
'ಆರ್ಯಕೀರ್ತಿ’ ದ್ವಿತೀಯ ಕಂಡ ಛತ್ರಪತಿ ಶಿವಾಜಿ ಕೃತಿಯು ಚ. ವಾಸುದೇವಯ್ಯ ಅವರ ವ್ಯಕ್ತಿಚಿತ್ರಣವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ‘ಆರ್ಯಕೀರ್ತಿ'ಯ ಈ ದ್ವಿತೀಯ ಖಂಡವು ಇಪ್ಪತ್ತೇಳು ವರ್ಷ ಗಳ ಹಿ೦ದೆ ಅಚ್ಚಾಯಿತು. ವಿದ್ಯಾಭ್ಯಾಸದ ಇಲಾಖೆಯ ಅಧಿಕಾರಿಗಳು ಇದನ್ನು 1925-26ನೆಯ ಸ್ಕೂಲ್ ಫೈನಲ್ ಪರೀಕ್ಷೆಗೆ ಪಠ್ಯ ಪುಸ್ತಕ ನನ್ನಾಗಿ ನೇಮಿಸಿದುದರಿಂದ ಇದರ ಪುನರ್ಮುದ್ರಣಕ್ಕೆ ಅವಕಾಶ ವಾಯಿತು. ಅನೇಕ ಮಂದಿ ಪಂಡಿತರು ಆಂಗ್ಲೀಯ ಭಾಷೆಯಲ್ಲಿಯೂ ದೇಶ ಭಾಷೆಗಳಲ್ಲಿಯೂ ಛತ್ರಪತಿ ಶಿವಾಜಿಯ ಜೀವನ ಚರಿತ್ರೆಯನ್ನು ಬರೆ ದಿದ್ದಾರೆ. ದಿವಂಗತರಾದ ಮಹಾದೇವ ಗೋವಿಂದ ರಾನಡೆಯವರೂ ಮ.ರಾಃ ಶ್ರೀ ಕೃ. ಅ. ಕಳಸಕರರ, ವಿ. ಸಿ.ವಿ. ರ್ಕಿಕೇಡ್ ಅವರೂ ರಚಿಸಿರುವ ಗ್ರಂಥಗಳ ಸಹಾಯದಿಂದ ನಾನು ಈ ಸಣ್ಣ ಪುಸ್ತಕ ವನ್ನು ಪರಿಷ್ಕರಿಸಿ, ಕಥಾನಾಯಕನ ವಿಷಯದಲ್ಲಿ ತಿಳಿಯಬೇಕಾದ ಕೆಲವು ವಿಶೇಷಾಂಶಗಳನ್ನು ಸೇರಿಸಿ, ಅಲ್ಲಲ್ಲಿ ಭಾಷೆಯನ್ನೂ ಪರಿವರ್ತಿಸಿ, ಈ ಸಾರಿ ಅಚ್ಚು ಹಾಕಿಸಿದ್ದೇನೆ. ಮೊದಲನೆಯ ಪ್ರಕರಣದಲ್ಲಿ ಹೇಳಿರುವ ಸಂಗತಿ ಗಳನ್ನು ವಿ: ವಿ. ಎ. ಸ್ಮಿತ್ ಅವರ ಚರಿತ್ರೆಯಿಂದ ತೆಗೆದುಕೊಂಡಿದ್ದೇನೆ ಎನ್ನುತ್ತಾರೆ ಇಲ್ಲಿ ಲೇಖಕ
©2025 Book Brahma Private Limited.