
ವೃತ್ತಿಯಲ್ಲಿ ವೈದ್ಯರಾದರೂ, ಪ್ರವೃತ್ತಿಯಲ್ಲಿ ಲೇಖಕಿಯಾಗಿರುವ ಡಾ.ಕೆ.ಎಸ್.ಚೈತ್ರಾ ಅವರ ಮಕ್ಕಳ ಕಥಾಸಂಕಲನ ಜೋ ಜೋ..ಜೋಕಾಲಿ!. ಜಾನಪದ ಲೋಕದಲ್ಲೊಂದು ಸುತ್ತು ಎಂಬ ಉಪಶೀರ್ಷಿಕೆಯನ್ನು ಈ ಕೃತಿ ಹೊಂದಿದೆ. ಇಲ್ಲಿ ಮೂವತ್ತೆಂಟು ಪುಟ್ಟ ಪುಟ್ಟ ಕತೆಗಳಿವೆ. ಒಂದೊ0ದು ಕತೆಯೂ ಒಂದೊ0ದು ದೇಶದ್ದು, ವಿಭಿನ್ನವಾದ ಪರಿಸರದಿಂದ ಆಯ್ದುಕೊಂಡುದು. ಹಾಗಾಗಿ ಇವು ಕೇವಲ ಕತೆಗಳಾಗದೆ ನಾನಾ ಬಗೆಯ ಜೀವನ ವಿಧಾನಗಳ ಹೊಳಹುಗಳನ್ನು ಕತೆಯ ಹಂಬಲದಲ್ಲಿ ನಮಗೆ ತಲುಪಿಸುತ್ತವೆ.ಈ ಲೇಖನ ಸಂಕಲನಕ್ಕೆ ಲೇಖಕ ಆನಂದ ಪಾಟೀಲ ಅವರು ಮುನ್ನುಡಿ ಬರೆದಿದ್ದಾರೆ..
©2025 Book Brahma Private Limited.