ಒರೆಗಲ್ಲು

Author : ರಘುಶಂಖ ಭಾತಂಬ್ರಾ

Pages 208

₹ 150.00




Year of Publication: 2020
Published by: ಪ್ರಿಯದರ್ಶಿನಿ ಪ್ರಕಾಶನ
Address: #138, 7ನೇ, 'ಸಿ’ ಮೈನ್ ಹಂಪಿನಗರ, ಬೆಂಗಳೂರು
Phone: 9916424411

Synopsys

`ಒರೆಗಲ್ಲು’ ಕೃತಿಯು ರಘುಶಂಖ ಭಾತಂಬ್ರಾ ಅವರ ವಿಮರ್ಶಾ ಲೇಖನಸಂಕಲನವಾಗಿದೆ. ಕಲ್ಯಾಣರಾವ ಜಿ. ಪಾಟೀಲ ಅವರು, ಎರಡು ಕೃತಿಗಳು ನಾಡಿನ ಸಾಹಿತ್ಯಕ, ಸಾಂಸ್ಕೃತಿಕ ಸ್ಥಿತಿಗತಿಗೆ ಕನ್ನಡಿ ಹಿಡಿದಂತಿವೆ. ಪ್ರಸಕ್ತ ಕಾಲಮಾನಕ್ಕೆ ಅತ್ಯಗತ್ಯವಾಗಿರುವ ಅನ್ಯಜ್ಞಾನ ಶಿಸ್ತುಗಳ ಓದಿಗೆ, ಬಹುಮುಖಿ ಆಕರಗಳಾಗಿ ಪರಿಣಮಿಸಿವೆ. ಲೇಖಕರ ವಿಶಿಷ್ಟ ವಸ್ತುವಿನ್ಯಾಸ, ವಸ್ತುನಿಷ್ಠ ವಿಷಯ ವಿಶ್ಲೇಷಣೆ, ಸಂಯಮಪೂರ್ಣ ಬರವಣಿಗೆ, ಸಮಚಿತ್ತದ ನಿರೂಪಣೆಗಳಿಂದ ಈ ಎರಡೂ ಬೃಹತ್ ಕೃತಿಗಳು ನಾಡಿನಾದ್ಯಂತ ಪ್ರಬುದ್ಧ ಓದುಗರ ಗಮನ ಸೆಳೆದಿವೆ. ಈಗ ಪ್ರಕಟಿಸುತ್ತಿರುವ 'ಒರೆಗಲ್ಲು' ಎಂಬ ವಿಮರ್ಶಾ ಲೇಖನಗಳ ಸಂಗ್ರಹ ಕೃತಿಯು ಡಾ. ರಘುನಾಥ ಅವರ ಸ್ಪಷ್ಟ ಆಲೋಚನಾ ವಿಧಾನಕ್ಕೆ, ವೈಚಾರಿಕ ವಿಚಾರಧಾರೆಯ ಬದ್ಧತೆಗೆ ಮತ್ತು ನಿಷ್ಪಕ್ಷಪಾತ ಪಕ್ವ ಬರವಣಿಗೆಯ ಗತಿಗೆ ನಿದರ್ಶನವಾಗಿದೆ. ಈ ಕೃತಿಯಲ್ಲಿರುವ 25 ಲೇಖನಗಳಲ್ಲಿ ಮೂರಾಲ್ಕನ್ನು ಹೊರತುಪಡಿಸಿದರೆ, ಉಳಿದ/ಬಹುತೇಕ ಲೇಖನಗಳು ಬೀದರ ಭಾಗದ ಸಾಹಿತ್ಯ ಕೃತಿಗಳ ಸಮಾಲೋಚನಗಳಾಗಿವೆ. ಇದರಲ್ಲಿ 1. ಡಾ. ಎಸ್. ವಿದ್ಯಾಶಂಕರ ಅವರ ವಿಮರ್ಶೆಯ ಮರುವಿಮರ್ಶೆ, ಡಾ. ಸತೀಶಕುಮಾರ ಹೊಸಮನಿಯವರ ಗ್ರಂಥಾಲಯ ಸಂದರ್ಭ ಸೇವೆಯ ಅನನ್ಯತೆ ಮತ್ತು ವೈಶಿಷ್ಟ್ಯ, ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ 'ಬಸವ ತತ್ತ್ವಗಳ ಆಚರಣೆ ಮತ್ತು ನಾವು', ಹಾಗೂ 'ಬಸವ ಚಿಂತನ', ಶಂಭುಲಿಂಗ ವಾಲ್ಗೊಡ್ಡಿಯವರ 'ಮಹಾತಾಯಿ' ಕಾವ್ಯಾತ್ಮಕ ಶೈಲಿಯ ಒಡಲ್ಗವಿತೆ, ಡಾ. ದಂಡೆಯವರ 'ಸ್ಮಾರಕಗಳು': ಮುತ್ತಿನ ದಂಡೆ, ಪ್ರೊ. ಸೂಗಯ್ಯ ಹಿರೇಮಠರ 'ಸಂಪಾದನಾ ಸಾಹಿತ್ಯ', ದೇಶಾಂಶ ಹುಡಗಿಯವರ 'ಮುಕ್ತಿ ಸಂಗ್ರಾಮದ ಮೌಕ್ತಿಕಗಳು', ವಿರೂಪಾಕ್ಷಯ್ಯ ಸ್ವಾಮಿ ಗೋರಟಾರವರ 'ಹೈದ್ರಾಬಾದ ಕರ್ನಾಟಕದ ಜಲಿಯನ್ ವಾಲಾಬಾಗ್‌', ಗೋರಟಾ, ಡಾ. ಜಯಶ್ರೀ ದಂಡೆಯವರ ಕೆಲವು ಕೃತಿಗಳ ವಿವೇಚನೆ, ಡಾ. ಮಲ್ಲಿಕಾರ್ಜುನ ಆಮ್ಲಯವರ 'ಆಧುನಿಕ ಸಾಹಿತ್ಯದಲ್ಲಿ ಬಸವಣ್ಣ', ಸೂರ್ಯಕಾಂತ ನಿನ್ನೇಕರ್‌ 'ಸಮಗಾರ ಹರಳಯ್ಯ' ಚರಿತ್ರೆಯ ಸುತ್ತಮುತ್ತ, ಶ್ರೀಮತಿ ರತ್ನಾ ಕಾಳೇಗೌಡರ 'ಒಂದು ಪೆಗ್‌ನೊಳಗೆ ತೂರಾಡುತ್ತ'.... ಇಂದ್ರಕುಮಾರ ಎಚ್.ಬಿ.ಯವಯರ ಸದ್ವಿವೇಕ ಚಿಂತನೆಯ 'ಆ ಮುಖ', ಎಸ್‌.ಎಂ. ಜನವಾಡಕರ್‌ ಕಥೆಗಳ ಹಂದರದಲ್ಲಿ 'ಬಣ್ಣದ ಬದುಕು', ಇವು ಗದ್ಯಾವಲೋಕನದ ಹದಿನೈದು ಲೇಖನಗಳಾಗಿವೆ. ಒಟ್ಟಿನಲ್ಲಿ ಈ ‘ಒರೆಗಲ್ಲು’ ಕೃತಿಯುದ್ದಕ್ಕೂ ಲೇಖಕರ ಸಶಕ್ತ ಶಬ್ಧ ಶಂಯೋಜನೆ, ವ್ಯವಸ್ಥಿತ ವಾಕ್ಯ ರಚನಾ ವಿನ್ಯಾಸ, ಸಂಯಮ ಮನೋಸ್ಥಿತಿಯ ವಿವೇಚನೆ, ಸಾವಧಾನದ ನಿರೂಪಣೆ, ನಿಖರ ಮೌಲ್ಯವಿವೇಚನೆ ಎದ್ದು ಕಾಣುತ್ತದೆ. ಬೀದರ ಗಡಿಭಾಗದ, ಗ್ರಾಮೀಣ ಪ್ರದೇಶದಲ್ಲಿ ತಣ್ಣಗೆ ಕುಳಿತು ಮಹತ್ವದ ಹೊತ್ತಿಗೆಗಳನ್ನು ಒರೆಗಲ್ಲಿಗೆ ಹಚ್ಚಿ ‘ನಿಕಷ’ಕ್ಕೆ ಒಳಪಡಿಸುತ್ತಿರುವ ಡಾ. ರಘುನಾಥ ಅವರ ಮಣಹ ಶ್ಲಾಘನೀಯವಾಗಿದೆ ಎಂದಿದ್ದಾರೆ.

About the Author

ರಘುಶಂಖ ಭಾತಂಬ್ರಾ
(01 January 1970)

“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ  ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್;  ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...

READ MORE

Related Books