ದಿನ ದಿನದ ದಿಕ್ಸೂಚಿ

Author : ಸಿ. ನಾಗಣ್ಣ

Pages 176

₹ 140.00




Year of Publication: 2018
Published by: ವಾಚಸ್ಪತಿ ಪ್ರಕಾಶನ
Address: #658, 2ನೇ ಪ್ಲೋರ್, 4ನೇ ಮುಖ್ಯರಸ್ತೆ, 4ನೇ ಕ್ರಾಸ್, ಈ ಮತ್ತು ಎಫ್ ಬ್ಲಾಕ್, 2ನೇ ಸ್ಟೇಜ್, ರಾಮಕೃಷ್ಣನಗರ, ಮೈಸೂರು

Synopsys

‘ದಿನ ದಿನದ ದಿಕ್ಸೂಚಿ’ ಲೇಖಕ ಡಾ.ಸಿ. ನಾಗಣ್ಣ ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಗೆ ಹಿರಿಯ ವಿಮರ್ಶಕ ಓ.ಎಲ್. ನಾಗಭೂಷಣ ಸ್ವಾಮಿ ಬೆನ್ನುಡಿ ಬರೆದಿದ್ದಾರೆ. ದಿನಪತ್ರಿಕೆಯ ಅಂಕಣವೆಂದರೆ ಸಮಕಾಲೀನ ಚರಿತ್ರೆಯ ಕಥನ: ದಿನ ದಿನ ನಡೆಯುವ ಸಂಗತಿಗಳನ್ನು ಕುರಿತು ಸಂವೇದನಾಶೀಲ ಮನಸಿನ ವ್ಯಾಖ್ಯಾನ ಕೇವಲ ನಿಷ್ಪಕ್ಷಪಾತ, ನೀರಸ ಸುದ್ದಿಯಾಗುವ ಬದಲಾಗಿ ಖಚಿತ ನಿಲುವಿನ, ಸ್ಪಷ್ಟ ಧೋರಣೆಯ ಹಿನ್ನೆಲೆಯಲ್ಲಿ ಸುದ್ದಿಯಾದ, ಆಗದ ಸಂಗತಿಗಳನ್ನು ಕುರಿತ ಲಲಿತ ಪ್ರಬಂಧ. ಡಾ.ಸಿ. ನಾಗಣ್ಣ ಅವರ ದಿನದಿನದ ದಿಕ್ಸೂಚಿಯ ಬರಹಗಳು ಈ ಮಾತಿಗೆ ನಿದರ್ಶನ ಎನ್ನುತ್ತಾರೆ ಓ.ಎಲ್. ನಾಗಭೂಷಣಸ್ವಾಮಿ. ಕನ್ನಡದ ಮತ್ತು ಜಗತ್ತಿನ ಅನೇಕ ಖ್ಯಾತ ಸಾಹಿತಿಗಳು ಹೆಸರಾಂತ ಅಂಕಣಕಾರರೂ ಹೌದು. ಕಲ್ಪನೆಯ ರಾಜ್ಯದಲ್ಲಿ ವಿಹರಿಸುತ್ತಾ ವಾಸ್ತವವನ್ನು ಮರೆಯದಂತೆ, ದಾರಿ ತಪ್ಪದಂತೆ, ಸದಾ ಎಚ್ಚರವಾಗಿರುವ ಆರೋಗ್ಯಕರ ಒತ್ತಾಯವನ್ನು ಅಂಕಣಗಳು ತರುತ್ತವೆ. ಸ್ವತಃ ಅನುವಾದಕರು, ಪ್ರಾಧ್ಯಾಪಕರು, ವಿಮರ್ಶಕರು ಆಗಿರುವ ನಾಗಣ್ಣನವರ ಅಂಕಣ ಬರಹಗಳು ಅವರ ಸದಭಿರುಚಿಯ, ಸಮಾಜದ ಸ್ವಾಸ್ಥ್ಯದ ಬಗ್ಗೆ ಇರುವ ಕಳಕಳಿಯ ನಿದರ್ಶನಗಳಾಗಿವೆ. ಈ ಸಂಕಲನದ ಬರಹಗಳಲ್ಲಿ ಸಮಕಾಲೀನ ರಾಜಕೀಯ, ಜಾಗತಿಕ ಸಾಹಿತ್ಯ, ಸದ್ಯದ ಸಾಮಾಜಿಕ ಸಮಸ್ಯೆಗಳು, ಜಗತ್ತಿನ ಪ್ರಮುಖ ವಿಚಾರಧಾರೆಗಳು ಹೀಗೆ ಬೆರಗು ಹುಟ್ಟಿಸುವ ವಿಷಯ ವ್ಯಾಪ್ತಿ ಇದೆ. ತೊಡಕಿಲ್ಲದ ಭಾಷೆಯಲ್ಲಿ, ಗೊಂದಲಕ್ಕೆ ಅವಕಾಶವಿರದ ರೀತಿಯಲ್ಲಿ ನಾಗಣ್ಣನವರು ತಮ್ಮ ನಿಲುವು, ಒಲವುಗಳನ್ನು ವ್ಯಕ್ತಪಡಿಸುತ್ತಾರೆ. ಈ ಲೇಖನಗಳನ್ನು ಅವು ಪ್ರಕಟವಾದ ದಿನವೇ ಪ್ರತಿಕ್ರಿಯೆ ಇತರ ಸುದ್ಧಿಗಳ ಜೊತೆಯಲ್ಲಿ ಓದುವುದು ಒಂದು ಬಗೆಯ ಅನುಭವವಾದರೆ ಹೀಗೆ ಪುಸ್ತಕ ರೂಪದಲ್ಲಿ ಅವನ್ನೇ ಗಮನವಿಟ್ಟು ಓದುವಾಗ ಕಳೆದ ವರ್ಷದ ಇತಿಹಾಸದ ಮುಖ್ಯ ಸಂಗತಿಗಳನ್ನು ಸೂಕ್ಷ್ಮ ಪ್ರಜ್ಞೆಯೊಂದರ ಜೊತೆಯಲ್ಲಿ ಮತ್ತೆ ಅವಲೋಕಿಸಿದ ಹಾಗಾಗುತ್ತದೆ. ಸರ್ವಜನಕ್ಕೆ ಹಿತವಾದ ಸಮಾಜವನ್ನು ರೂಪಿಸುವಲ್ಲಿ ಇಂಥ ಬರಹಗಳಿಗೆ ಮಹತ್ವವಿದೆ ಎಂದು ನಾಗಭೂಷಣ ಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About the Author

ಸಿ. ನಾಗಣ್ಣ

ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...

READ MORE

Related Books