
ಡಾ. ಟಿ.ಎಲ್. ದೇವರಾಜ ಅವರು ಪ್ರಸಿದ್ಧ ಆಯುರ್ವೇದ ವೈದ್ಯರು. ಆಯುಷ್ ಉಪನಿರ್ದೇಶಕರಾಗಿ ನಿವೃತ್ತಿ ಹೊಂದಿರುವ ಟಿ.ಎಲ್. ದೇವರಾಜ್, ಆಯುರ್ವೇದಕ್ಕೆ ಸಂಬಂಧಿಸಿದಂತೆ ಸೂಕ್ತ ಮಾಹಿತಿ, ಚಿಕಿತ್ಸಾ ವಿಧಾನ, ಪಂಚಕರ್ಮ ಚಿಕಿತ್ಸಾ ಪದ್ಧತಿ, ಸಂಪೂರ್ಣ ಆರೋಗ್ಯ, ಪ್ರಸೂತಿ ತಂತ್ರ, ಸ್ತ್ರೀ ರೋಗಗಳು, ಬಾಲ ರೋಗಗಳು, ಕುಟುಂಬ ನಿಯಂತ್ರಣ ಸೇರಿದಂತೆ ಸುಮಾರು 45ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಈ ಪೈಕಿ 2 ಕೃತಿಗಳು ರಷ್ಯಾ ಭಾಷೆಗೆ ಹಾಗೂ 1 ಕೃತಿಯು ಸ್ಪ್ಯಾನಿಷ್ ಭಾಷೆಗೆ ಅನುವಾದಗೊಂಡಿದೆ.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಇವರ ವೈದ್ಯ ಸೇವೆಗೆ ರಾಷ್ಟ್ರಪತಿಗಳು ಸೇರಿದಂತೆ ರಾಜ್ಯ ಸರ್ಕಾರವು ಗೌರವಿಸಿದೆ. ಅಂತಾರಾಷ್ಟ್ರೀಯ ಸೇವೆಗಾಗಿಯೂ ಹಲವು ಪ್ರಶಸ್ತಿಗಳು ಪಡೆದಿದ್ದಾರೆ. ಬೆಂಗಳೂರಿನ ಶ್ರೀ ವೈದ್ಯನಾಥ ಆಯುರ್ವೇದ ಭವನದಲ್ಲಿ ಇವರು ಕಳೆದ 22 ವರ್ಷಗಳಿಂದ ಉಚಿತವಾಗಿ ಸಲಹೆಗಳನ್ನು ನೀಡುವ ಮೂಲಕ ರೋಗಿಗಳ ಸೇವೆ ಮಾಡುತ್ತಿದ್ದಾರೆ. ಇವರ ಬದುಕು ಬರೆಹ ಕುರಿತ ಕೃತಿ ಇದು.
©2025 Book Brahma Private Limited.