
ಹರಳುಗಟ್ಟಿದ ವಿಚಾರಗಳನ್ನು ಬರಹ ರೂಪದಲ್ಲಿ ಸಾಂದ್ರಿಕರಿಸಿದ, ಅನೇಕ ಘಟನೆಗಳು ಮಿಳಿತಗೊಂಡಿರುವ ಅಂಕಣ ಬರೆಹಗಳ ಸಂಗ್ರಹರೂಪ ’ಹುಲಿಕಲ್ ಜಾತ್ರೆ’. ಒಟ್ಟು 51 ವಿವಧ ರೀತಿಯ ಅಂಕಣ ಬರಹಗಳ ಈ ಪುಸ್ತಕದಲ್ಲಿ, 17ಕ್ಕೂ ಹೆಚ್ಚು ಪುಸ್ತಕಗಳ ಪರಿಚಯವಿದೆ. 'ಅಯೋಧ್ಯ ವಿವಾದ ಮತ್ತೆ ರಂಗಸ್ಥಳಕ್ಕೆ', 'ಎಳೆಯರೆಲ್ಲರ ಪಠ್ಯವಾಗಬೇಕಾಗಿದೆ', ಗಾಂಧೀಜಿ ಹತ್ಯೆ ಮತ್ತು ಗೋಡೆ', 'ಕಾಲ ಮಿತಿಯಾಚೆಯ ಪ್ರಸ್ತುತತೆ', 'ಕೃತಿಯೊಂದರಲ್ಲಿ ಅರಸಿದ ಸ್ವಾರಸ್ಯ', 'ಒಂದು ಸುಳ್ಳಿನ ಜೊಪತೆಗೆ ನೈಜ ಚರಿತ್ರೆ', 'ಆಧುನಿಕ ರಾಜ ಮಹಾರಾಜರು', ಹೀಗೆ ಹಲವು ಕೃತಿಗಳನ್ನು ಓದಿ ಅದರ ಸಾರ ಸಂಗ್ರಹಿಸಿ ಓದುಗರಿಗೆ ವಿಚಾರಗಳ ತಲುಪಿಸುವ ಕಾರಂತ್ ತಮ್ಮ ಅಭಿಪ್ರಾಯ ನಿಲುವುಗಳನ್ನು ಇಲ್ಲಿ ನೀಡಿದ್ದಾರೆ.
©2025 Book Brahma Private Limited.