ಕಣ್ಣ ಕನ್ನಡಿಯಲ್ಲಿ-1

Author : ನಂದೀಶ್ ಬಂಕೇನಹಳ್ಳಿ

Pages 204

₹ 225.00




Year of Publication: 2024
Published by: ರಕ್ಷಣ್ ಪಬ್ಲಿಕೇಶನ್
Address: ನಂ.7 & 8, ಮೊದಲನೇ ಮಹಡಿ, ತುಮಕೂರು ಮುಖ್ಯರಸ್ತೆ, ಎಂ.ಇ.ಐ ಫ್ಯಾಕ್ಟರಿ ಮುಂಭಾಗ, ರಾಘವೇಂದ್ರಲೇಔಟ್, ಸಿ ಬ್ಲಾಕ್, ಯಶವಂತಪುರ- 560022
Phone: 9945555357

Synopsys

‘ಕಣ್ಣ ಕನ್ನಡಿಯಲ್ಲಿ-1’ ನಂದೀಶ್ ಬಂಕೇನಹಳ್ಳಿ ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಗೆ ಲೇಖಕ ಎಚ್.ಎಸ್. ಸತ್ಯನಾರಾಯಣ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಮಲೆನಾಡಿನ ಮಡಿಲಲ್ಲಿ ಅರಳಿದ ಭರವಸೆಯ ಹೊಸತಲೆಮಾರಿನ ಲೇಖಕರಾದ ನಂದೀಶ್ ಬಂಕೇನಹಳ್ಳಿಯವರದು ಸೂಕ್ಷ್ಮ ಸಂವೇದಿಯಾದ ಮನಸ್ಸು. ಕಣ್ಣ ಕನ್ನಡಿಯ ಮೂಲಕ ಕಾಣಿಸಿರುವ ಅಪೂರ್ವ ವ್ಯಕ್ತಿ ಚಿತ್ರಗಳು ಇಲ್ಲವೆ. ಇಲ್ಲಿರುವ ಸ್ಥಳೀಯ ಚೇತನಗಳು ನೆಲಮೂಲ ಸಂಸ್ಕೃತಿಯವು. ಬದುಕಿನ ಬವಣೆಗಳಿಗೆ ಬೆಚ್ಚದೆ, ಆತ್ಮಬಲದಿಂದ ಎದುರಿಸಿ ನಿಂತು ಕಾಯಕನಿಷ್ಠೆಯನ್ನು ವ್ರತದಂತೆ ಸ್ವೀಕರಿಸಿದವರು, ಘನತೆಯ ಬದುಕನ್ನು ಕಟ್ಟಕೊಳ್ಳಲು ಹೆಣಗಿದವರು, ಕಣ್ಣೀರನ್ನು ಒರೆಸಿಕೊಳ್ಳುತ್ತ ಇತರರ ಕಣ್ಣೀರನ್ನು ತೊಡೆದವರು. ನಾಗರೀಕ ಜಗತ್ತಿನಲ್ಲಿ ಪ್ರಸಿದ್ಧರಲ್ಲದ ಅತಿ ಸಾಮಾನ್ಯರೊಳಗಿರುವ ಜೀವಪ್ರೀತಿಯನ್ನು ನಂದೀಶರ ಲೇಖನಿ ದಾಖಲಿಸಿದೆ.

ಕುವೆಂಪು ಅವರು ಹೇಳಿದ 'ಅಪತ್ರಿಕಾ ವಾರ್ತೆ'ಗೆ ಮಾದರಿಯಾದ ಕಣ್ಣ ಕನ್ನಡಿಯೊಳಗಣ ವ್ಯಕ್ತಿಚಿತ್ರಗಳೆಲ್ಲ ತಮ್ಮ ಕಥೆಯನ್ನು ತಾವೇ ಹೇಳಿಕೊಳ್ಳುವ ತಂತ್ರವನ್ನು ಲೇಖಕರು ಬಳಸಿರುವುದು ಅವ್ಯಕ್ತ ಆತ್ಮಕಥೆಗಳಿಗೊಂದು ಸ್ಪೇಸ್ ಒದಗಿಸಿದಂತಾಗಿದೆ. ನಮ್ಮ ಸುತ್ತಮುತ್ತಲಲ್ಲೇ ಇರುವ ಇಂತಹ ಶಕ್ತ-ಜೀವನೋತ್ಸಾಹದಿಂದ ಪುಟಿಯುವ ವ್ಯಕ್ತಿತ್ವಗಳೆಡೆ ನಮ್ಮ ಗಮನಹರಿಸಬೇಕಾದ ತುರ್ತನ್ನು ಒತ್ತಿಹೇಳುವ ಈ ಅಂಕಣ ಬರಹಗಳು ಶ್ರಮಸಂಸ್ಕೃತಿಯ ಬೆವರಿನ ಚರಿತ್ರೆಗೆ ಬರೆದ ಮುನ್ನುಡಿಯಂತಿದೆ. ತಮ್ಮ ಸುತ್ತಲನ್ನು ಎಚ್ಚರದಗಣ್ಣಿನಿಂದ ಗಮನಿಸಿ, ಈ ಬಗೆಯ ಬರಹಕ್ಕೆ ಮುಂದಾಗಲು ನಮ್ಮ ನಾಡಿನ ಹೊಸತಲೆಮಾರಿನ ಲೇಖಕರಿಗೆ ನಂದೀಶ್ ಬಂಕೇನಹಳ್ಳಿಯವರ 'ಕಣ್ಣಕನ್ನಡಿಯಲ್ಲಿ' ಕೃತಿಯು ಪ್ರೇರಣೆಯೊದಗಿಸಲಿದೆ. ಈ ಮೂಲಕ ಹೊಸ ವಸ್ತು ವೈವಿಧ್ಯತೆಯು ಸಾಹಿತ್ಯಲೋಕದ ಗಮನ ಸೆಳೆಯಲಿರುವುದು ಹರ್ಷದಾಯಕ ಸಂಗತಿ.

ಓದಿದಾಕ್ಷಣ ಮನಮುಟ್ಟುವ ಸರಳವಾದ ಭಾಷಾಕೌಶಲ ಈ ಲೇಖನದ ಬಹುದೊಡ್ಡ ಶಕ್ತಿ. ಈ ಶಕ್ತಿ ಮತ್ತಷ್ಟು ಅಮೂಲ್ಯವಾದ ಬರಹವನ್ನು ಕನ್ನಡ ಕಥನ ಪರಂಪರೆಗೆ ಜೋಡಿಸಲೆಂದು ಆಶಿಸುತ್ತಾ ಹೊಸತಲೆಮಾರಿನ ಹೊಸಲೇಖಕನ ಹೊಸಕೃತಿಯನ್ನು ಕನ್ನಡದ ಮನಸ್ಸುಗಳು ಪ್ರೀತಿಯಿಂದ ಬರಮಾಡಿಕೊಳ್ಳಲೆಂದು ಹಾರೈಸಿದ್ದಾರೆ.

About the Author

ನಂದೀಶ್ ಬಂಕೇನಹಳ್ಳಿ

ನಂದೀಶ್ ಬಂಕೇನಹಳ್ಳಿ ಮೂಲತಃ ಮಲೆನಾಡಿನವರು. ಕಲೆ, ಸಾಹಿತ್ಯ, ಇತಿಹಾಸ, ರಾಜಕೀಯ ಎಲ್ಲದರಲ್ಲೂ ನನ್ನೂರು ಸ್ಛಾನ ಪಡೆದಿದೆ ಎನ್ನುವ ಅವರು ಹವ್ಯಾಸಿ ಫೋಟೋಗ್ರಾಫರ್. ಕೊಟ್ಟಿಗೆ ಹಾರದಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿರುವ ನಂದೀಶ್ ಓದು, ಪ್ರಕೃತಿ ವೀಕ್ಷಣೆ, ಕಥೆ-ಕವನ ರಚನೆಯನ್ನು ತಮ್ಮ ಇಷ್ಟದ ಹವ್ಯಾಸವಾಗಿಸಿಕೊಂಡಿದ್ದಾರೆ, ‘ಮುಖವಾಡ’ ಇವರ ಪ್ರಕಟಿತ ಕವನ ಸಂಕಲನ. ...

READ MORE

Related Books