ಬಾಳುವ ಹೆಂಡತಿ, ಕುಟುಂಬದ ಸದಸ್ಯರ ಕಾಳಜಿ ವಹಿಸುವ ಪರಿಚಾರಕಿ, ಪತಿಯ ಆಜ್ಞೆಯನ್ನು ಪರಿಪಾಲಿಸುವ, ಕೆಟ್ಟ ನಡವಳಿಕೆಗಳನ್ನು ಪ್ರಶ್ನಿಸದ ವಿನಮ್ರ ಸೇವಕಿ, ಹೀಗೆ ರ್ಪಗಳ ಹಲವು ಪಾತ್ರಗಳ ಜೊತೆಗೆ ಆರ್ಥಿಕವಾಗಿ ಊರುಗೋಲು ಆಗಬೇಕಾಗಿರುವುದೂ ಸೇರಿಕೊಂಡಿದೆ. ’One is not born, but rather omes a woman'. ಲಿಂಗತ್ವ (gender) ಎಂಬುದು ಪುರುಷಪ್ರಧಾನ ವ್ಯವಸ್ಥೆಯ ಸಾಮಾಜಿಕ ಸಂರಚನೆ, ಸಮಾನತೆಯನ್ನು ಸಾಧಿಸುವ ಗುರಿಯನ್ನಾಗಿಸಿಕೊಂಡು, ಸಾಮಾಜಿಕ ಕಟ್ಟಳೆಗಳು/ ಸುತ್ತದೆ. ದೂರಿನ ರಚನೆಗಳನ್ನು ಬದಲಾಯಿಸಲು ಅಥವಾ ಗ್ರಹಿಕೆಗಳನ್ನು ಪರಿವರ್ತಿಸಲು ಸಾಕಷ್ಟು  ಹೋರಾಟ, ಜಾಗೃತಿ ಮೂಡಿಸಲು ಅವಿರತ ಪ್ರಯತ್ನ ನಡೆಯುತ್ತಲೇ ಇರಬೇಕಾಗುತ್ತದೆ.

ಮಹಿಳೆಯು ಈ ಮಟ್ಟಕ್ಕೆ ಬಂದು ಸೇರಿದ ದಾರಿ ಹಲವು ಹೋರಾಟಗಳ ಮತ್ತು ಸಮಾಜಸುಧಾರಕರ ಪ್ರಯತ್ನದ ಫಲವಾಗಿದೆ. ಮಹಿಳೆಯ ಸ್ಥಾನಮಾನ ಮತ್ತು ಆಕೆಯ ಸಾಮರ್ಥ್ಯದ ವಿವರಣೆ ನೀಡುತ್ತಾ, ಲೇಖಕಿಯು ಕಾರ್ಲ್‌ಮಾರ್ಕ್ಸನನ್ನು ಉದ್ಧರಿಸಿ ಮಹಿಳೆಯನ್ನು ಸಾಮಾಜಿಕ ಚಟುವಟಿಕೆಗಳಿಂದ ವಂಚಿತರನ್ನಾಗಿಸಿ, ಅಡುಗೆಮನೆಯ ಸರ್ವಾಧಿಕಾರದ ಪಟ್ಟಕಟ್ಟುವುದರಿಂದ ಸಮಾನ ಸ್ಥಾನಮಾನ ದುಸ್ಸಾಧ್ಯ ಎನ್ನುತ್ತಾರೆ. ಬಳೆಯ ರೂಪಕವನ್ನು ಬಳಸಿ, ಬಳೆ ಹೆಣ್ಣಿಗೆ ಆಭರಣವಾದರೆ, ಗಂಡಿಗೆ ಕಡಗವಾಗಿ ಧೈರ್ಯ-ಶೌರ್ಯದ ಸಂಕೇತವಾಗುತ್ತದೆ. ವಿಪರ್ಯಾಸವೆಂದರೆ, ಪುರುಷ 'ನಾನೇನು ನಮ್ಮ ಕೈಗೆ ಬಳೆ ತೊಳ್ಕೊಂಡಿಲ್ಲ' ಎಂದು ಮಹಿಳೆಯ ಸಾಮರ್ಥ್ಯದ ಬಗ್ಗೆ ಅಣಕಿಸುತ್ತಾನೆ. ಕವನ್ನು ಲೇಖಕಿಯು ದೃಷ್ಟಾಂತಗಳ ಮೂಲಕ ಎಲ್ಲಾ ಸ್ತರಗಳ ಮಹಿಳೆಯರು ಒಳಗಾಗುವ ತಾರತಮ್ಯದ ವಿಧಾನಗಳಲ್ಲಿ ಏಕರೂಪತೆಯನ್ನು ಕಾಣಿಸುತ್ತಾರೆ. ವಿಧವೆಯರಿಗೆ ಸರಕಾರದ ಹಲವು ಬಗೆಯ ಸಹಾಯ ಲಭ್ಯವಿರುವ ಈ ಕಾಲದಲ್ಲಿಯೂ, ರಿವಾಜಿನಂತೆ ಆಕೆಯ ಹರಾಜು ಅವಳ ಅರಿವಿಗೆ ಬಾರದೇ ನಡೆಯುವುದು ನಿಜಕ್ಕೂ ಮಹಿಳೆಯ ಕುರಿತಾದ ಪುರುಷಮನಸ್ಥಿತಿಯ ದ್ಯೋತಕವಾಗಿದೆ. ಆ ವೈರುಧ್ಯದ ಪರಿಸ್ಥಿತಿಯಲ್ಲಿ, ಆಕೆ ಧೈರ್ಯ ತೋರಿ ಪ್ರತಿರೋಧ ಒಡ್ಡಿರುವುದು, ಒಂದು ಬೆಳ್ಳಿರೇಖೆಯಾದರೂ, ಸಿಗಂಡ್ ಫ್ರಾಯ್‌ನಿಂದ ದೊಂದು ಹಿಡಿದು, ನಮ್ಮ ನುಡಿಗಟ್ಟುಗಳಲ್ಲಿ ಮಿಳಿತವಾಗಿರುವ ಮಹಿಳೆಯ ಕುರಿತ ಧೋರಣೆಗಳನ್ನು - ಹೆಚ್ಚು ಬದಲು ಮಾಡುವ ದಾರಿಯಲ್ಲಿ ಬಹುದೂರ ಸಾಗಬೇಕಿದೆ ಎಂಬುದನ್ನು ಸೂಚಿಸುತ್ತದೆ. ಲೇಖಕಿಯು ಸಾಹಿತ್ಯ, ಪುರಾಣ ಮತ್ತು ದೃಷ್ಟಾಂತಗಳ ಮೂಲಕ, ಸ್ತ್ರೀ ಸಮುದಾಯದ ನೋವು, ಸಂಕಷ್ಟ ಅವಮಾನ, ಅನಿವಾರ್ಯತೆ ಮತ್ತು ಸಾಮರ್ಥ್ಯಗಳನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ. ಮುನ್ನುಡಿಯಲ್ಲಿ 'ಶಾಂತವಾದ ಕೊಳವನ್ನು ಕದಡಿ ಬಗ್ಗಡವಾಗಿಸಲಿ' ಎಂದು ಆಶಿಸಿದಂತೆ ಕ್ರಾಂತಿಕಾರಕ ಬರಹಗಳಿಲ್ಲ, ಸನ್ನಿವೇಶಕ್ಕೆ ಅನುಗುಣವಾಗಿ, ಅಲಸ್ವಲ್ಪ ವ್ಯತ್ಯಾಸಗಳಾದರೆ ಸಾಕು ಎಂಬ ಅಭಿಪ್ರಾಯವೇ ಪ್ರಧಾನವಾಗಿದೆ. ಆದರೆ ಇಂತಹುದೊಂದು ಸ್ತ್ರೀ-ಸಂವೇದೀ ಲೇಖನ ಸಂಗ್ರಹ ಸ್ತ್ರೀ-ಸಮಾನತೆಯತ್ತ ಸಾಗಲು ಉತ್ತೇಜನಕಾರಿ ಬೆಳವಣಿಗೆ.

ಡಾ. ಎಚ್.ಎಲ್. ಪುಷ್ಪಾ ಅವರು ಮುನ್ನುಡಿಯಲ್ಲಿ ತಿಳಿಸಿರುವಂತೆ, ಅಕ್ಷರಗಳು ಈ ಅಂಕಣಬರಹಗಳ ಮಿತಿಯೆಂದರೆ, ಹಲವಾರು ವಿಷಯಗಳು ಚರ್ವಿತಚರ್ವಣವಾಗಿರುವುದು, ಒಂದು ವಿಷಯದ ಆಳಕ್ಕೆ ಹೋಗದೇ, ಒಂದೇ ವಿಷಯವನ್ನು ವಿಧವಿಧ ಬಣ್ಣದ ಬಟ್ಟೆತೊಡಿಸಿ ಪ್ರಸ್ತುತಪಡಿಸಿರುವುದು, ಹಾಗಾಗಿಯೇ ಧ್ಯತೆಗಳು ಹೊಸತೇನನ್ನೂ ಓದಿದ ಅನುಭವವಾಗಲಾರದು. ಅಲ್ಲದೇ ಕಾಗುಣಿತದ ತಪ್ಪುಗಳಿರುವುದು. ಹೈವೇಯಲ್ಲಿ ಸಲೀಸಾಗಿ ಸಾಗುತ್ತಿರುವಾಗ, ಅತಿಯಾದ ಹಂಪ್‌ಗಳು ಎತ್ತಿಹಾಕಿದಂತಹ ಅನುಭವವಾಗುತ್ತದೆ. 

(ಕೃಪೆ: ಹೊಸ ಮನುಷ್ಯ ಬರಹ: ಶ್ರೀದೇವಿ ಕೆ.)

---

ಹೆಣ್ಣಿನ ಚರಿತ್ರೆ ಮತ್ತು ಆಳುವ ಅಹಂಕಾರದ ವಿರುದ್ಧ ವ್ಯವಧಾನದ ಬಲ- ವೆಂಕಟ್ರಮಣ ಗೌಡ

Related Books