
ಖ್ಯಾತ ಪರಿಸರವಾದಿ ನಾಗೇಶ ಹೆಗಡೆ ಅವರ ಕೃತಿ-ಶತ್ರುವಿಲ್ಲದ ಸಮರ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖಕರ ಅಂಕಣ ಬರಹಗಳನ್ನು ಸಂಕಲಿಸಲಾಗಿದೆ. ಭೂಮಿಯ ಉಷ್ಣತೆ ಹೆಚ್ಚುತ್ತಿದೆ. ಹಸಿರು ಕಡಿಮೆಯಾಗಿ ಮಳೆಯ ಪ್ರಮಾಣವೂ ತಗ್ಗುತ್ತಿದೆ. ಇದರಿಂದ, ಭೂಮಿಯ ಸಮತೋಲನ ತಪ್ಪಿ ನಿಸರ್ಗ ವಿಕೋಪಗಳು ಸಂಭವಿಸುತ್ತವೆ. ಲೇಖಕರೇ ಹೇಳುವಂತೆ ‘ಮುಷ್ಟಿಗೆ ಸಿಕ್ಕಷ್ಟನ್ನು ಇಲ್ಲಿ ಪೋಣಿಸಲಾಗಿದೆ. ಇವೆಲ್ಲ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರತಿ ಗುರುವಾರ ಪ್ರಕಟವಾಗುತ್ತಿರುವ ‘ವಿಜ್ಞಾನ ವಿಶೇಷ’ ಅಂಕಣ ಬರಹಗಳು. ಎಲ್ಲವೂ ಬಿಸಿಭೂಮಿಗೆ ಸಂಬಂಧಿಸಿದ ವಿಷಯಗಳೇನಲ್ಲ. ಆಯಾ ವಾರದಲ್ಲಿ, ಮುಖ್ಯವೆನಿಸಿದ ವಿಶ್ವ ವಿದ್ಯಮನಗಳನ್ನು ಎದುರಿಗೆ ಇಟ್ಟುಕೊಂಡು ನಮ್ಮ ಸಮಾಜಕ್ಕೆ, ನಮ್ಮ ಸಮಯಕ್ಕೆ ಪ್ರಸ್ತುತವೆನಿಸುವಂತೆ ಬರೆದಿರುವ ವಿಶ್ಲೇಷಣೆಗಳು ಇವು. ಆದರೆ ಬಿಸಿ ಪ್ರಳಯ ಪದೇ ಪದೆ ಅಲ್ಲಲ್ಲಿ ಪ್ರಸ್ತಾಪಕ್ಕೆ ಬಂದಿದೆ. ಇಸವಿಯ ಆರಂಭದಲ್ಲೂ ಅದೇ, ಕೊನೆಯಲ್ಲೂ ಅದೇ. ಅದಕ್ಕೇ ಈ ಸಂಕಲನಕ್ಕೆ ‘ಸಮರ’ದ ಶಿರೋನಾಮೆ ಕೊಡಲಾಗಿದೆ.’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2025 Book Brahma Private Limited.