ಗಾಳಿ ಗಮಲು

Author : ಮಂಜುನಾಥ ಎಂ. ಅದ್ದೆ

Pages 254

₹ 250.00




Year of Publication: 2010
Published by: ಕಿಕ್ಕೇರಿ ಪಬ್ಲಿಕೇಷನ್ಸ್
Address: ನಂ-618, 9ನೇ ಡಿ.ಮುಖ್ಯರಸ್ತೆ, ಆರ್.ಪಿ.ಸಿ ಲೇಔಟ್, ಹಂಪಿನಗರ್, ಬೆಂಗಳೂರು-560104
Phone: 9449800858

Synopsys

ಮಂಜುನಾಥ ಎಂ. ಅದ್ದೆ ಅವರು ಅಗ್ನಿ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ಗಾಳಿ- ಗಮಲು’  ಅಂಕಣದ ಬರಹಗಳನ್ನು ಈ ಪುಸ್ತಕದಲ್ಲಿ ಸಂಕಲಿಸಿದ್ದಾರೆ. ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ವ್ಯಕ್ತಿಗಳ, ರಾಜಕಾರಣಿಗಳ, ಕಲಾವಿದರ, ವಿಭಿನ್ನ ವಿಚಾರಗಳ ಕುರಿತು ವಿಶೇಷವಾಗಿ ಬರೆಯುತ್ತಿದ್ದ ಮಂಜುನಾಥ ಎಂ. ಅದ್ದೆಯವರ ಅಂಕಣಬರಹಗಳು ಈ ಕೃತಿಯಲ್ಲಿವೆ. ತಮ್ಮ ವಿಭಿನ್ನ ಶೈಲಿಯ ಬರಹದಿಂದ ಓದುಗರನ್ನು ಸೆಳೆವ ಮಂಜುನಾಥ್ ಅದ್ದೆಯವರು ಈ ಕೃತಿಯಲ್ಲಿ ನೀಡಿರುವ ಲೇಖನಗಳು ಮಾಹಿತಿಯೊಂದಿಗೆ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ. ಈ ಕೃತಿಗೆ 2010ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 

About the Author

ಮಂಜುನಾಥ ಎಂ. ಅದ್ದೆ
(22 July 1973)

ಪತ್ರಿಕೋದ್ಯಮ, ಸಾಹಿತ್ಯ, ಹೋರಾಟ- ಈ ಮೂರೂ ದೋಣಿಗಳಲ್ಲಿ ಪಯಣಿಸುತ್ತಿರುವ ಮಂಜುನಾಥ ಅದ್ದೆ ಅವರದ್ದು ಪ್ರತಿಭಾವಂತ ವ್ಯಕ್ತಿತ್ವ. ಬೆಂಗಳೂರು ಉತ್ತರ ತಾಲ್ಲೂಕಿನ ಅದ್ದೆ ಗ್ರಾಮದವರಾದ ಮಂಜುನಾಥ್ ಮೂಲತಃ ಕೃಷಿಕ ಕುಟುಂಬಕ್ಕ ಸೇರಿದವರು. 1973ರ ನಡುಭಾಗದಲ್ಲಿ ಹುಟ್ಟಿದ ಮಂಜುನಾಥ್ ಅವರ ತಂದೆ ಮುನಿಹನುಮಯ್ಯ, ತಾಯಿ-ಲಕ್ಷ್ಮಮ್ಮ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ನಂತರ ಬದುಕಿನ ಮಾರ್ಗದ ಬಗ್ಗೆ ಅವರಿಗೆ ಗೊಂದಲಗಳೇ ಇರಲಿಲ್ಲ. ದೊಡ್ಡಬಳ್ಳಾಪುರದ ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಈ ಹೊತ್ತಿಗಾಗಲೇ ಸಮಾಜಮುಖಿ ಚಳವಳಿ, ಹೋರಾಟಗಳಲ್ಲಿ ತೊಡಗಿಕೊಂಡಿದ್ದ ಮಂಜುನಾಥ್ ಅದ್ದೆ ಹಲವು ಸಂಸ್ಥೆಗಳನ್ನು ಹುಟ್ಟುಹಾಕಿದ್ದರು. ತನ್ನೊಳಗಿನ ...

READ MORE

Awards & Recognitions

Related Books