
ಹಾಯಿದೋಣಿ-ಲೇಖಕ ಹಾಗೂ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರ ಅಂಕಣ ಬರಹಗಳ ಕೃತಿ. ಪ್ರಜಾವಾಣಿಯಲ್ಲಿ ಸೇವೆ ಸಲ್ಲಿಸಿದ್ದ ಅವಧಿಯಲ್ಲಿ ಬರೆದ ವಾರದ ಅಂಕಣಗಳ ಬರಹಗಳನ್ನು ಇಲ್ಲಿ ಸಂಕಲಿಸಲಾಗಿದೆ. ‘ಈ ಬರಹಗಳು ಕಥನಗುಣಗಳಿಂದ ಓದುಗರನ್ನು ಸೆಳೆಯುತ್ತವೆ. ಆ ಕಥನಕೌಶಲ್ಯದ ಜೊತೆಗೆ ಒಂದು ಸೃಜನಾತ್ಮಕ ಪರಿವೆಯೂ ಕೆಲಸ ಮಾಡಿದೆ. ಮಲೆನಾಡಿನ ಬಗ್ಗೆ ಬರೆಯುವಾಗ ಮೈಮರೆತಂತೆ ಕಂಡರೂ ಅಲ್ಲಿ ಆಗಿರುವ ಸೂಕ್ಷ್ಮ ಬದಲಾವಣೆಗಳನ್ನೂ ದಾಖಲಿಸಲು ಲೇಖಕ ಮರೆಯುವುದಿಲ್ಲ' ಎಂದು ಕೃತಿಗೆ ಬರೆದ ಮುನ್ನುಡಿಯಲ್ಲಿ ಲೇಖಕ ಎಚ್.ಎಸ್.ಶಿವಪ್ರಕಾಶ್ ಪ್ರಶಂಸಿಸಿದ್ದಾರೆ.

‘ಹಾಯಿದೋಣಿ’ ಗೆ ದೊರೆತ ಸ್ಪಂದನಗಳು
ಹಾಯಿದೋಣಿಯ ಬರಹಗಳು ಕಿರುಹಣತೆಗಳಂಥ ಪುಟ್ಟ ಪದ್ಯಗಂಧಿ ಪ್ರಬಂಧಗಳೇ ಸರಿ- ಪ್ರೊ.ಸಿ.ಪಿ.ಕೆ.
ಹಾಯಿ ದೋಣಿ ಓದಲು ಖುಷಿಯಾಗುತ್ತದೆ. ಭಾಷೆಯ ಸೊಗಡು, ನಿರೂಪಣೆಯ ಕುಶಲತೆ ಸೊಗಸಾಗಿದೆ.
- ಡಿ.ಬಿ.ರಜಿಯಾ
ಹಾಯಿದೋಣಿ ಅಂಕಣ ಅಪರೂಪದ ಬರಹ. ಬದುಕಿನಲ್ಲಿ ನಡೆಯುವ ನೈಜ ಘಟನೆಗಳೊಂದಿಗೆ ತಳುಕು ಹಾಕಿಕೊಂಡು ಅತ್ಯಂತ ಸರಳವಾಗಿ ಸುಲಲಿತವಾಗಿ ಹರಿದು ಬರುವ ಬರಹಗಳು ಪ್ರತಿಯೊಬ್ಬರ ಬದುಕಿಗೂ ಕನ್ನಡಿ ಹಿಡಿದಂತಿವೆ.
- ಪಾರ್ವತಿ ಅ. ಪಿಟಗಿ
©2025 Book Brahma Private Limited.