ಸುಧರ್ಮಾ

Author : ಕೂಡ್ಲಿ ಗುರುರಾಜ

Pages 90

₹ 80.00
Year of Publication: 2022
Published by: ಜಯತೀರ್ಥ ಪಬ್ಲಿಕೇಷನ್ಸ್
Address: #4/1, (old#10), ದತ್ತಾತ್ರೇಯ ರಸ್ತೆ, ಘಾಂಧಿ ಬಜಾರ್, ಬಸವನಗುಡಿ, ಬೆಂಗಳೂರು- 560004
Phone: 93433 81815

Synopsys

ಲೇಖಕ ಕೂಡ್ಲಿ ಗುರುರಾಜ ಅವರ ಸಂಪಾದಿತ ಪುಸ್ತಕ ಸುಧರ್ಮಾ. ಐದು ದಶಕ ಕಂಡ ಜಗತ್ತಿನ ಏಕೈಕ ಸಂಸ್ಕೃತ ದಿನಪತ್ರಿಕೆ. ಪಾರಂಪರಿಕ ನಗರಿ ಮೈಸೂರಿನ ಹೆಮ್ಮೆಯ ಸಂಗತಿಗಳಲ್ಲಿ ಸುಧರ್ಮಾ ಕೂಡ ಒಂದು. ಭಾರತೀಯ ಸಂಸ್ಕೃ ತ ಪತ್ರಿಕೋದ್ಯಮದಲ್ಲಿ ಸುಧರ್ಮಾ ಒಂದು ಕ್ರಾಂತಿಕಾರಕ ಹೆಜ್ಜೆ. ಪ್ರಚಲಿತ ವಿದ್ಯಮಾನಗಳ ಮಾಹಿತಿಯನ್ನು ಸಂಸ್ಕೃತ ಭಾಷೆಯಲ್ಲೂ ಪರಿಣಾಮಕಾರಿಯಾಗಿ ಬರೆದು ಓದುಗರೊಂದಿಗೆ ಸಂವಹನ ನಡೆಸಬಹುದು ಎಂದು ತೋರಿಸಿ ಕೊಡುವುದೇ ಈ ಪತ್ರಿಕೆಯ ಸಂಸ್ಥಾಪಕರಾದ ಪಂಡಿತ ಕಳಲೆ ನಡಾದೂರ್ ವರದರಾಜ ಅಯ್ಯಂಗಾರ್ ಅವರ ಉದ್ದೇಶವಾಗಿತ್ತು. ಅದರಲ್ಲಿ ಅವರು ಸಫಲರಾದರು. ವರದರಾಜ ಅಯ್ಯಂಗಾರ್ ಬದುಕಿದ್ದರೆ ಅವರಿಗೆ 101 ವರ್ಷವಾಗಿರುತ್ತಿತ್ತು. ಈ ಪುಸ್ತಕ ಒಂದು ರೀತಿ Making of Sudharma ಇದ್ದಂತೆ. ಸುಧರ್ಮಾ ಹುಟ್ಟು, ಬೆಳವಣಿಗೆ ಏಳು- ಬೀಳುಗಳು, ಸಂಸ್ಕೃತ ಭಾಷೆಯ ಪ್ರಚಾರದಲ್ಲಿ ಸುಧರ್ಮಾ ಪಾತ್ರ ಎಲ್ಲವನ್ನೂ ಈ ಕೃತಿಯಲ್ಲಿ ದಾಖಲಿಸಿದ್ದೇನೆ. ಭಾರತೀಯ ಸಂಸ್ಕೃತ ಪತ್ರಿಕೋದ್ಯಮದ ಹುಟ್ಟು, ಬೆಳವಣಿಗೆಯನ್ನು ಚಿತ್ರಿಸಿದ್ದೇನೆ. ಸುಧರ್ಮಾ ಹಾಗೂ ಭಾರತೀಯ ಸಂಸ್ಕೃತ ಪತ್ರಿಕೋದ್ಯಮ ಕುರಿತು ಕನ್ನಡದಲ್ಲಿ ಪ್ರಕಟವಾದ ಮೊದಲ ಕೃತಿ ಇದು. ಶಾಲಾ-ಕಾಲೇಜಿನಲ್ಲಿ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ನಾನು ವ್ಯಾಸಂಗ ಮಾಡಿದ್ದೇ ಈ ಕೃತಿ ಬರೆಯಲು ಮೂಲ ಪ್ರೇರಣೆ ಎಂದು ಲೇಖಕರೇ ತಿಳಿಸಿದ್ದಾರೆ.

About the Author

ಕೂಡ್ಲಿ ಗುರುರಾಜ

ಲೇಖಕ-ಪತ್ರಕರ್ತ ಕೂಡ್ಲಿ ಗುರುರಾಜ ಅವರು ಕನ್ನಡಪ್ರಭ, ವಿಜಯಕರ್ನಾಟಕ ದಿನಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ರಿಲಿಸಿದ್ದು, ರಾಜಕೀಯ ವಿಶ್ಲೇಷಕರು. ಕರ್ನಾಟಕ ಮಾಧ್ಯಮ (2012-13) ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪುರಸ್ಕೃತರು. ಕಲಬುರ್ಗಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರು.   ಕೃತಿಗಳು: ಪತ್ರಿಕಾ ಮಾಧ್ಯಮದ ವಾಣಿಜ್ಯಿಕ  ಆಯಾಮಗಳು (ಕರ್ನಾಟಕ ಮಾಧ್ಯಮ ಅಕಾಡೆಮಿಯ 2019ನೇ ಸಾಲಿನ ಮಾಧ್ಯಮಿಕ ಪ್ರಶಸ್ತಿ ಲಭಿಸಿದೆ.) , ಸುದ್ದಿ ಬರಹ ಮತ್ತು ವರದಿಗಾರಿಕೆ,  ...

READ MORE

Related Books